ಕೋಲ್ಕತ್ತಾ(ಪಶ್ಚಿಮ ಬಂಗಾಳ):ಚುನಾವಣೋತ್ತರ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸುವಂತೆ ಹೈಕೋರ್ಟ್ನ ಐವರು ನ್ಯಾಯಾಧೀಶರ ಪೀಠ ಆದೇಶಿಸಿದೆ. ನ್ಯಾಯಾಲಯವು ಅಕ್ಟೋಬರ್ 4, 2021 ಕ್ಕೆ ವಿಚಾರಣೆ ಮುಂದೂಡಿದೆ.
ಈ ಪ್ರಕರಣದ ವಿಚಾರಣೆಯನ್ನು ನ್ಯಾಯಾಧೀಶರಾದ ರಾಜೇಶ್ ಬಿಂದಾಲ್, ಐಪಿ ಮುಖೋಪಾಧ್ಯಾಯ, ಸೌಮೆನ್ ಸೇನ್, ಸುಬ್ರತಾ ತಳುಕ್ದಾರ್, ಹರೀಶ್ ಟಂಡನ್ ನಡೆಸುತ್ತಿದ್ದಾರೆ. ಸಿಬಿಐನ ವಿಶೇಷ ತನಿಖಾ ತಂಡದಲ್ಲಿ ಕೋಲ್ಕತ್ತಾ ಪೊಲೀಸ್ ಆಯುಕ್ತರು, ಸೌಮನ್ ಮಿತ್ರ, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಸುಮನ್ ಬಾಲ ಸಾಹು ಇರಲಿದ್ದಾರೆ.
ಈ ಪ್ರಕರಣ ಸಂಬಂಧ ಎಸ್ಐಟಿ ತನಿಖೆಯನ್ನು ಭಾರತದ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ನಡೆಯುತ್ತಿದೆ. ಮುಂದಿನ ಆರು ವಾರಗಳಲ್ಲಿ ಸಿಬಿಐ ಮತ್ತು ಎಸ್ಐಟಿ ತನಿಖಾ ವರದಿಗಳನ್ನು ಸಲ್ಲಿಸುವಂತೆ ನ್ಯಾಯಪೀಠ ನಿರ್ದೇಶಿಸಿದೆ.
ಇದನ್ನೂ ಓದಿ: ಸಿಎಂ ಆಗ್ಬೇಕು ಎಂದ್ರೆ HDD ಮನೇಲಿ, PM ಸ್ಥಾನ ಬೇಕೆಂದರೆ ನೆಹರೂ ಮನೇಲಿ ಹುಟ್ಬೇಕು: ಅಶೋಕ್ ವ್ಯಂಗ್ಯ