ಕರ್ನಾಟಕ

karnataka

ETV Bharat / bharat

ಕೃಷಿ ಕಾಯ್ದೆಗಳ ವಾಪಸ್‌ ಪಡೆಯುವ ಪ್ರಧಾನಿ ನಿರ್ಧಾರಕ್ಕೆ ಕೇಂದ್ರ ಸಚಿವ ಸಂಪುಟ ಅಸ್ತು - ಪ್ರಧಾನಿ ನರೇಂದ್ರ ಮೋದಿ

ಮೂರು ಕೃಷಿ ಕಾಯ್ದೆಗಳನ್ನು ವಾಪಸ್‌ ಪಡೆಯುವುದಾಗಿ ಪ್ರಧಾನಿ ಮೋದಿ ಅವರ ನಿರ್ಧಾರಕ್ಕೆ ಕೇಂದ್ರ ಸಚಿವ ಸಂಪುಟ ಇಂದು ಅನುಮೋದನೆ ನೀಡಿದೆ. ಇದೇ 29ರಿಂದ ಆರಂಭವಾಗಲಿರುವ ಸಂಸತ್‌ ಚಳಿಗಾಲದ ಅಧಿವೇಶನದಲ್ಲಿ ಅಂಗೀಕಾರಗೊಂಡ ಬಳಿಕ ಕಾನೂನಾತ್ಮಕವಾಗಿ ಕಾಯ್ದೆಗಳನ್ನು ವಾಪಸ್‌ ಪಡೆಯಲಾಗುತ್ತದೆ..

cabinet approves farm laws repeal bill 2021 says official sources
ಕೃಷಿ ಕಾಯ್ದೆಗಳ ವಾಪಸ್‌ ಪಡೆಯುವ ಪ್ರಧಾನಿ ಮೋದಿ ನಿರ್ಧಾರಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ

By

Published : Nov 24, 2021, 3:23 PM IST

Updated : Nov 24, 2021, 3:41 PM IST

ನವದೆಹಲಿ : ಇದೇ 29ರಿಂದ ಸಂಸತ್‌ ಚಳಿಗಾಲದ ಅಧಿವೇಶನ ಆರಂಭಕ್ಕೂ ಮುನ್ನವೇ ಇಂದು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟ ಸಭೆ ನಡೆದಿದೆ. 3 ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದಿರುವ ನಿರ್ಧಾರಕ್ಕೆ ಸಚಿವ ಸಂಪುಟದ ಅನುಮೋದನೆ ನೀಡಲಾಗಿದೆ ಎಂದು ಸಚಿವ ಅನುರಾಗ್‌ ಠಾಕೂರ್‌ ತಿಳಿಸಿದ್ದಾರೆ.

ಸಚಿವ ಸಂಪುಟ ಸಭೆ ಬಳಿಕ ಮಾಹಿತಿ ನೀಡಿದ ಸಚಿವರು, ಮುಂಬರುವ ಸಂಸತ್‌ ಕಲಾಪದಲ್ಲಿ 3 ಕೃಷಿ ಕಾಯ್ದೆಗಳನ್ನು ವಾಪಸ್‌ ಪಡೆಯುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ.

PM Garib Kalyan Anna Yojana :ಕೋವಿಡ್‌ ಸಂದರ್ಭದಲ್ಲಿ ಜಾರಿಗೆ ತಂದಿದ್ದ ಉಚಿತವಾಗಿ ಪಡಿತರ ವಿತರಣೆ ಮಾಡುವ 'ಪಿಎಂ ಗರೀಬ್‌ ಕಲ್ಯಾಣ್‌ ಅನ್ನ ಯೋಜನೆ'ಯನ್ನು 2022ರ ಮಾರ್ಚ್‌ವರೆಗೆ ಮುಂದುವರೆಸಲು ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಸಚಿವರು ವಿವರಿಸಿದರು.

Parliament winter session 2021 :ಕೃಷಿ ಕಾಯ್ದೆ-2021 ಅನ್ನು ಸಂಸತ್‌ ಚಳಿಗಾಲದ ಅಧಿವೇಶನದ ಮೊದಲ ದಿನವೇ ಕಲಾಪದ ಮುಂದೆ ಇರಿಸಲಾಗುತ್ತದೆ. ಇದರ ಜತೆಗೆ ಒಟ್ಟು 26 ಮಸೂದೆಗಳು ಅಂಗೀಕಾರಕ್ಕೆ ಬರಲಿವೆ. ನವೆಂಬರ್‌ 29ರಿಂದ ಸಂಸತ್‌ ಅಧಿವೇಶನ ಆರಂಭವಾಗಿ ಡಿಸೆಂಬರ್‌ 23ಕ್ಕೆ ಕೊನೆಗೊಳ್ಳಲಿದೆ.

Last Updated : Nov 24, 2021, 3:41 PM IST

ABOUT THE AUTHOR

...view details