ಕರ್ನಾಟಕ

karnataka

ETV Bharat / bharat

ಭಾರತದಲ್ಲಿ ಅಮೆಜಾನ್‌ ನಿಷೇಧಿಸುವಂತೆ ಒತ್ತಾಯಿಸಿದ ಸಿಎಐಟಿ - ಭಾರತದಲ್ಲಿ ಅಮೆಜಾನ್‌

ಅಮೆಜಾನ್‌ನ ಪೋರ್ಟಲ್ ಮತ್ತು ಭಾರತದಲ್ಲಿ ಅದರ ಕಾರ್ಯಾಚರಣೆಗಳ ಮೇಲೆ ತಕ್ಷಣದ ನಿಷೇಧ ಹೇರಬೇಕು ಮತ್ತು ಕಂಪನಿಯ ವಿರುದ್ಧ ಸಮಯಕ್ಕೆ ತಕ್ಕಂತೆ ತನಿಖೆ ನಡೆಸಬೇಕು ಎಂದು ಸಿಎಐಟಿ ಒತ್ತಾಯಿಸಿದೆ.

amazon
amazon

By

Published : Feb 18, 2021, 9:08 PM IST

ನವದೆಹಲಿ:ಅತಿಯಾದ ಬೆಲೆ ನಿಗದಿ, ವಿಪರೀತ ರಿಯಾಯಿತಿ ಮತ್ತು ದಾಸ್ತಾನು ನಿಯಂತ್ರಣದಲ್ಲಿ ಅಮೆಜಾನ್ ತೊಡಗಿದೆ ಎಂದು ಆರೋಪಿಸಿರುವ ವ್ಯಾಪಾರಿಗಳ ಸಂಸ್ಥೆ ಸಿಎಐಟಿ, ಭಾರತದಲ್ಲಿ ಅಮೆಜಾನ್​ನ ಕಾರ್ಯಾಚರಣೆಗಳ ಮೇಲೆ ಸರ್ಕಾರ ನಿಷೇಧ ಹೇರಬೇಕು ಎಂದು ಒತ್ತಾಯಿಸಿದೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿಎಐಟಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್, "ಅಮೆಜಾನ್‌ನ ಪೋರ್ಟಲ್ ಮತ್ತು ಭಾರತದಲ್ಲಿ ಅದರ ಕಾರ್ಯಾಚರಣೆಗಳ ಮೇಲೆ ತಕ್ಷಣದ ನಿಷೇಧ ಹೇರಬೇಕು ಮತ್ತು ಕಂಪನಿಯ ವಿರುದ್ಧ ಸಮಯಕ್ಕೆ ತಕ್ಕಂತೆ ತನಿಖೆ ನಡೆಸಬೇಕು" ಎಂದು ಒತ್ತಾಯಿಸಿದರು.

ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನ ವ್ಯವಹಾರ ಪದ್ಧತಿಗಳನ್ನು ತನಿಖೆ ಮಾಡುವಂತೆ ಅವರು ಸರ್ಕಾರವನ್ನು ಒತ್ತಾಯಿಸಿದರು. ಈ ನಿಟ್ಟಿನಲ್ಲಿ ಸಿಎಐಟಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರಿಗೆ ಪತ್ರ ಬರೆದಿದೆ.

ABOUT THE AUTHOR

...view details