ನವದೆಹಲಿ :ದೇಶದಲ್ಲಿ ಗಣನೀಯವಾಗಿ ಕೋವಿಡ್ ಸೋಂಕಿತ ಪ್ರಕರಣಗಳು ಕಡಿಮೆಯಾಗುತ್ತಿರುವುದರಿಂದ ಎರಡು ವರ್ಷಗಳ ಹಿಂದೆ ಆರಂಭಿಸಲಾಗಿದ್ದ ಮೊಬೈಲ್‌ಗಳಲ್ಲಿ ಕೋವಿಡ್ ಜಾಗೃತಿ ಕುರಿತ ಕಾಲರ್ ಟ್ಯೂನ್ ಅನ್ನು ಸ್ಥಗಿತಗೊಳಿಸಲು ಆರೋಗ್ಯ ಸಚಿವಾಲಯ ನಿರ್ಧರಿಸಿದೆ. ಭಾರತಿ ಏರ್ಟೆಲ್, ಬಿಎಸ್‌ಎನ್‌ಎಲ್, ರಿಲಯನ್ಸ್ ಜಿಯೋ ಹಾಗೂ ವೊಡಾಫೋನ್-ಐಡಿಯಾ ಸಂಸ್ಥೆಗಳು ಕೇಂದ್ರ ಸರ್ಕಾರದ ಸೂಚನೆ ಮೇರೆಗೆ 2020ರ ಮಾರ್ಚ್‌ನಲ್ಲಿ ಈ ಜಾಗೃತಿ ಸೇವೆಯನ್ನು ಆರಂಭಿಸಿದ್ದವು.
ಶೀಘ್ರದಲ್ಲೇ ಕೋವಿಡ್ ಕಾಲರ್ ಟ್ಯೂನ್ ಸ್ಥಗಿತ! - ಮೊಬೈಲ್ ಕರೆಯಲ್ಲಿ ಕೋವಿಡ್ ಕಾಲರ್ ಟ್ಯೂನ್
ತಮ್ಮ ಮೊಬೈಲ್‌ನಿಂದ ಬೇರೆಯವರಿಗೆ ಕರೆ ಮಾಡುವ ಮುನ್ನ ಕೇಳಿಸುವ ಕೋವಿಡ್ ಕುರಿತ ಕಾಲರ್ ಟ್ಯೂನ್ ಅತಿ ಶೀಘ್ರದಲ್ಲೇ ಸ್ಥಗಿತವಾಗಲಿದೆ ಎಂದು ಮೂಲಗಳು ತಿಳಿಸಿವೆ..
ಶೀಘ್ರದಲ್ಲೇ ಕೋವಿಡ್ ಕಾಲರ್ ಟ್ಯೂನ್ ಸ್ಥಗಿತ..!
ಮೊಬೈಲ್ ಕಾಲರ್ ಟ್ಯೂನ್‌ನಲ್ಲಿ ಮೊದಲು ಕೋವಿಡ್ ಬಗ್ಗೆ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿತ್ತು. ನಂತರ ಈ ಸಂದೇಶವನ್ನು ಬದಲಾಯಿಸಿ ವ್ಯಾಕ್ಸಿನೇಷನ್ ಕುರಿತು ಮಾಹಿತಿ ನೀಡಲಾಗುತ್ತಿತ್ತು. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಹೊಸದಾಗಿ 1,270 ಹೊಸ ಪ್ರಕರಣಗಳು ದಾಖಲಾಗಿವೆ. 2020 ಮಾರ್ಚ್ ಬಳಿಕ ಇದು ಅತ್ಯಂತ ಕಡಿಮೆ ಪ್ರಕರಣಗಳಾಗಿವೆ.
ಇದನ್ನೂ ಓದಿ:ಕೋವಿಡ್‌ನಿಂದ ವಿಮಾನ ಸಂಸ್ಥೆಗಳಿಗೆ ₹19 ಸಾವಿರ ಕೋಟಿ, ಏರ್ಪೋರ್ಟ್‌ಗಳಿಗೆ ₹5 ಸಾವಿರ ಕೋಟಿ ನಷ್ಟ
TAGGED:
Covid caller tune in mobiles