ಕರ್ನಾಟಕ

karnataka

ETV Bharat / bharat

ಆರು ರಾಜ್ಯಗಳ ಏಳು ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ.. ಇಂಡಿಯಾ ಎನ್​ಡಿಎ ಮಧ್ಯೆ ನೇರ ಪೈಪೋಟಿ

ಆರು ರಾಜ್ಯಗಳ ಏಳು ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಗೆ ಇಂದು ಮತದಾನ ನಡೆಯಲಿದೆ. ಈ ಉಪಚುನಾವಣೆ ಇಂಡಿಯಾ ಮತ್ತು ಎನ್​ಡಿಎ ಮಧ್ಯೆ ಮೊದಲ ಚುನಾವಣಾ ಪರೀಕ್ಷೆಯಾಗಿದೆ.

Bypolls to seven assembly seats today  litmus test for INDIA bloc  Bypolls to seven assembly  ಏಳು ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ  ಇಂಡಿಯಾ ಎನ್​ಡಿಎ ಮಧ್ಯೆ ನೇರ ಪೈಪೋಟಿ  ಆರು ರಾಜ್ಯಗಳ ಏಳು ವಿಧಾನಸಭೆ ಕ್ಷೇತ್ರ  ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಗೆ ಇಂದು ಮತದಾನ  2024ರ ಲೋಕಸಭಾ ಚುನಾವಣೆ  ಚುನಾವಣೆಗೆ ಎಲ್ಲ ರಾಜಕೀಯ ಪಕ್ಷಗಳು ಕಸರತ್ತು  6 ರಾಜ್ಯಗಳ 7 ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆ  ಏಳು ಕ್ಷೇತ್ರಗಳಲ್ಲಿ ನಡೆಯುತ್ತಿರುವ ಉಪಚುನಾವಣೆ  ಇಂಡಿಯಾ ಮೈತ್ರಿಕೂಟಕ್ಕೆ ಸವಾಲಾಗಿ ಪರಿಣಮಿಸಿದೆ
ಆರು ರಾಜ್ಯಗಳ ಏಳು ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ

By ETV Bharat Karnataka Team

Published : Sep 5, 2023, 7:12 AM IST

ಹೈದರಾಬಾದ್​: ಒಂದೆಡೆ 2024ರ ಲೋಕಸಭಾ ಚುನಾವಣೆಗೆ ಎಲ್ಲ ರಾಜಕೀಯ ಪಕ್ಷಗಳು ಕಸರತ್ತು ನಡೆಸುತ್ತಿವೆ. ಇನ್ನೊಂದೆಡೆ ಇಂದು ಉಪಚುನಾವಣೆಯ ಮತದಾನ ನಡೆಯಲಿದ್ದು, ಈ ರೂಪದಲ್ಲಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷದ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. 6 ರಾಜ್ಯಗಳ 7 ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ. ಈ ಎಲ್ಲಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯಲಿದ್ದು, ಸೆಪ್ಟೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ. ಇಂದು ಪಶ್ಚಿಮ ಬಂಗಾಳದ ಧುಪ್ಗುರಿ ಕ್ಷೇತ್ರ, ತ್ರಿಪುರಾದ ಧನಪುರ್ ಮತ್ತು ಬಾಕ್ಸ್‌ನಗರ ಕ್ಷೇತ್ರಗಳು, ಕೇರಳದ ಪುತ್ತುಪಲ್ಲಿ ಕ್ಷೇತ್ರ, ಉತ್ತರಪ್ರದೇಶದ ಘೋಸಿ ಕ್ಷೇತ್ರ, ಉತ್ತರಾಖಂಡದ ಬಾಗೇಶ್ವರ್ ಕ್ಷೇತ್ರ ಮತ್ತು ಜಾರ್ಖಂಡ್‌ನ ದುಮ್ರಿ ಕ್ಷೇತ್ರಕ್ಕೆ ಮತದಾನ ನಡೆಯಲಿದೆ.

ಈ ಏಳು ಕ್ಷೇತ್ರಗಳಲ್ಲಿ ನಡೆಯುತ್ತಿರುವ ಉಪಚುನಾವಣೆ ಇಂಡಿಯಾ ಮೈತ್ರಿಕೂಟಕ್ಕೆ ಸವಾಲಾಗಿ ಪರಿಣಮಿಸಿದೆ. ಏಕೆಂದರೆ ಹಲವು ಪಕ್ಷಗಳು ಒಗ್ಗೂಡಿ ಇಂಡಿಯಾ ಮೈತ್ರಿಕೂಟವನ್ನು ರಚಿಸಿದ ನಂತರ ಇದು ಅವರಿಗೆ ಮೊದಲ ಚುನಾವಣೆಯಾಗಿದೆ. ಈ ಪರಿಸ್ಥಿತಿಯಲ್ಲಿ ಬಿಜೆಪಿ ಗೆಲ್ಲುವ ಮೂಲಕ ತನ್ನ ಪ್ರಭಾವವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದು, ಮೈತ್ರಿ ಪಕ್ಷಗಳಿಗೆ ಈ ಚುನಾವಣೆ ಅಗ್ನಿಪರೀಕ್ಷೆಯಾಗಲಿದೆ. ಏಕೆಂದರೆ ಈ ಉಪಚುನಾವಣೆಯಲ್ಲಿಯೂ ಬಿಜೆಪಿಯೇತರ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸದ ಹಲವು ಸ್ಥಾನಗಳಲ್ಲಿ ಬಿಜೆಪಿಯೇತರ ನಾಯಕರನ್ನು ಬೆಂಬಲಿಸಿವೆ.

1. ಘೋಸಿ ಕ್ಷೇತ್ರವು ಈ ಬಾರಿ ಬಿಜೆಪಿ ಮತ್ತು ಸಮಾಜವಾದಿ ಪಕ್ಷಕ್ಕೆ ಪ್ರತಿಷ್ಠೆಯ ಚುನಾವಣೆಯಾಗಿದೆ. ಈ ಚುನಾವಣೆಯು ಬಿಜೆಪಿಯ ದಾರಾ ಸಿಂಗ್ ಚೌಹಾಣ್ ಮತ್ತು ಸಮಾಜವಾದಿ ಪಕ್ಷದ ಸುಧಾಕರ್ ಸಿಂಗ್ ನಡುವಿನ ಚುನಾವಣೆಯಾಗಿದ್ದರೂ, ಇದು ಎನ್‌ಡಿಎ ವಿರುದ್ಧ ಇಂಡಿಯಾಕ್ಕೆ ಅಘೋಷಿತ ಅಗ್ನಿ ಪರೀಕ್ಷೆಯಾಗಿದೆ. 543 ಸದಸ್ಯರ ಲೋಕಸಭೆಯಲ್ಲಿ 80 ಸಂಸದರನ್ನು ಹೊಂದಿರುವ ಉತ್ತರ ಪ್ರದೇಶ ಈ ರಾಜಕೀಯ ಸಮೀಕರಣದಲ್ಲಿ ನಿರ್ಣಾಯಕವಾಗಿದೆ. ಯೋಗಿ ಆದಿತ್ಯನಾಥ್ ಮತ್ತು ಅಖಿಲೇಶ್ ಯಾದವ್ ಅವರಂತಹ ನಾಯಕರು ಸಕ್ರಿಯವಾಗಿ ಭಾಗವಹಿಸುವುದರೊಂದಿಗೆ ಪ್ರಚಾರವು ಜೋರಾಗಿತ್ತು.

2. ಪಶ್ಚಿಮ ಬಂಗಾಳದ ಧೂಪ್ಗುರಿ ಟಿಎಂಸಿ, ಬಿಜೆಪಿ ಮತ್ತು ಕಾಂಗ್ರೆಸ್ ಬೆಂಬಲಿತ ಸಿಪಿಐ(ಎಂ) ನಡುವೆ ತ್ರಿಕೋನ ಕದನಕ್ಕೆ ಸಾಕ್ಷಿಯಾಗುತ್ತಿದೆ. ಕಳೆದ ಕೆಲವು ತಿಂಗಳುಗಳಿಂದ ಬಂಗಾಳದಲ್ಲಿ ಮತಗಳ ಪ್ರಮಾಣ ಕುಸಿಯುತ್ತಿರುವ ಹಿನ್ನೆಲೆ ಬಿಜೆಪಿಗೆ ಇದು ಸವಾಲಾಗಿದೆ. 2021ರಲ್ಲಿ ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಸಿಆರ್‌ಪಿಎಫ್ ಜವಾನ್ ಜಗನ್ನಾಥ್ ರಾಯ್ ಅವರ ಪತ್ನಿ ತಾಪ್ಸಿ ರಾಯ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಟಿಎಂಸಿ ಧುಪ್ಗುರಿ ಮಾಜಿ ಶಾಸಕಿ ಮಿಥಾಲಿ ರಾಯ್ ಬಿಜೆಪಿ ಸೇರಿದ್ದಾರೆ. 2016 ರ ಚುನಾವಣೆಯಲ್ಲಿ ಮಿಥಾಲಿ ಗೆಲುವು ಸಾಧಿಸಿದ್ದರು.

3. ತ್ರಿಪುರಾದ ಸಿಪಹಿಜಾಲಾ ಜಿಲ್ಲೆಯ ಧನಪುರ ಮತ್ತು ಬೊಕ್ಸಾನಗರ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ತ್ರಿಪುರಾ ಉಪಚುನಾವಣೆಯಲ್ಲಿ ಸಿಪಿಎಂ ಮತ್ತು ಬಿಜೆಪಿ ನಡುವೆ ಮುಖಾಮುಖಿ ಸ್ಪರ್ಧೆ ಏರ್ಪಟ್ಟಿದ್ದು, ಕಾಂಗ್ರೆಸ್ ಮತ್ತು ತಿಪ್ರಾ ಮೋಥಾ ಎರಡೂ ಸ್ಥಾನಗಳಲ್ಲಿ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸದ ಕಾರಣ ಸಿಪಿಎಂ ಮುನ್ನಡೆ ಸಾಧಿಸಿದೆ. ಒಂದು ಕಾಲದಲ್ಲಿ ಕಮ್ಯುನಿಸ್ಟರ ಭದ್ರಕೋಟೆಯಾಗಿದ್ದ ಧನಪುರದಲ್ಲಿ ಬಿಜೆಪಿಯ ಬಿಂದು ದೇಬನಾಥ್ ಮತ್ತು ಸಿಪಿಎಂನ ಕೌಶಿಕ್ ಚಂದ್ರ ನಡುವೆ ನೇರ ಹಣಾಹಣಿ ಏರ್ಪಡಲಿದೆ. ಕೇಂದ್ರ ಸಚಿವೆ ಪ್ರೊತಿಮಾ ಭೌಮಿಕ್ ಅವರು ವಿಧಾನಸಭೆಗೆ ರಾಜೀನಾಮೆ ನೀಡಿದ ನಂತರ ಧನಪುರದಲ್ಲಿ ಉಪಚುನಾವಣೆ ಅನಿವಾರ್ಯವಾಗಿತ್ತು.

ಇದಲ್ಲದೇ ಅಲ್ಪಸಂಖ್ಯಾತರ ಪ್ರಾಬಲ್ಯವಿರುವ ಬೋಕ್ಸಾ ನಗರದಲ್ಲಿ ಬಿಜೆಪಿ ತಫಜಲ್ ಹುಸೇನ್ ಅವರನ್ನು ಕಣಕ್ಕಿಳಿಸಿದೆ. ಅವರು ಸಿಪಿಎಂನ ಮಿಜಾನ್ ಹುಸೇನ್ ಅವರನ್ನು ಎದುರಿಸಲಿದ್ದಾರೆ. ಬಿಜೆಪಿ ಅಭ್ಯರ್ಥಿ ತಫಜಲ್ ಫೆಬ್ರವರಿಯಲ್ಲಿ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು. ಇದಲ್ಲದೆ, ಇತರ ಅಭ್ಯರ್ಥಿ ಮಿಜಾನ್ ಬೋಕ್ಸಾ ನಗರದ ಸಿಪಿಎಂ ಶಾಸಕ ಸ್ಯಾಮ್ಸನ್ ಹಕ್ ಅವರ ಮಗ. ಅವರು ಜುಲೈನಲ್ಲಿ ನಿಧನರಾದರು, ಹೀಗಾಗಿ ಖಾಲಿ ಉಳಿದಿದ್ದ ಈ ಕ್ಷೇತ್ರಕ್ಕೆ ಈಗ ಈ ಚುನಾವಣೆ ನಡೆಯುತ್ತಿದೆ.

4. ಗಿರಿದಿಹ್ ಜಿಲ್ಲೆಯ ದುಮ್ರಿ ಕ್ಷೇತ್ರದ ವಿಧಾನಸಭಾ ಉಪಚುನಾವಣೆಗೆ ಎಲ್ಲಾ ಆಡಳಿತಾತ್ಮಕ ಸಿದ್ಧತೆಗಳು ಪೂರ್ಣಗೊಂಡಿವೆ. 373 ಬೂತ್‌ಗಳಲ್ಲಿ ಒಟ್ಟು 29,86,29 ಮತದಾರರು ತಮ್ಮ ಮತ ಚಲಾಯಿಸಲಿದ್ದಾರೆ. ಈ ಕ್ಷೇತ್ರದಲ್ಲಿ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿ ಬೇಬಿ ದೇವಿ ಮತ್ತು ಎನ್‌ಡಿಎ ಅಭ್ಯರ್ಥಿ ಯಶೋದಾ ದೇವಿ ಮಧ್ಯೆ ನೇರ ಸ್ಪರ್ಧೆ ನಡೆಯಲಿದೆ. ಇಂಡಿಯಾ ಮೈತ್ರಿಕೂಟವು ಡುಮ್ರಿಯಿಂದ ತನ್ನ ಗೆಲುವಿನ ಯಾತ್ರೆಯನ್ನು ಪ್ರಾರಂಭಿಸಲಿದೆ ಎಂಬ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಹೇಳಿಕೆ ನೀಡಿದೆ. ಈ ಸ್ಥಾನವು ಎರಡೂ ಮೈತ್ರಿಕೂಟಗಳಿಗೆ ಪ್ರತಿಷ್ಠೆಯಾಗಿದೆ. ಆದರೆ ಜೆಎಂಎಂನಿಂದ ಈ ಸ್ಥಾನವನ್ನು ಕಸಿದುಕೊಳ್ಳಲು ಎನ್‌ಡಿಎ ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.

5. ಕೇರಳದ ಪುತ್ತುಪಲ್ಲಿಯಲ್ಲಿಯೂ ಇಂದು ಮತದಾನ ನಡೆಯಲಿದೆ. ಇಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್‌ನ ಚಾಂಡಿ ಉಮ್ಮನ್, ಸಿಪಿಐಎಂ ನೇತೃತ್ವದ ಎಲ್‌ಡಿಎಫ್‌ನ ಜಾಕ್ ಸಿ ಥಾಮಸ್ ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎಯ ಲಿಗಿನ್‌ಲಾಲ್ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಈ ಕ್ಷೇತ್ರದಲ್ಲಿ 1,76,417 ಮತದಾರರಿದ್ದು, ಇದರಲ್ಲಿ 90,281 ಮಹಿಳೆಯರು, 86,132 ಪುರುಷರು ಮತ್ತು ನಾಲ್ವರು ತೃತೀಯಲಿಂಗಿಗಳಿದ್ದಾರೆ. 1970 ರಲ್ಲಿ ಉಮ್ಮನ್ ಚಾಂಡಿ ಯುಗ ಪ್ರಾರಂಭವಾಗುವ ಮೊದಲು ಕಮೂನಿಸ್ಟ್ ಪಕ್ಷದ ವಶದಲ್ಲಿದ್ದ ಸ್ಥಾನವನ್ನು ಕಾಂಗ್ರೆಸ್ ಗೆಲ್ಲಲು ಹಣಾಹಣಿ ನಡೆಸಿದೆ.

ಕಾಂಗ್ರೆಸ್ ದಿವಂಗತ ಉಮ್ಮನ್ ಚಾಂಡಿ ಅವರ ಪುತ್ರ ಚಾಂಡಿ ಉಮ್ಮನ್ ಅವರನ್ನು ಕಣಕ್ಕಿಳಿಸಿದೆ. ಚಾಂಡಿ ಉಮ್ಮನ್, ವೃತ್ತಿಯಲ್ಲಿ ವಕೀಲರು ಮತ್ತು ಭಾರತೀಯ ಯುವ ಕಾಂಗ್ರೆಸ್‌ನ ಸಕ್ರಿಯ ಸದಸ್ಯರಾಗಿದ್ದರು. ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ಖಾಯಂ ಸದಸ್ಯರೂ ಆಗಿದ್ದರು. ಪಯಣದ ವೇಳೆ ಬರಿಗಾಲಿನಲ್ಲಿ ನಡೆದಾಡಿದ ಅವರು, ಪುತ್ತುಪ್ಪಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲೂ ಅದನ್ನೇ ಪುನರಾವರ್ತಿಸಿದರು. ಜೂನಿಯರ್ ಚಾಂಡಿ ಚುನಾವಣಾ ರಾಜಕೀಯಕ್ಕೆ ಇದು ಮೊದಲ ಪ್ರವೇಶವಾಗಿದೆ.

6. ಉತ್ತರಾಖಂಡದ ಬಾಗೇಶ್ವರದಲ್ಲಿ ಇಂದು ಮತದಾನ ನಡೆಯಲಿದೆ. ಬಾಗೇಶ್ವರ ವಿಧಾನಸಭೆಯಲ್ಲಿ 188 ಬೂತ್‌ಗಳಿದ್ದು, ಒಟ್ಟು 11,8311 ಮತದಾರರಿದ್ದಾರೆ. ಈ ಉಪಚುನಾವಣೆಯಲ್ಲಿ 5 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿಯಿಂದ ಪಾರ್ವತಿ ದಾಸ್, ಕಾಂಗ್ರೆಸ್‌ನಿಂದ ಬಸಂತ್ ಕುಮಾರ್, ಯುಕೆಡಿಯಿಂದ ಅರ್ಜುನ್ ದೇವ್, ಉತ್ತರಾಖಂಡ ಪರಿವರ್ತನ್ ಪಕ್ಷದಿಂದ ಭಗವತ್ ಕೊಹ್ಲಿ ಮತ್ತು ಎಸ್‌ಪಿಯಿಂದ ಭಗವತಿ ಪ್ರಸಾದ್ ಕಣದಲ್ಲಿದ್ದಾರೆ. ಈ ವರ್ಷದ ಏಪ್ರಿಲ್‌ನಲ್ಲಿ ಬಿಜೆಪಿ ಶಾಸಕ ಚಂದನ್ ರಾಮ್ ದಾಸ್ ನಿಧನದ ನಂತರ ಉತ್ತರಾಖಂಡದ ಬಾಗೇಶ್ವರ ವಿಧಾನಸಭಾ ಕ್ಷೇತ್ರವು ತೆರವಾಗಿತ್ತು. ಹಾಗಾಗಿಯೇ ಈ ವಿಚಾರವಾಗಿ ಉಪಚುನಾವಣೆ ನಡೆಯುತ್ತಿದೆ. ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಪಾರ್ವತಿ ದಾಸ್ ಅವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಮಾಡಿದೆ. ಪಾರ್ವತಿ ದಾಸ್ ಅವರು ದಿವಂಗತ ಬಿಜೆಪಿ ಶಾಸಕ ಚಂದನ್ ರಾಮ್ ದಾಸ್ ಅವರ ಪತ್ನಿ.

ಓದಿ:ಜಿ20 ಶೃಂಗಸಭೆ: ಸೆ.8 ರಿಂದ 10 ರವರೆಗೆ ದೆಹಲಿಯಲ್ಲಿ ವ್ಯಾಪಾರ ಚಟುವಟಿಕೆಗಳಿಗೆ ನಿರ್ಬಂಧ

ABOUT THE AUTHOR

...view details