ಕರ್ನಾಟಕ

karnataka

ಬಕ್ರಿದ್ ಹಬ್ಬಕ್ಕೆ ಲಾಕ್​ಡೌನ್ ಸಡಿಲಿಕೆ ಬೇಡ: ಕೇರಳ ಸರ್ಕಾರಕ್ಕೆ ಐಎಂಎ ಎಚ್ಚರಿಕೆ

By

Published : Jul 18, 2021, 8:55 PM IST

ಕೇರಳ ಸರ್ಕಾರ ಭಾನುವಾರದಿಂದ ಮೂರು ದಿನಗಳ ಕಾಲ ಲಾಕ್​ಡೌನ್ ಸಡಿಲಿಕೆ ಮಾಡಿ, ಬಕ್ರಿದ್ ಹಬ್ಬವನ್ನು ಆಚರಿಸಲು ಅನುವು ಮಾಡಿಕೊಟ್ಟಿದ್ದು, ಕೂಡಲೇ ಆದೇಶವನ್ನು ಹಿಂಪಡೆಯಬೇಕೆಂದು ಐಎಂಎ ಒತ್ತಾಯಿಸಿದೆ.

Cancel Bakrid Relaxations Or Will Go To Court, Doctors' Body Tells Kerala
ಬಕ್ರಿದ್ ಹಬ್ಬಕ್ಕೆ ಲಾಕ್​ಡೌನ್ ಸಡಿಲಿಕೆ ಬೇಡ: ಕೇರಳ ಸರ್ಕಾರಕ್ಕೆ ಐಎಂಎ ಎಚ್ಚರಿಕೆ

ನವದೆಹಲಿ:ಕೊರೊನಾ ಸೋಂಕು ಹಾವಳಿ ಹಿನ್ನೆಲೆಯಲ್ಲಿ ಬಕ್ರಿದ್ ಹಬ್ಬಕ್ಕಾಗಿ ಘೋಷಿಸಿರುವ ಲಾಕ್​ಡೌನ್ ಸಡಿಲಿಕೆ ಆದೇಶವನ್ನು ರದ್ದುಪಡಿಸಬೇಕೆಂದು ಕೇರಳ ಸರ್ಕಾರಕ್ಕೆ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಎ) ಎಚ್ಚರಿಕೆ ನೀಡಿದೆ.

ಜನರ ಹಿತದೃಷ್ಟಿಯಿಂದ ಬಕ್ರಿದ್ ಹಬ್ಬವನ್ನು ಲಾಕ್​ಡೌನ್ ಸಡಿಲಿಕೆ ಆದೇಶವನ್ನು ರದ್ದು ಮಾಡದಿದ್ದರೆ, ಕೇರಳ ಸರ್ಕಾರದ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್​​ಗೆ ಮೊರೆಹೋಗುವುದಾಗಿ ಭಾರತೀಯವೈದ್ಯಕೀಯ ಸಂಘ ಸ್ಪಷ್ಟನೆ ನೀಡಿದೆ.

ಪ್ರಧಾನಿ ಮೋದಿಯವರು ಇತ್ತೀಚೆಗೆ ಸಭೆಯೊಂದನ್ನು ನಡೆಸಿ, ಕೇರಳ ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳು ಮತ್ತು ಸಾಮೂಹಿಕ ಸಭೆಗಳ ಕುರಿತು ಎಚ್ಚರಿಕೆ ನೀಡಿದ್ದರು. ಅನೇಕ ರಾಜ್ಯಗಳು ಯಾತ್ರೆಗಳನ್ನು ರದ್ದು ಮಾಡಿದ್ದವು.

ಆದರೆ ಕೇರಳ ಸರ್ಕಾರ ಮಾತ್ರ ಭಾನುವಾರದಿಂದ ಮೂರು ದಿನಗಳ ಕಾಲ ಲಾಕ್​ಡೌನ್ ಸಡಿಲಿಕೆ ಮಾಡಿ, ಬಕ್ರಿದ್ ಹಬ್ಬವನ್ನು ಆಚರಿಸಲು ಅನುವು ಮಾಡಿಕೊಟ್ಟಿದ್ದು, ಕೂಡಲೇ ಆದೇಶವನ್ನು ಹಿಂಪಡೆಯಬೇಕೆಂದು ಐಎಂಎ ಒತ್ತಾಯಿಸಿದೆ.

ಕೇರಳ ಸರ್ಕಾರದ ಆದೇಶದಂತೆ ಬಟ್ಟೆ, ಪಾದರಕ್ಷೆಗಳು, ಆಭರಣಗಳು, ಉಡುಗೊರೆ ವಸ್ತುಗಳು, ಗೃಹೋಪಯೋಗಿ ವಸ್ತುಗಳು ಮತ್ತು ಎಲೆಕ್ಟ್ರಾನಿಕ್ಸ್ ಮಳಿಗೆಗಳನ್ನು ಮತ್ತು ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.

ಇದನ್ನೂ ಓದಿ: ಭಟ್ಕಳ: ಸಮುದ್ರದಲ್ಲಿ ಸಿಲುಕಿದ್ದ ಮೀನುಗಾರರ ರಕ್ಷಣೆ

ABOUT THE AUTHOR

...view details