ನವದೆಹಲಿ: ದೇಶದಲ್ಲಿ ವೈದ್ಯಕೀಯ ಆಮ್ಲಜನಕದ ಕೊರತೆಯ ಮಧ್ಯೆ ವ್ಯಾಪಾರಿಗಳ ಮಂಡಳಿ - ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷ್ ವರ್ಧನ್ ಅವರಿಗೆ ಆಕ್ಸಿಜನ್ ಸಾಂದ್ರಕಗಳನ್ನು ಪೂರೈಸುವಂತೆ ಕೋರಿ ಪತ್ರ ಬರೆದಿದೆ.
ವೈದ್ಯಕೀಯ ಆಮ್ಲಜನಕದ ಪೂರೈಕೆಯನ್ನು ನಿಲ್ಲಿಸದಂತೆ ದೆಹಲಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಏಪ್ರಿಲ್ 25 ರಂದು ವ್ಯಾಪಾರಿ ಒಕ್ಕೂಟ ಆಕ್ಸಿಜನ್ ಕಾನ್ಸೆಂಟ್ರೇಟರ್ (ಆಕ್ಸಿಜನ್ ಸಾಂದ್ರಕ)ಬ್ಯಾಂಕ್ ಪ್ರಾರಂಭಿಸಿದೆ.
ಸಿಎಐಟಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಅವರು ಈ ಬಗ್ಗೆ ಈಟಿವಿ ಭಾರತ್ ಜೊತೆ ಮಾತನಾಡುತ್ತಾ, ಇತರ ದೇಶಗಳಿಂದ ಆಕ್ಸಿಜನ್ ಸಾಂದ್ರಕಗಳನ್ನು ಆಮದು ಮಾಡಿಕೊಳ್ಳಬೇಕು ಮತ್ತು ಸಂಸ್ಥೆಗಳಿಗೆ ಸಮಂಜಸವಾದ ದರದಲ್ಲಿ ಲಭ್ಯವಾಗುವಂತೆ ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಇದರಿಂದಾಗಿ ಅಗತ್ಯವಿರುವವರಿಗೆ ಸಹಾಯವನ್ನು ಒದಗಿಸಬಹುದು.ವೈದ್ಯಕೀಯ ಆಮ್ಲಜನಕವನ್ನು ಮನೆಯಲ್ಲಿ ಅಗತ್ಯವಿರುವವರಿಗೆ ಲಭ್ಯವಾಗುವಂತೆ ಆಕ್ಸಿಜನ್ ಸಾಂದ್ರಕ ಬ್ಯಾಂಕ್ ಮಾಡಲಿದೆ. ಆಮ್ಲಜನಕ ಸಾಂದ್ರಕಗಳು ಶೇ.95ರಷ್ಟು ಶುದ್ಧ ಆಮ್ಲಜನಕವನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿವೆ.