ಪಾಟ್ನಾ:ಬಿಹಾರದಲ್ಲಿ ಇಂದು ಬೆಳಗ್ಗೆ 11.30ಕ್ಕೆ ಸಿಎಂ ನಿತೀಶ್ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಮಹಾಮೈತ್ರಿಕೂಟ ಸರ್ಕಾರದ ನೂತನ ಸಚಿವರು ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸಂಪುಟಕ್ಕೆ ಸೇರ್ಪಡೆಗೊಳ್ಳಲಿರುವ ಸಚಿವರ ಪಟ್ಟಿಗೆ ಅನುಮೋದನೆ ನೀಡಲಾಗಿದೆ.
ಮೂಲಗಳ ಪ್ರಕಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ನೂತನ ಸಚಿವರ ಪಟ್ಟಿಯನ್ನು ರಾಜ್ಯಪಾಲ ಫಗು ಚೌಹಾಣ್ ಅವರಿಗೆ ಸಲ್ಲಿಸಿದ್ದಾರೆ. ಈ ಪಟ್ಟಿಯ ಪ್ರಕಾರ ಆರ್‌ಜೆಡಿಯಿಂದ 16, ಜೆಡಿಯುನಿಂದ 8 ಮತ್ತು ಕಾಂಗ್ರೆಸ್ನ ಇಬ್ಬರು ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದಲ್ಲದೇ ಶೀಲಾ ಮಂಡಲ್, ಜಯಂತ್ ರಾಜ್, ಅಶೋಕ್ ಚೌಧರಿ, ಜಿತನ್ ರಾಮ್ ಮಾಂಝಿ ಅವರ ಪುತ್ರ ಸಂತೋಷ್ ಕುಮಾರ್ ಸುಮನ್ ಮತ್ತು ಸ್ವತಂತ್ರ ಸುಮಿತ್ ಸಿಂಗ್ ಅವರ ಹೆಸರುಗಳೂ ಚರ್ಚೆಗೆ ಬಂದಿವೆ.
ಮಹಾಮೈತ್ರಿಕೂಟದ ಸರ್ಕಾರದಲ್ಲಿ 31 ಸಚಿವರು:ರಾಜಭವನದ ಮೂಲಗಳ ಪ್ರಕಾರ ಸಚಿವರ ಪ್ರಮಾಣ ವಚನಕ್ಕೆ ಸಿದ್ಧತೆಗಳು ಪೂರ್ಣಗೊಂಡಿವೆ. ಬಹುತೇಕ ಹಳೆಯ ಸಚಿವರಿಗೆ ಅವಕಾಶ ನೀಡಲು ನಿತೀಶ್ ಕುಮಾರ್ ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಎರಡು-ಮೂರು ಜನರನ್ನು ಬಿಟ್ಟರೆ ಬಹುತೇಕ ಹಳಬರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನಲಾಗ್ತಿದೆ. ಶೀಲಾ ಮಂಡಲ್, ಜಯಂತ್ ರಾಜ್ ಮತ್ತು ಅಶೋಕ್ ಚೌಧರಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳದಿರುವ ಸಾಧ್ಯತೆಯಿದ್ದು, ಸಂಜಯ್ ಝಾ, ವಿಜಯ್ ಚೌಧರಿ, ಶ್ರವಣ್ ಕುಮಾರ್ ಮತ್ತು ಬಿಜೇಂದ್ರ ಯಾದವ್ ಅವರು ಸಚಿವರಾಗುವ ನಿರೀಕ್ಷೆಯಿದೆ.
ಜೆಡಿಯುನಿಂದ ಸಂಭಾವ್ಯ ಸಚಿವರ ಪಟ್ಟಿ:
- ವಿಜಯ್ ಚೌಧರಿ
- ಬಿಜೇಂದ್ರ ಪ್ರಸಾದ್ ಯಾದವ್
- ಶ್ರವಣ್ ಕುಮಾರ್
- ಲೇಸಿ ಸಿಂಗ್
- ಮದನ್ ಸಾಹ್ನಿ
- ಸುನಿಲ್ ಕುಮಾರ್
- ಸಂಜಯ್ ಝಾ