ನವದೆಹಲಿ:ಕ್ಯಾಂಪ್‌ಬೆಲ್ ವಿಲ್ಸನ್ ಅವರು ಏರ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ(ಎಂಡಿ) ನೇಮಕವಾಗಿದ್ದಾರೆ. ಟಾಟಾ ಸನ್ಸ್ ಒಡೆತನದ ಏರ್ ಇಂಡಿಯಾ ಬೋರ್ಡ್ ನೇಮಕಾತಿ ಬಗ್ಗೆ ಘೋಷಣೆ ಮಾಡಿದೆ.
ವಿಲ್ಸನ್ (50) ಪ್ರಸ್ತುತ ಸಿಂಗಾಪುರ್ ಏರ್‌ಲೈನ್ಸ್ ಒಡೆತನದ ಅಂಗಸಂಸ್ಥೆಯಾದ ಸ್ಕೂಟ್‌ನ ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ವಾಯುಯಾನ ಉದ್ಯಮದಲ್ಲಿ ಸುಮಾರು 26 ವರ್ಷಗಳ ಸುದೀರ್ಘ ಅನುಭವ ಹೊಂದಿದ್ದಾರೆ. ಫೆಬ್ರವರಿಯಲ್ಲಿ ಟರ್ಕಿಶ್ ಏರ್‌ಲೈನ್ಸ್‌ನ ಇಲ್ಕರ್ ಐಸಿ ಅವರನ್ನು ಏರ್ ಇಂಡಿಯಾದ ಸಿಇಒ ಹಾಗೂ ಎಂಡಿಯಾಗಿ ಟಾಟಾ ಸನ್ಸ್ ಘೋಷಣೆ ಮಾಡಿತ್ತು. ಆದರೆ ಭಾರತಕ್ಕೆ ಸಂಬಂಧಿಸಿದಂತೆ ಅವರ ಅಭಿಪ್ರಾಯಗಳು ವಿವಾದವೆಬ್ಬಿಸಿದ ಕಾರಣ ಹುದ್ದೆ ಸ್ವೀಕರಿಸಲು ನಿರಾಕರಿಸಿದ್ದರು.