ಕರ್ನಾಟಕ

karnataka

ನಂಬಿಕೆ, ಭರವಸೆ ಕಳೆದುಕೊಳ್ಳಬೇಡಿ.. ಸಾವು ಬದುಕಿನ ಮಧ್ಯೆ ಹೋರಾಡ್ತಿರೋ ವರುಣ್​ ಸಿಂಗ್​ ಮನದಾಳವಿದು!

By

Published : Dec 10, 2021, 3:35 PM IST

ನೀವು ಸಾಧಾರಣ ವಿದ್ಯಾರ್ಥಿಯಾಗಿರಬಹುದು, ಅತ್ಯುತ್ತಮ ಅಂಕ ಗಳಿಸದೆಯೂ ಇರಬಹುದು. ಅದೇ ನಿಮ್ಮ ಸಾಮರ್ಥ್ಯವನ್ನು ಅಳೆಯುವ ಮಾನದಂಡವಲ್ಲ. ಅದಕ್ಕಿಂತಲೂ ಮಿಗಿಲಾದದು ನಿಮ್ಮಲ್ಲಿರುತ್ತದೆ. ಅದನ್ನು ಪ್ರಾಪ್ತಿ ಮಾಡಿಕೊಳ್ಳಲು ಹೆಚ್ಚಿನ ಶ್ರಮಪಡಬೇಕು. ನಿರಂತರ ಪ್ರಯತ್ನ ಜಾರಿಯಲ್ಲಿಡಿ.

capt varun singh
ವರುಣ್​ ಸಿಂಗ್​ರ ಮಾತುಗಳಿವು

ಕೊಯಮತ್ತೂರು:ಜೀವನದಲ್ಲಿ ನಂಬಿಕೆ, ಭರವಸೆ ಕಳೆದುಕೊಳ್ಳಬೇಡಿ.. ಯಾವುದೂ ಸುಲಭವಾಗಿ ಸಿಗುವುದಿಲ್ಲ.. ನಿಮ್ಮ ಪ್ರಯತ್ನ ನಿರಂತರ ಜಾರಿಯಲ್ಲಿರಲಿ. ನಿಮ್ಮಿಂದ ಇದು ಸಾಧ್ಯವಿಲ್ಲ ಅನ್ನೋ ಭಾವನೆ ಇರಕೂಡದು..!

ಇಂತಹ ಅದ್ಭುತ, ಪ್ರೇರಣಾದಾಯಕ ಸಾಲುಗಳು ನೊಂದ ಮನಸುಗಳಿಗೆ ಅದೆಷ್ಟು ಸಾಂತ್ವನ ಹೇಳುತ್ತವೆ. ಈ ಸಾಲುಗಳನ್ನು ಹೇಳಿದ ವ್ಯಕ್ತಿಯೇ ಇಂದು ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದಾರೆ.

ಹೌದು, ತಮಿಳುನಾಡಿನ ಕೂಳೂರಿನಲ್ಲಿ ನಡೆದ ಸೇನಾ ಹೆಲಿಕಾಪ್ಟರ್​ ದುರಂತದಲ್ಲಿ ಬದುಕುಳಿದಿರುವ ಗ್ರೂಪ್​ ಕ್ಯಾಪ್ಟನ್​ ವರುಣ್​ ಪ್ರತಾಪ್​ ಸಿಂಗ್​ ಅವರು ಈ ಹಿಂದೆ ತಾವು ವಿದ್ಯಾಭ್ಯಾಸ ಮಾಡಿದ ಶಾಲೆಯ ಪ್ರಾಂಶುಪಾಲರಿಗೆ ಬರೆದ ಪತ್ರದಲ್ಲಿ ಈ ಅದ್ಭುತ ಸಾಲುಗಳನ್ನು ಬರೆದಿದ್ದಾರೆ. ಈ ಪತ್ರವೀಗ ವೈರಲ್​ ಆಗಿ, ಅದರಲ್ಲಿನ ಅಂಶಗಳು ಚರ್ಚೆಗೆ ಗ್ರಾಸವಾಗಿವೆ.

ವರುಣ್​ ಸಿಂಗ್​ ಬರೆದ ಪತ್ರದಲ್ಲಿದೆ ಏನಿದೆ?

ಗ್ರೂಪ್​ ಕ್ಯಾಪ್ಟನ್​ ವರುಣ್​ ಸಿಂಗ್​ ಅವರು ಬರೆದ ಪತ್ರದಲ್ಲಿ ಶಿಕ್ಷಣದಲ್ಲಿ ಮಕ್ಕಳ ಸಾಧಾರಣ ಬುದ್ಧಿವಂತಿಕೆ, ಉತ್ಸಾಹ, ಅನುಕರಣೆ, ಬದುಕಿನ ಯಶಸ್ಸಿನ ಬಗ್ಗೆ ಚಿತ್ರಿಸಿದ್ದಾರೆ. ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕ ಮತ್ತು ಕಡಿಮೆ ಅಂಕ ಗಳಿಸಿದವರ ಬಗ್ಗೆ ಮಾತನಾಡಿದ್ದಾರೆ.

ತಾವು ಕೂಡ ಶಾಲಾ ಅವಧಿಯಲ್ಲಿ ಸಾಧಾರಣ ವಿದ್ಯಾರ್ಥಿಯಾಗಿದ್ದೆ. ನನಗೆ ಪಠ್ಯ ಮತ್ತು ಕ್ರೀಡೆಗಳಿಗಿಂತಲೂ ವಾಯುಯಾನ, ವಿಮಾನಗಳ ಬಗ್ಗೆ ತಿಳಿದುಕೊಳ್ಳುವ ಕೌತುಕತೆ ಇತ್ತು. ತಾವು ಹಲವಾರು ಏರ್​ಶೋಗಳಲ್ಲಿ ಶಾಲೆಯ ಪ್ರತಿನಿಧಿಯಾಗಿ ಭಾಗವಹಿಸಿದ್ದೆ. ಇಸ್ರೋದ ಗಗನಯಾನ​ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದೆ ಎಂದು ಬರೆದಿದ್ದಾರೆ.

ನೀವು ಸಾಧಾರಣ ವಿದ್ಯಾರ್ಥಿಯಾಗಿರಬಹುದು, ಅತ್ಯುತ್ತಮ ಅಂಕ ಗಳಿಸದೆಯೂ ಇರಬಹುದು. ಅದೇ ನಿಮ್ಮ ಸಾಮರ್ಥ್ಯವನ್ನು ಅಳೆಯುವ ಮಾನದಂಡವಲ್ಲ. ಅದಕ್ಕಿಂತಲೂ ಮಿಗಿಲಾದುದು ನಿಮ್ಮಲ್ಲಿರುತ್ತದೆ. ಅದನ್ನು ಪ್ರಾಪ್ತಿ ಮಾಡಿಕೊಳ್ಳಲು ಹೆಚ್ಚಿನ ಶ್ರಮಪಡಬೇಕು. ನಿರಂತರ ಪ್ರಯತ್ನ ಜಾರಿಯಲ್ಲಿಡಿ, ಯಶಸ್ಸಿನೆಡೆಗೆ ನಿಮ್ಮ ಯಾನ ಮುಂದುವರಿಸಿ ಎಂದು ಪ್ರೇರಣಾದಾಯಕ ಮಾತುಗಳನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಸೇನಾ ಹೆಲಿಕಾಪ್ಟರ್​ ದುರಂತದ ತನಿಖೆ: ಮಾಹಿತಿ ಇಲ್ಲದೇ ಊಹಾಪೋಹ ಹರಡಬೇಡಿ ಎಂದು IAF ಮನವಿ

ಮುಂದುವರಿದು, ತಮಗೆ 'ಶೌರ್ಯ ಚಕ್ರ' ಪ್ರಶಸ್ತಿ ಸಿಕ್ಕ ಬಗ್ಗೆಯೂ ಬರೆದಿರುವ ವರುಣ್​ ಸಿಂಗ್​, ಪ್ರಶಸ್ತಿ ಪಡೆದಿದ್ದರ ಬಗ್ಗೆ ಅಪಾರ ಹೆಮ್ಮೆ ಇದೆ. ಶಿಕ್ಷಕರು, ಅಧ್ಯಾಪಕರು ಮತ್ತು ಗೆಳೆಯರ ಸಹಾಯದಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಸ್ಮರಿಸಿಕೊಂಡಿದ್ದಾರೆ. ಹೆಲಿಕಾಪ್ಟರ್​ ದುರಂತದಲ್ಲಿ ವರುಣ್​ ಸಿಂಗ್​ ಅವರಿಗೆ ಶೇ.90 ರಷ್ಟು ಸುಟ್ಟ ಗಾಯವಾದ್ದರಿಂದ ತೀವ್ರ ನಿಗಾ ಘಟಕದಲ್ಲಿ ಬೆಂಗಳೂರಿನ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.

ABOUT THE AUTHOR

...view details