ನವದೆಹಲಿ :ಆಹಾರ ಸಂಸ್ಕರಣಾ ಕ್ಷೇತ್ರಕ್ಕೆ ಉತ್ಪಾದನಾ ಸಂಬಂಧಿತ ಪ್ರೋತ್ಸಾಹಕ (ಪಿಎಲ್ಐ) ಯೋಜನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅಂತಿಮ ಅನುಮತಿ ನೀಡಿದೆ.
ಈ ಯೋಜನೆಯಡಿ ಆಹಾರ ಸಂಸ್ಕರಣಾ ಉದ್ಯಮಕ್ಕೆ ಆರು ವರ್ಷಗಳ ಅವಧಿಯಲ್ಲಿ 10,900 ಕೋಟಿ ರೂ.ಗಳ ಪ್ರೋತ್ಸಾಹ ಧನ ನೀಡಲಾಗುವುದು. ಕ್ಯಾಬಿನೆಟ್ ಸಭೆಯ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಕೇಂದ್ರ ಸಚಿವ ಪಿಯೂಷ್ ಗೋಯಲ್, ಈ ಯೋಜನೆಯು ಸುಮಾರು 2.5 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ಹೇಳಿದ್ದಾರೆ.
ವಾಸ್ತವವಾಗಿ, ಕಳೆದ ನವೆಂಬರ್‌ನಲ್ಲಿ ಈ ಪ್ರಸ್ತಾಪಕ್ಕೆ ಕ್ಯಾಬಿನೆಟ್ ತನ್ನ ತಾತ್ವಿಕ ಅನುಮೋದನೆ ನೀಡಿತು. ಈವರೆಗೆ ಹತ್ತು ಕ್ಷೇತ್ರಗಳಿಗೆ 1.45 ಲಕ್ಷ ಕೋಟಿ ರೂ.ಗಳ ಮೌಲ್ಯದ ಪಿಎಲ್ಐ ಯೋಜನೆಗಳನ್ನು ಕೇಂದ್ರ ಪ್ರಕಟಿಸಿದೆ. ಕ್ಷೇತ್ರಗಳಲ್ಲಿ ವಾಹನಗಳು, ಔಷಧಗಳು ಮತ್ತು ಟೆಲಿಕಾಂ ಉಪಕರಣಗಳು ಸೇರಿವೆ.
ಇದನ್ನೂ ಓದಿ:ತಮಿಳುನಾಡಿನಲ್ಲಿ ಬಿಜೆಪಿ ಕ್ಯಾಂಪೇನ್ಗೆ ಕಾಂಗ್ರೆಸ್ನ ನಾಯಕ ಚಿದಂಬರಂ ಸೊಸೆ ಭಾವಚಿತ್ರ ಬಳಕೆ!
ಭಾರತವನ್ನು ಜಾಗತಿಕ ಪೂರೈಕೆ ಸರಪಳಿಯ ಅಮೂಲ್ಯವಾದ ಭಾಗವನ್ನಾಗಿ ಮಾಡುವ ಆತ್ಮ ನಿರ್ಭಾರ ಭಾರತ ಅಭಿಯಾನದ ಭಾಗವಾಗಿ ಕಳೆದ ವರ್ಷ ಪಿಎಲ್ಐ ಯೋಜನೆಯನ್ನು ಪ್ರಾರಂಭಿಸಲಾಯಿತು.