ಕರ್ನಾಟಕ

karnataka

ETV Bharat / bharat

ಕಾಳಿದೇವಿ ಪೋಸ್ಟರ್‌ಗೆ ಕೆನಡಾ ಅಗಾಖಾನ್ ಮ್ಯೂಸಿಯಂ ಕ್ಷಮೆ; ಬೇಸರ ವ್ಯಕ್ತಪಡಿಸಿದ ಕನ್ನಡಿಗ ಸಂಸದ

ಕಾಳಿ ದೇವಿಯ ಕುರಿತು ವಿವಾದಾತ್ಮಕ ಪೋಸ್ಟರ್​ ಬಗ್ಗೆ ತೀವ್ರವಾದ ಆಕ್ಷೇಪ ವ್ಯಕ್ತವಾದ ಬಳಿಕ ಕೆನಡಾದ ಅಗಾಖಾನ್​ ಮ್ಯೂಸಿಯಂ ಕ್ಷಮೆ ಕೋರಿದೆ.

ಕಾಳಿ ದೇವಿ ವಿವಾದಕ್ಕೆ ಕ್ಷಮೆ ಕೋರಿದ ಕೆನಡಾ ಅಗಾಖಾನ್ ಮ್ಯೂಸಿಯಂ
ಕಾಳಿ ದೇವಿ ವಿವಾದಕ್ಕೆ ಕ್ಷಮೆ ಕೋರಿದ ಕೆನಡಾ ಅಗಾಖಾನ್ ಮ್ಯೂಸಿಯಂ

By

Published : Jul 6, 2022, 9:43 AM IST

Updated : Jul 6, 2022, 10:56 AM IST

ನವದೆಹಲಿ:ಕೆನಡಾ ನಿರ್ಮಾಪಕಿ ಲೀನಾ ಮಣೀಮೇಕಲೈ ಚಿತ್ರಿಸಿರುವ ವಿವಾದಾತ್ಮಕ ಕಾಳಿ ಪೋಸ್ಟರ್​ ಬಗ್ಗೆ ಭಾರತೀಯ ಹೈಕಮಿಷನರ್​ ದೂರು ಸಲ್ಲಿಸಿದ ಬಳಿಕ ಅಲ್ಲಿನ ಅಗಾಖಾನ್​ ಮ್ಯೂಸಿಯಂ ಈ ಕುರಿತು ಕ್ಷಮೆ ಯಾಚಿಸಿದೆ.

ಲೀನಾ ಮಣೀಮೇಕಲೈ ಅವರ ಸಾಕ್ಷ್ಯಚಿತ್ರದಲ್ಲಿ ಕಾಳಿ ದೇವಿ ಕೈಯಲ್ಲಿ ಸಿಗರೇಟ್​ ಹಿಡಿದಂತೆ ರೂಪಿಸಲಾಗಿದೆ. ಇದು ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತಂದಿದ್ದು, ವಿವಾದಿತ ಪೋಸ್ಟರ್​ ತೆಗೆದು ಹಾಕಬೇಕು ಎಂದು ಭಾರತೀಯ ಹೈಕಮಿಷನರ್​ ಕೆನಡಾ ಸರ್ಕಾರಕ್ಕೂ ದೂರು ಸಲ್ಲಿಸಿತ್ತು.

ಅಗಾಖಾನ್​ ಮ್ಯೂಸಿಯಂ ಪ್ರತಿಕ್ರಿಯಿಸಿ, "ಹಿಂದೂ ಮತ್ತು ಇತರ ಧರ್ಮಗಳ ಸಮುದಾಯಗಳ ನಂಬಿಕೆಗೆ ಧಕ್ಕೆ ತಂದಿದ್ದಕ್ಕೆ ತೀವ್ರ ವಿಷಾದವಿದೆ. "ಅಂಡರ್ ದಿ ಟೆಂಟ್"ನ 18 ಕಿರು ವಿಡಿಯೋಗಳಲ್ಲಿ ಒಂದಾದ ಕಾಳಿ ದೇವಿಯನ್ನು ತಪ್ಪಾಗಿ ಚಿತ್ರಿಸಿದ ಪೋಸ್ಟರ್​ ಹಿಂದೂ ಸಮುದಾಯಕ್ಕೆ ಘಾಸಿ ಮಾಡಿದೆ. ಈ ಬಗ್ಗೆ ಕ್ಷಮೆ ಕೋರುತ್ತೇವೆ" ಎಂದಿದೆ.

ಕನ್ನಡಿಗ ಸಂಸದ ಬೇಸರ:ಕೆನಡಾ ಸಂಸದರಾಗಿರುವ ಕರ್ನಾಟಕ ಮೂಲದ ಚಂದ್ರ ಆರ್ಯ ಅವರು ಪೋಸ್ಟರ್​ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. "ಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ಅವರ ಕಾಳಿ ಪೋಸ್ಟರ್ ನೋಡಿ ತುಂಬಾ ನೋವಾಗಿದೆ. ಕಳೆದ ಕೆಲವು ವರ್ಷಗಳಿಂದ ಕೆನಡಾದಲ್ಲಿ ಸಾಂಪ್ರದಾಯಿಕ ಹಿಂದೂ ವಿರೋಧಿ ಮತ್ತು ಭಾರತ ವಿರೋಧಿ ಗುಂಪುಗಳು ಸೇರಿಕೊಂಡು ಮಾಧ್ಯಮಗಳಲ್ಲಿ ಹಿಂದೂಫೋಬಿಕ್ ಲೇಖನಗಳು ಮತ್ತು ದೇವಾಲಯಗಳ ಮೇಲೆ ದಾಳಿ ನಡೆಸುತ್ತಿವೆ. ಇದರ ಪರಿಣಾಮವೇ ಕಾಳಿ ಪೋಸ್ಟರ್​" ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೇ, ಅಗಾಖಾನ್​​ ಮ್ಯೂಸಿಯಂ ಕ್ಷಮೆ ಕೇಳಿದ್ದು ಸ್ವಾಗತಾರ್ಹ ಮತ್ತು ಮೆಚ್ಚುಗೆಗೆ ಅರ್ಹ ಎಂದಿದ್ದಾರೆ.

ಇದನ್ನೂ ಓದಿ:ನೂಪುರ್ ಶರ್ಮಾ​ 'ಶಿರಚ್ಛೇದಕ್ಕೆ ಸುಪಾರಿ' ನೀಡಿದ್ದ ಅಜ್ಮೇರ್​ ದರ್ಗಾದ ಸಲ್ಮಾನ್​ ಚಿಸ್ತಿ ಬಂಧನ

Last Updated : Jul 6, 2022, 10:56 AM IST

ABOUT THE AUTHOR

...view details