ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಳೆಯಾರ್ಭಟ ಜೋರಾಗಿದೆ. ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ದ್ವಾರಕಾ ಸೆಕ್ಟರ್ನಲ್ಲಿ ಕಾರ್ವೊಂದು ದಿಢೀರ್ ಆಗಿ ಕುಸಿದು ಬಿದ್ದಿರುವ ಘಟನೆ ನಡೆಯಿತು.
ಸಂಚಾರದ ವೇಳೆ ದಿಢೀರ್ ಕುಸಿದ ರಸ್ತೆ; ನವದೆಹಲಿಯಲ್ಲಿ ಹೊಂಡ ಸೇರಿದ ಕಾರು- ವಿಡಿಯೋ - ದೆಹಲಿಯಲ್ಲಿ ಮಳೆ
ರಸ್ತೆಯಲ್ಲಿ ಚಲಿಸುತ್ತಿದ್ದ ಕಾರ್ವೊಂದು ದಿಢೀರ್ ಆಗಿ ಕುಸಿದಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಈ ವೇಳೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಕಳೆದ ಕೆಲ ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ಕೆಲವೊಂದು ಪ್ರದೇಶ ಹಾಗೂ ರಸ್ತೆಗಳು ನೀರಿನಿಂದ ಜಲಾವೃತಗೊಂಡಿವೆ. ಹೀಗಾಗಿ ವಾಹನ ಸವಾರರು ಪರದಾಟ ನಡೆಸುತ್ತಿದ್ದಾರೆ. ದ್ವಾರಕಾ ಸೆಕ್ಟರ್-18ರಲ್ಲಿ ರಸ್ತೆ ಮೇಲೆ ಚಲಿಸುತ್ತಿದ್ದ ವಾಹನವೊಂದು ರಸ್ತೆ ಕುಸಿತದಿಂದ ದಿಢೀರ್ ಆಗಿ ಭೂಮಿಯೊಳಗೆ ಸಿಲುಕಿಕೊಂಡಿತು. ತಕ್ಷಣವೇ ರಕ್ಷಣಾ ಕಾರ್ಯಾಚರಣೆ ನಡೆಸಿ, ಕಾರು ಮೇಲೆತ್ತಲಾಗಿದೆ. ಹೀಗಾಗಿ ಯಾವುದೇ ರೀತಿಯ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: 45ಕ್ಕೂ ಹೆಚ್ಚು ದೇಶಗಳಿಂದ ಪೆಗಾಸಸ್ ಬಳಕೆ: ಭಾರತ ಮಾತ್ರ ಟಾರ್ಗೆಟ್ ಯಾಕೆ? ರವಿಶಂಕರ್ ಪ್ರಸಾದ್
ಪೊಲೀಸ್ ಕಾನ್ಸ್ಸ್ಟೇಬಲ್ ವಾಹನ ಚಲಾವಣೆ ಮಾಡಿಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಈ ಪ್ರದೇಶದಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ.