ಕರ್ನಾಟಕ

karnataka

ETV Bharat / bharat

ಭೀಕರ ಅಪಘಾತದಲ್ಲಿ ಹೊತ್ತಿ ಉರಿದ ಕಾರು; ದಂಪತಿ ಸೇರಿ ಮೂವರು ಸಜೀವ ದಹನ - ರಸ್ತೆ ಅಪಘಾತದಲ್ಲಿ ಮೂವರು ದುರ್ಮರಣ

ಟ್ರಕ್​-ಕಾರಿನ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಎಂಟು ವರ್ಷದ ಮಗು ಸೇರಿದಂತೆ ಮೂವರು ಸ್ಥಳದಲ್ಲೇ ಸಜೀವ ದಹನವಾಗಿರುವ ಘಟನೆ ಹರಿಯಾಣದ ಪಾಣಿಪತ್​ನಲ್ಲಿ ನಡೆದಿದೆ.

road accident in panipat
road accident in panipat

By

Published : Apr 15, 2022, 3:37 PM IST

ಪಾಣಿಪತ್​(ಹರಿಯಾಣ):ಪಾಣಿಪತ್​ನಲ್ಲಿ ಟ್ರಕ್​-ಕಾರು ಮುಖಾಮುಖಿ ಡಿಕ್ಕಿಯಾಗಿ ಕಾರಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ, ದಂಪತಿ ಸೇರಿದಂತೆ ಮೂವರು ಸ್ಥಳದಲ್ಲೇ ಸಜೀವ ದಹನವಾಗಿದ್ದಾರೆ. ಪಾಣಿಪತ್​​-ರೋಹ್ಟಕ್​​ ಹೆದ್ದಾರಿಯಲ್ಲಿ ದುರ್ಘಟನೆ ನಡೆದಿದೆ.

ಪಾಣಿಪತ್​​ನಿಂದ ಗೊಹಾನಾ ಕಡೆಗೆ ತೆರಳುತ್ತಿದ್ದ ಕಾರಿಗೆ ಇಸ್ರಾನಾ ಅನಾಜ್ ಮಂಡಿ ಬಳಿ ವೇಗವಾಗಿ ಬಂದ ಟ್ರಕ್​ ಡಿಕ್ಕಿ ಹೊಡೆದಿದೆ. ಈ ವೇಳೆ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, 8 ವರ್ಷದ ಮಗು ಸೇರಿ ದಂಪತಿ ಸಜೀವ ದಹನವಾಗಿದ್ದಾರೆ. ಕಾರು ಚಾಲಕ​ ಗಂಭೀರವಾಗಿ ಗಾಯಗೊಂಡಿದ್ದಾನೆ. ಇವರೆಲ್ಲರೂ ಕರ್ನಾಲ್​ನ ನಿವಾಸಿಗಳು ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಬಿಸಿಲ ಧಗೆಗೆ ಸಾಕುಪ್ರಾಣಿಗಳು ಕಂಗಾಲು; ಹರಿಯಾಣದಲ್ಲಿ ಎಮ್ಮೆಗಳಿಗೆ ಸ್ವಿಮ್ಮಿಂಗ್‌ಫೂಲ್‌ ನಿರ್ಮಾಣ

ಕರ್ನಾಲ್​ನ ಬಲ್ಲ ಗ್ರಾಮದ ಪ್ರತಾಪ್​ ವಾಯುಸೇನೆಯುಲ್ಲಿ ಫ್ಲೈಯಿಂಗ್​ ಆಫೀಸರ್​ ಆಗಿ ಈಗಾಗಲೇ ನಿವೃತ್ತರಾಗಿದ್ದಾರೆ. ಇವರಿಗೆ ಮೂವರು ಪುತ್ರರು ಮತ್ತು ಓರ್ವ ಪುತ್ರಿ ಇದ್ದಾರೆ. ಎಲ್ಲರಿಗೂ ಈಗಾಗಲೇ ಮದುವೆಯಾಗಿದೆ. ಪತ್ನಿ ಖಾಜಾಗೆ ಹೃದಯದಲ್ಲಿ ಸಮಸ್ಯೆ ಇದ್ದ ಕಾರಣ ಚಿಕಿತ್ಸೆಗೋಸ್ಕರ ಪಾಣಿಪತ್​ಗೆ ತೆರಳಬೇಕಾಗಿತ್ತು. ಅಲ್ಲಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಗಾಯಗೊಂಡಿರುವ ಡ್ರೈವರ್​​ ಜಗ್ಬೀರ್​ಗೆ ಚಿಕಿತ್ಸೆ ಮುಂದುವರೆದಿದೆ.

ABOUT THE AUTHOR

...view details