ಮಕ್ಕಳಿಗೆ ಕೋವಿಡ್ ಬಾರದಂತೆ ಹೇಗೆ ಎಚ್ಚರಿಕೆ ವಹಿಸಬೇಕು ಎಂಬುದರ ಬಗ್ಗೆ ಅಮೆರಿಕ ಇತ್ತೀಚೆಗೆ ಅಧ್ಯಯನವೊಂದನ್ನು ನಡೆಸಿತ್ತು. ಇದರಲ್ಲಿ, 2019-20 ರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಚುಚ್ಚುಮದ್ದು (Influence Shots)ಪಡೆಯುತ್ತಿದ್ದ ಮಕ್ಕಳು ಕೋವಿಡ್ಗೆ ತುತ್ತಾಗುವ ಸಾಧ್ಯತೆ ಕಡಿಮೆಯಿದೆ ಎಂದು ವರದಿ ಹೇಳಿತ್ತು.
ಭಾರತದ ಮಕ್ಕಳ ವೈದ್ಯರು, ಇನ್ಫ್ಲುಯೆನ್ಸ್ಗಳನ್ನು ನೀಡುವುದರಿಂದ ಮಕ್ಕಳಿಗೆ ಕೋವಿಡ್ ಬರುವ ಸಾಧ್ಯತೆ ಕಡಿಮೆಯಿದೆ. ಹಾಗಾಗಿ ನಿಮ್ಮ ಮಕ್ಕಳಿಗೂ ಇನ್ಫ್ಲುಯೆನ್ಸ್ ಚುಚ್ಚುಮದ್ದನ್ನು ಕೊಡಿಸಿ ಎಂದು ಸಲಹೆ ನೀಡುತ್ತಿದ್ದಾರೆ. ಈ ಕುರಿತು ಈ ಟಿವಿ ಭಾರತದ ಸುಖೀಭವ ತಂಡ ಮಕ್ಕಳ ವೈದ್ಯೆ ಡಾ.ಸೊನಾಲಿ ನವಲೆ ಪುರಂದರೆ ಜತೆಗೆ ಮಾತನಾಡಿದೆ.
ಇನ್ಫ್ಲುಯೆನ್ಸ್ ಚುಚ್ಚುಮದ್ದು ಕೋವಿಡ್ ಮೇಲೆ ಹೇಗೆ ಪರಿಣಾಮ ಬೀರುತ್ತೆ?
ಕೋವಿಡ್ ಮೂರನೇ ಅಲೆಯಿಂದ ಮಕ್ಕಳನ್ನು ರಕ್ಷಿಸಲು ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಬಹಳ ಮುಖ್ಯ ಎಂದು ಡಾ.ಸೊನಾಲಿ ಅಭಿಪ್ರಾಯ ಪಟ್ಟಿದ್ದಾರೆ. ಮಳೆಗಾಲವಾಗಿರುವುದರಿಂದ ಮಕ್ಕಳಿಗೆ ಶೀತ, ಕೆಮ್ಮು, ಜ್ವರ, ಉಸಿರಾಟದಂತಹ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಈ ಹಿನ್ನೆಲೆ, ಮಕ್ಕಳಿಗೆ ಇನ್ಫ್ಲುಯೆನ್ಸ್ ಚುಚ್ಚುಮದ್ದು ನೀಡುವುದರಿಂದ ಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ವೈರಸ್ ಬರುವುದನ್ನು ತಡೆಗಟ್ಟುವಲ್ಲಿ ಸಹಕಾರಿಯಾಗುತ್ತದೆ ಎಂದಿದ್ದಾರೆ.
ಇಂಡಿಯನ್ ಅಕಾಡೆಮಿ ಫಾರ್ ಪೀಡಿಯಾಟ್ರಿಕ್ಸ್ ಸಹ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲ ಮಕ್ಕಳಿಗೆ ಇನ್ಫ್ಲುಯೆನ್ಸ್ ಡೀಸ್ ನೀಡಬೇಕೆಂದು ಶಿಫಾರಸು ಮಾಡಿದೆ. ಸದ್ಯ ಮಾರ್ಕೆಟ್ನಲ್ಲಿ ಮಕ್ಕಳಿಗೆ ಕೋವಿಡ್ ಲಸಿಕೆ ಲಭ್ಯವಿಲ್ಲ ಅನ್ನೋದು ಎಲ್ಲರಿಗೂ ತಿಳಿದಿದೆ. ಮಕ್ಕಳಿಗೆ ವ್ಯಾಕ್ಸಿನ್ ಲಭಿಸುವ ನಿಟ್ಟಿನಲ್ಲಿ ಪ್ರಯೋಗಗಳು ನಡೆಯುತ್ತಿದ್ದು, ಸೆಪ್ಟೆಂಬರ್- ಅಕ್ಟೋಬರ್ನಲ್ಲಿ ಕೋವಿಡ್ ಲಸಿಕೆ ಲಭ್ಯವಾಗುವ ಸಾಧ್ಯತೆಯಿದೆ.