ಕರ್ನಾಟಕ

karnataka

ETV Bharat / bharat

ದೀಪಾವಳಿಯಲ್ಲಿ ಚೀನಾ ರಫ್ತುದಾರರಿಗೆ 50 ಸಾವಿರ ಕೋಟಿ ನಷ್ಟ: ಸಿಎಐಟಿ ಸಮೀಕ್ಷೆ - CAIT Pegs Rs 50,000 Cr Losses To Chinese Exporters This Diwali

ದೀಪಾವಳಿ ವೇಳೆ ಚೀನಾದ ವ್ಯಾಪಾರಿಗಳು 50 ಸಾವಿರ ಕೋಟಿ ರೂ. ನಷ್ಟವನ್ನು ಅನುಭವಿಸುತ್ತಾರೆ ಎಂದು ಸಿಎಐಟಿ ತನ್ನ ಸಮೀಕ್ಷೆಯಲ್ಲಿ ತಿಳಿಸಿದೆ.

CAIT pegs Rs 50,000 cr losses to Chinese exporters this Diwali
ದೀಪಾವಳಿಯಲ್ಲಿ ಚೀನಾ ರಫ್ತುದಾರರಿಗೆ 50 ಸಾವಿರ ಕೋಟಿ ನಷ್ಟ

By

Published : Oct 29, 2021, 11:01 PM IST

ನವದೆಹಲಿ:ಕಾನ್ಫಿಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (ಸಿಎಐಟಿ) ದೀಪಾವಳಿ ವೇಳೆ ಚೀನಾದ ವ್ಯಾಪಾರಿಗಳು 50 ಸಾವಿರ ಕೋಟಿ ರೂ. ನಷ್ಟವನ್ನು ಅನುಭವಿಸುತ್ತಾರೆ ಎಂದು ಅಂದಾಜಿಸಿದೆ.

ದೀಪಾವಳಿ ಹಬ್ಬದ ಮಾರಾಟದ ಅವಧಿಯಲ್ಲಿ ಗ್ರಾಹಕರು ಸುಮಾರು 2 ಲಕ್ಷ ಕೋಟಿ ರೂಪಾಯಿ ಖರ್ಚು ಮಾಡಬಹುದು ಎಂದು ಸಿಎಐಟಿ ನಿರೀಕ್ಷಿಸಿದೆ. ಕಳೆದ ವರ್ಷದಂತೆ ಈ ವರ್ಷವೂ ಸಿಎಐಟಿ ಚೀನಿ ಸರಕುಗಳನ್ನು ಬಹಿಷ್ಕರಿಸಲು ಕರೆ ನೀಡಿದ್ದು, ಭಾರತೀಯ ವ್ಯಾಪಾರಿಗಳಿಂದ ಚೀನಾದ ಸರಕುಗಳ ಆಮದು ನಿಲ್ಲಿಸುವ ವಿಷಯದಲ್ಲಿ ಚೀನಾ ಸುಮಾರು 50,000 ಕೋಟಿ ರೂ. ವ್ಯಾಪಾರ ನಷ್ಟವನ್ನು ಅನುಭವಿಸಲಿದೆ ಎಂಬುದು ಖಚಿತವಾಗಿದೆ.

ದೀಪಾವಳಿ ವಸ್ತುಗಳ ಆಮದಿನ ವಿಚಾರವಾಗಿ ಸುಮಾರು 20 ವಿತರಣಾ ನಗರಗಳಲ್ಲಿ ಸಂಶೋದನಾ ವಿಭಾಗವು ಸಮೀಕ್ಷೆ ನಡೆಸಿತ್ತು. ದೀಪಾವಳಿ ಸರಕುಗಳು, ಪಟಾಕಿಗಳು ಅಥವಾ ಇತರ ವಸ್ತುಗಳನ್ನು ಚೀನಾಗೆ ಭಾರತೀಯ ವ್ಯಾಪಾರಿಗಳು ಅಥವಾ ಆಮದುದಾರರು ನೀಡಿಲ್ಲ ಎಂದು ಸಿಎಐಟಿಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ತಿಳಿಸಿದ್ದಾರೆ.

ನವದೆಹಲಿ, ಅಹಮದಾಬಾದ್, ಮುಂಬೈ, ನಾಗ್ಪುರ, ಜೈಪುರ, ಲಖನೌ, ಚಂಡೀಗಢ, ರಾಯ್‌ಪುರ, ಭುವನೇಶ್ವರ, ಕೋಲ್ಕತ್ತಾ, ರಾಂಚಿ, ಗುವಾಹಟಿ, ಪಾಟ್ನಾ, ಚೆನ್ನೈ, ಬೆಂಗಳೂರು, ಹೈದರಾಬಾದ್, ಮಧುರೈ, ಪುದುಚೇರಿ, ಭೋಪಾಲ್ ಮತ್ತು ಜಮ್ಮುವಿನಲ್ಲಿ ಸಮೀಕ್ಷೆ ನಡೆಸಲಾಗಿತ್ತು.

ಇದನ್ನೂ ಓದಿ: ಟಿ-20 ವಿಶ್ವಕಪ್​​: ಪಾಕಿಸ್ತಾನಕ್ಕೆ 148 ರನ್​ಗಳ ಗುರಿ ನೀಡಿದ ಆಫ್ಘನ್​​

ABOUT THE AUTHOR

...view details