ಲಖನೌ(ಉತ್ತರ ಪ್ರದೇಶ):ಆಡಳಿತಾರೂಢ ಭಾರತೀಯ ಜನತಾ ಪಾರ್ಟಿಗೆ ಉತ್ತರ ಪ್ರದೇಶದಲ್ಲಿ ಮೇಲಿಂದ ಮೇಲೆ ಗುದ್ದು ಬೀಳುತ್ತಿದ್ದು ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಹಾಗೂ ಮೂವರು ಶಾಸಕರು ಪಕ್ಷ ತೊರೆದ ಬೆನ್ನಲ್ಲೇ ಇದೀಗ ಮತ್ತೋರ್ವ ಪ್ರಮುಖ ಸಚಿವ ಯೋಗಿ ಕ್ಯಾಬಿನೆಟ್ನಿಂದ ಹೊರನಡೆದಿದ್ದಾರೆ.
ಯೋಗಿ ಆದಿತ್ಯನಾಥ್ ಸಚಿವ ಸಂಪುಟದಲ್ಲಿ ಪ್ರಮುಖ ಮಂತ್ರಿಯಾಗಿದ್ದ ದಾರಾ ಸಿಂಗ್ ಚೌಹಾಣ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ರಾಜ್ಯಪಾಲರು ಹಾಗೂ ಸಿಎಂಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ.
ಇದನ್ನೂ ಓದಿ:ಕಾರು ಕಾಲುವೆಗೆ ಬಿದ್ದು ಸರ್ಕಾರಿ ಸಚೇತಕರ ಕುಟುಂಬಸ್ಥರಿಬ್ಬರ ದುರ್ಮರಣ
ಬಿಜೆಪಿ ಸೇರಿದ ಕಾಂಗ್ರೆಸ್ ಮುಖಂಡರು
ಇಂದು ಬೆಳಗ್ಗೆ ಸಹರನ್ಪುರ್ ಕಾಂಗ್ರೆಸ್ ಶಾಸಕ ನರೇಶ್ ಸೈನಿ, ಫಿರೋಜಾಬಾದ್ನ ಶಾಸಕ ಹರಿ ಓಂ ಯಾದವ್ ಮತ್ತು ಸಮಾಜವಾದಿ ಪಕ್ಷದ ಮಾಜಿ ಶಾಸಕ ಡಾ.ಧರ್ಮಪಾಲ್ ಸಿಂಗ್ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಇನ್ನೊಂದೆಡೆ, ಕಾಂಗ್ರೆಸ್ ಪಕ್ಷದ ಪ್ರಮುಖ ಮುಖಂಡರಾಗಿದ್ದ ಇಮ್ರಾನ್ ಮಾಸೂದ್ ಸಮಾಜವಾದಿ ಪಕ್ಷ ಸೇರಿಕೊಂಡಿದ್ದಾರೆ.
ನಿನ್ನೆ ನಡೆದ ಮಹತ್ವದ ವಿದ್ಯಮಾನದಲ್ಲಿ ಸಹಜಾನಪುರ್ ಬಿಜೆಪಿ ಶಾಸಕರಾದ ರೋಷನ್ ಲಾಲ್ ವರ್ಮಾ, ಬಿಲ್ಹೌರ್ ಕ್ಷೇತ್ರದ ಶಾಸಕ ಭಗವತಿ ಪ್ರಸಾದ್ ಸಾಗರ್ ಮತ್ತು ತಿಂದವಾರಿ ಶಾಸಕ ಬ್ರಜೇಶ್ ಪ್ರಜಾಪತಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.