ನವದೆಹಲಿ:ಮುಂಗಾರು ಋತು ಇತರ ಎಲ್ಲ ಋತುಗಳಿಗಿಂತ ಹೆಚ್ಚು ಇಷ್ಟವಾಗುವ ಋತುವಾಗಿದೆ. ಆದರೆ ಮುಂಗಾರಿನ ಋತುವಿನಲ್ಲಿ ಹಲವಾರು ಕಾಯಿಲೆ ಹಾಗೂ ಸೋಂಕುಗಳು ಸಹ ಮಹಿಳೆಯರಿಗೆ ಕಾಡುವ ಸಾಧ್ಯತೆಯಿರುತ್ತದೆ. "ಮಳೆಗಾಲದ ಸಮಯದಲ್ಲಿ ವಾತಾವರಣವು ಹಸಿ ಹಾಗೂ ಆರ್ದ್ರವಾಗಿರುವುದರಿಂದ ಸೂಕ್ಷ್ಮಾಣು ಜೀವಿಗಳ ಬೆಳವಣಿಗೆಗೆ ಈ ಸಮಯ ಬಹಳ ಸೂಕ್ತವಾಗಿರುತ್ತದೆ. ಹೀಗಾಗಿ ಮುಂಗಾರಿನಲ್ಲಿ ಯೋನಿಯ ಸೋಂಕು ಕಾಣಿಸಿಕೊಳ್ಳಬಹುದು. ಮಿಲನದ ನಂತರ ಯೋನಿಯ ಸ್ವಚ್ಛತೆಯನ್ನು ಕಾಪಾಡಿಕೊಳ್ಳದಿದ್ದಲ್ಲಿ ವೆಜಿನಲ್ ಕ್ಯಾಂಡಿಡಯಾಸಿಸ್ ಎಂದು ಕರೆಯಲಾಗುವ ಸೋಂಕು ತಗುಲಬಹುದು. ವೆಜಿನಲ್ ಕ್ಯಾಂಡಿಡಯಾಸಿಸ್ನಿಂದ ಉರಿಯೂತ, ಸೋರುವಿಕೆ ಮತ್ತು ವಿಪರೀತ ಕೆರೆತ ಉಂಟಾಗಬಹುದು. ಅಲ್ಲದೆ ಇದರಿಂದ ಫಲವತ್ತತೆಯೂ ಕಡಿಮೆಯಾಗಬಹುದು." ಎನ್ನುತ್ತಾರೆ ಮುಂಬೈನ ಪರೇಲ್ನಲ್ಲಿರುವ ಗ್ಲೋಬಲ್ ಹಾಸ್ಪಿಟಲ್ನ ಗೈನೆಕಾಲಜಿ ಕನ್ಸಲ್ಟಂಟ್ ಅನಘಾ ಛತ್ರಪತಿ.
"ಮಹಿಳೆಯರ ಯೋನಿ ಮತ್ತು ಸ್ತ್ರೀ ಜನನಾಂಗದ ಪ್ರದೇಶದಲ್ಲಿ ಕ್ಯಾಂಡಿಡಾ ಆಲ್ಬಿಕನ್ಸ್ (Candida albicans) ಎಂದು ಕರೆಯಲಾಗುವ ಯೀಸ್ಟ್ ಇರುತ್ತದೆ. ಇಮ್ಯುನೊ ಸಪ್ರೆಶನ್, ಡಯಾಬಿಟೀಸ್ ಅಥವಾ ಲೈಂಗಿಕ ಕ್ರಿಯೆಗಳ ಕಾರಣದಿಂದ ರೋಗನಿರೋಧಕ ಶಕ್ತಿ ಕಡಿಮೆಯಾದಾಗ ಇದು ಯೋನಿಯ ಗೋಡೆಯನ್ನು ಅಡ್ಡಿಪಡಿಸಬಹುದು ಮತ್ತು ಸೋಂಕುಗಳಿಗೆ ಕಾರಣವಾಗಬಹುದು. ಈ ಸೋಂಕು ತಗುಲಿದಾಗ ವಿಶೇಷವಾಗಿ ಪೆರಿನಿಯಮ್ನಲ್ಲಿ ವಿಪರೀತ ಕೆರೆತದಿಂದ ಕೂಡಿದ ಬಿಳಿ ಬಣ್ಣದ ಮೊಸರಿನಂಥ ಸ್ರವಿಕೆಯಾಗುತ್ತದೆ. ಇದು ಖಂಡಿತವಾಗಿಯೂ ಯೋನಿ ಮತ್ತು ಒಳ ತೊಡೆಗಳ ಮೇಲೆ ಪರಿಣಾಮ ಬೀರುತ್ತದೆ. ಸೌಮ್ಯವಾದ ಸೋಂಕಿದ್ದರೆ ತುರಿಕೆಯೊಂದಿಗೆ ಕನಿಷ್ಠ ಯೋನಿ ಸ್ರವಿಸುವಿಕೆ ಇರುತ್ತದೆ. ತೀವ್ರತರವಾದ ಪ್ರಕರಣಗಳಲ್ಲಿ, ಎಪಿತೀಲಿಯಲ್ ಹಾನಿಯಿಂದ ಹೊರಸೂಸುವಿಕೆ ಮತ್ತು ರಕ್ತಸ್ರಾವದೊಂದಿಗೆ ಹೆಚ್ಚು ಪ್ರಮಾಣದ ಬಿಳಿಯಾದ ಮೊಸರಿನ ರೀತಿಯ ಸ್ರವಿಸುವಿಕೆ ಇರುತ್ತದೆ. ಇದಕ್ಕೂ ಹೆಚ್ಚಿನ ಬ್ಯಾಕ್ಟೀರಿಯಾ ಸೋಂಕು ಉಂಟಾದಲ್ಲಿ ಅಹಿತಕರ ವಾಸನೆಗೆ ಕಾರಣವಾಗಬಹುದು. ಇದರಿಂದ ಸಂಭೋಗದ ಸಮಯದಲ್ಲಿ ನೋವು ಮತ್ತು ಮೂತ್ರನಾಳದಲ್ಲಿ ಉರಿಯ ಅನುಭವಕ್ಕೆ ಕಾರಣವಾಗಬಹುದು. ಮಾನ್ಸೂನ್‌ನಲ್ಲಿ ತೇವ ಮತ್ತು ಕೆಟ್ಟ ಹವಾಮಾನ ಪರಿಸ್ಥಿತಿಗಳಿಂದಾಗಿ ಮಹಿಳೆಯರು ಯೋನಿ ಸೋಂಕು, ವಿಶೇಷವಾಗಿ ಕ್ಯಾಂಡಿಡಿಯಾಸಿಸ್‌ಗೆ ಹೆಚ್ಚು ಒಳಗಾಗುತ್ತಾರೆ" ಎಂದು ಅನಘಾ ಹೇಳುತ್ತಾರೆ.
ಪ್ರಶ್ನೆ: ಮಳೆಗಾಲದಲ್ಲಿ ಇಂಥ ಸೋಂಕುಗಳು ಉಂಟಾಗದಂತೆ ನಾವು ಯಾವೆಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬಹುದು?