ನವದೆಹಲಿ :ಪಶ್ಚಿಮ ಬಂಗಾಳದ ಮೂವರು ಐಪಿಎಸ್ ಅಧಿಕಾರಿಗಳನ್ನು ಕೇಂದ್ರ ಸೇವೆಗಳಿಗೆ ನಿಯುಕ್ತಿಗೊಳಿಸಿ ಕೇಂದ್ರ ಸರ್ಕಾರ ನೀಡಿದ್ದ ಆದೇಶವನ್ನು ಮಮತಾ ಸರ್ಕಾರ ತಿರಸ್ಕರಿದ್ದು, ಅವರನ್ನು ಕಳಿಸಿಕೊಡಲು ಸಾಧ್ಯವಿಲ್ಲ ಎಂದಿದೆ.
ಮೂವರು ಐಪಿಎಸ್ ಅಧಿಕಾರಿಗಳಾದ ಭೋಲನಾಥ್ ಪಾಂಡೆ ( ಡೈಮಂಡ್ ಹಾರ್ಬರ್ ಎಸ್ಪಿ ), ರಾಜೀವ್ ಮಿಶ್ರಾ (ದಕ್ಷಿಣ ಬಂಗಾಳ ಎಡಿಜಿ ), ಮತ್ತು ಪ್ರವೀಣ್ ಕುಮಾರ್ ತ್ರಿಪಾಠಿ (ಪ್ರೆಸಿಡೆನ್ಸಿ ರೇಂಜ್ ಡಿಐಜಿ ) ಅವರನ್ನು ಕೇಂದ್ರ ಸೇವೆಗಳಿಗೆ ನಿಯಕ್ತಿಗೊಳಿಸಿ ಕೇಂದ್ರ ಗೃಹ ಸಚಿವಾಲಯ ನೀಡಿದ್ದ ಆದೇಶವನ್ನು ದೀದಿ ಸರ್ಕಾರ ತಿರಸ್ಕರಿಸಿದೆ. ಇದಕ್ಕೂ ಮೊದಲು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಬೆಂಗಾವಲು ವಾಹನ ಮೇಲೆ ದಾಳಿಯನ್ನು ಪ್ರಶ್ನಿಸಿ, ರಾಜ್ಯ ಸರ್ಕಾರ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಪ್ರಮುಖ ಅಧಿಕಾರಿಗಳಿಗೆ ಕೇಂದ್ರ ಗೃಹ ಸಚಿವಾಲಯದ ಮುಂದೆ ಹಾಜರಾಗುವಂತೆ ಸಮನ್ಸ್ ನೀಡಲಾಗಿತ್ತು. ಆ ಆದೇಶವನ್ನು ತಿರಸ್ಕರಿಸುವ ಮೂಲಕ ಬಂಗಾಳ ಸರ್ಕಾರ, ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿತ್ತು.