ಕರ್ನಾಟಕ

karnataka

ETV Bharat / bharat

ಜವಳಿ ಕ್ಷೇತ್ರಕ್ಕೆ 10,683 ಕೋಟಿ ರೂ. ಘೋಷಣೆ.. ವಾಯುಸೇನೆಗೆ 56 ವಿಮಾನ ಖರೀದಿಗೆ ಕೇಂದ್ರ ನಿರ್ಧಾರ..

ಕೇಂದ್ರ ಸಚಿವ ಸಂಪಟದಲ್ಲಿ ವಾಯುಪಡೆ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಸೇರಿದ್ದ ಕೆಲ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ..

Cabinet
Cabinet

By

Published : Sep 8, 2021, 9:25 PM IST

ನವದೆಹಲಿ :ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದಲ್ಲಿ ಇಂದು ಕೆಲ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಭಾರತೀಯ ವಾಯುಪಡೆ ಸೇರಿದಂತೆ ಯಾವೆಲ್ಲ ವಿಷಯಗಳ ಬಗ್ಗೆ ಚರ್ಚೆ ಹಾಗೂ ಅನುಮೋದನೆ ನೀಡಲಾಗಿದೆ ಎಂಬುದರ ಬಗ್ಗೆ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್​ ಗೋಯಲ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡರು.

ವಾಯುಪಡೆಗೆ C-295MW ವಿಮಾನ ಖರೀದಿಗೆ ನಿರ್ಧಾರ

ಭಾರತೀಯ ವಾಯುಪಡೆಗೆ ಮತ್ತಷ್ಟು ಶಕ್ತಿ ತುಂಬುವ ಉದ್ದೇಶದಿಂದ ಕ್ಯಾಬಿನೆಟ್​ನಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಏರ್​​ಬಸ್​​ ಡಿಫೆನ್ಸ್​ ಮತ್ತು ಸ್ಪೇಸ್​​​ನ 56 C-295MW ವಿಮಾನ ಖರೀದಿಗೆ ನಿರ್ಧರಿಸಿದೆ. ಇದರಲ್ಲಿ 16 ವಿಮಾನಗಳು ಸ್ಪೇನ್​​ನಿಂದ ಖರೀದಿಯಾಗಲಿದ್ದು, ಉಳಿದ 40 ವಿಮಾನಗಳು ಟಾಟಾದಿಂದ ತಯಾರಾಗಲಿವೆ.

ಜವಳಿ ಕ್ಷೇತ್ರಕ್ಕೆ 10,683 ಕೋಟಿ ರೂ. ಘೋಷಣೆ

ಇಂದಿನ ಸಚಿವ ಸಂಪುಟದಲ್ಲಿ ಪ್ರಮುಖವಾಗಿ ಜವಳಿ ಕ್ಷೇತ್ರದ ಅಭಿವೃದ್ಧಿಗಾಗಿ 10,683 ಕೋಟಿ ರೂ. ಘೋಷಣೆ ಮಾಡಲಾಗಿದೆ. ಉತ್ಪಾದನಾ ಲಿಂಕ್ಡ್​ ಇನ್ಸಿಂಟಿವ್ಸ್​​(PLI scheme) ಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದರು. ಮುಂದಿನ 5 ವರ್ಷದಲ್ಲಿ ಈ ಪ್ರೋತ್ಸಾಹ ಧನ ಜವಳಿ ಕ್ಷೇತ್ರಕ್ಕೆ ನೀಡಲು ನಿರ್ಧರಿಸಲಾಗಿದೆ. ಇದರಿಂದ 7.5 ಲಕ್ಷ ಜನರಿಗೆ ಉದ್ಯೋಗ ಸಿಗಲಿದೆ ಎಂದರು. ಪ್ರಮುಖವಾಗಿ ಉತ್ತರಪ್ರದೇಶ, ಮಹಾರಾಷ್ಟ್ರ, ಪಂಜಾಬ್, ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳಿಗೆ ಈ ಯೋಜನೆಗಳಿಂದ ಪ್ರಯೋಜನವಾಗಲಿವೆ ಎಂದರು.

ಗೋಧಿ-ಸಾಸಿವೆ ಮೇಲಿನ ಬೆಂಬಲ ಬೆಲೆ ಏರಿಕೆ

ಗೋಧಿ ಮೇಲಿನ ಕನಿಷ್ಠ ಬೆಂಬಲ ಬೆಲೆಯನ್ನ ಹೆಚ್ಚಳ ಮಾಡಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಪ್ರತಿ ಕ್ವಿಂಟಲ್​ಗೆ ಶೇ.40ರಷ್ಟು ಹೆಚ್ಚಿಗೆಯಾಗಿದೆ. ಸದ್ಯ 2,015 ರೂ. ಆಗಿದೆ. ಸಾಸಿವೆ ಮೇಲಿನ ಕನಿಷ್ಠ ಬೆಂಬಲ ಬೆಲೆ ಕೂಡ 400 ರೂ. ಏರಿಕೆಯಾಗಿದೆ. ಹೀಗಾಗಿ, ಪ್ರತಿ ಕ್ವಿಂಟಲ್​ಗೆ 5,050 ರೂ. ಇದೆ.

ಕಬ್ಬು ಬೆಳೆಗಾರರಿಗೆ 290 ರೂ. ಖರೀದಿ ಬೆಲೆ

ಕಬ್ಬು ಬೆಳೆಗಾರರಿಗೆ ಪ್ರತಿ ಕ್ವಿಂಟಾಲ್​ಗೆ 290 ರೂ. ಖರೀದಿ ಬೆಲೆ ನೀಡಲು ಕೇಂದ್ರ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ. ಇದು ಈವರೆಗಿನ ಗರಿಷ್ಠ ಬೆಲೆಯಾಗಿದೆ. ಇದರಿಂದ ದೇಶದ 5 ಕೋಟಿ ರೈತರಿಗೆ ಇದರಿಂದ ಸಹಾಯವಾಗಲಿದೆ.

ABOUT THE AUTHOR

...view details