ನವದೆಹಲಿ: ದೇಶದ ಆರು ರಾಜ್ಯದ ಏಳು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ ಫಲಿತಾಂಶ ಹೊರ ಬಿದ್ದಿದೆ. ಕೇಂದ್ರದ ಆಡಳಿತಾರೂಢ ಬಿಜೆಪಿ ಮತ್ತು ಪ್ರಾದೇಶಿಕ ಪಕ್ಷಗಳ ನಡುವಿನ ನೇರ ಹಣಾಹಣಿ ಎಂದೇ ಬಣ್ಣಿಸಲಾದ ಈ ಚುನಾವಣೆಯಲ್ಲಿ ಈಗಾಗಲೇ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಆರ್ಜೆಡಿ ಮತ್ತು ಶಿವಸೇನೆ, ಟಿಆರ್ಎಸ್ಗೆ ತಲಾ ಒಂದೊಂದು ಕ್ಷೇತ್ರದಲ್ಲಿ ಗೆಲುವು ಸಿಕ್ಕಿದೆ.
ಬಿಹಾರ: ಆರ್ಜೆಡಿಯ ನೀಲಂ ದೇವಿ ಆರ್ಜೆಡಿ, ಬಿಜೆಪಿಗೆ ತಲಾ 1 ಬಿ'ಹಾರ':ಜೆಡಿಯು ಮತ್ತು ಆರ್ಜೆಡಿ ಮೈತ್ರಿ ಸರ್ಕಾರ ರಚನೆಯ ಬಿಹಾರದ ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಮತ್ತು ಆರ್ಜೆಡಿ ತಲಾ ಒಂದೊಂದು ಸ್ಥಾನ ಗೆದ್ದಿವೆ. ಮೋಕಮಾ ಕ್ಷೇತ್ರವನ್ನು ಆರ್ಜೆಡಿ ಮರುವಶಕ್ಕೆ ಪಡೆಯುವಲ್ಲಿ ಸಫಲವಾಗಿದೆ. ಬಿಜೆಪಿ ಅಭ್ಯರ್ಥಿ ಸೋನಂ ದೇವಿಯನ್ನು ಆರ್ಜೆಡಿಯ ನೀಲಂ ದೇವಿ 16 ಸಾವಿರ ಮತಗಳಿಂದ ಸೋಲಿಸಿದ್ದಾರೆ. ಸೋನಂ 63,003 ಮತಗಳನ್ನು ಪಡೆದರೆ, ನೀಲಂ 79,744 ಮತಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡು ಗೆಲುವಿನ ನಗೆ ಬೀರಿದ್ದಾರೆ.
ಬಿಹಾರ: ಬಿಜೆಪಿಯ ಸುಕುಮಾ ದೇವಿ ಇತ್ತ, ಗೋಪಾಲ್ ಗಂಜ್ ಕ್ಷೇತ್ರದಲ್ಲಿ ಬಿಜೆಪಿಯ ಸುಕುಮಾ ದೇವಿ ಜಯಭೇರಿ ಬಾರಿಸಿದ್ದಾರೆ. ಆರ್ಜೆಡಿ ಅಭ್ಯರ್ಥಿ ಮೋಹನ್ ಪ್ರಸಾದ್ ಗುಪ್ತಾ ಕೆಲವೇ ಮತಗಳ ಅಂತರದಿಂದ ಸೋಲು ಕಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಕುಸುಮಾ 70,053 ಮತಗಳನ್ನು ಗಳಿಸಿದ್ದರೆ, ಆರ್ಜೆಡಿಯ ಗುಪ್ತಾ 68,259 ಮತಗಳನ್ನು ಪಡೆದರು.
ಹರಿಯಾಣ: ಬಿಜೆಪಿಯ ಭವ್ಯ ಬಿಷ್ಣೋಯಿ ಹರಿಯಾಣದಲ್ಲಿ ಬಿಜೆಪಿಗೆ ಗೆಲುವು:ಹರಿಯಾಣದಲ್ಲಿ ಆಡಳಿತಾರೂಢ ಬಿಜೆಪಿ ಗೆಲುವು ಸಾಧಿಸಿದೆ. ಆದಂಪುರ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜೈ ಪ್ರಕಾಶ್ ಸೋಲು ಅನುಭವಿಸಿದ್ದು, ಬಿಜೆಪಿಯ ಭವ್ಯಾ ಬಿಷ್ಣೋಯಿ ಜಯ ದಾಖಲಿಸಿದ್ದಾರೆ. ಕಾಂಗ್ರೆಸ್ನ ಜೈಪ್ರಕಾಶ್ 51,752 ಮತಗಳನ್ನು ಪಡೆದಿದ್ದು, ಭವ್ಯಾ ಬಿಷ್ಣೋಯಿ 67,492 ಮತಗಳನ್ನು ಪಡೆದು ಗೆಲುವು ಕಂಡಿದ್ದಾರೆ.
ಮಹಾರಾಷ್ಟ್ರ: ಉದ್ಧವ್ ಠಾಕ್ರೆ ಬಣದ ಅಭ್ಯರ್ಥಿ ರುತುಜಾ ರಮೇಶ್ ಲಟ್ಕೆ ಮಹಾರಾಷ್ಟ್ರದಲ್ಲಿ ಉದ್ಧವ್ ಬಣಕ್ಕೆ ಜೈ: ಇತ್ತೀಚೆಗೆ ರಾಜಕೀಯ ಬಿಕ್ಕಟ್ಟಿನಿಂದ ಸಾಕಷ್ಟು ಸುದ್ದಿಯಾಗಿದ್ದ ಮಹಾರಾಷ್ಟ್ರದಲ್ಲಿ ಮತದಾರರು ಅಚ್ಚರಿಯ ಫಲಿತಾಂಶ ನೀಡಿದ್ದಾರೆ. ಅಂಧೇರಿ ಪೂರ್ವ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಶಿವಸೇನೆಯ ಉದ್ಧವ್ ಠಾಕ್ರೆ ಬಣದ ಅಭ್ಯರ್ಥಿ ರುತುಜಾ ರಮೇಶ್ ಲಟ್ಕೆ 66,550 ಮತಗಳನ್ನು ಪಡೆದು ಭರ್ಜರಿ ಗೆಲುವು ಸಾಧಿಸಿದ್ದಾರೆ. ಬೇರೆ ಯಾವುದೇ ಅಭ್ಯರ್ಥಿ ಕಠಿಣ 2 ಸಾವಿರ ಮತಗಳನ್ನೂ ಪಡೆಯಲು ಸಾಧ್ಯವಾಗಿಲ್ಲ.
ಒಡಿಶಾ: ಬಿಜೆಪಿಯ ಸೂರ್ಯಬಂಶಿ ಸೂರಜ್ ಒಡಿಶಾದಲ್ಲಿ ಬಿಜೆಡಿಗೆ ಶಾಕ್: ಬಿಡಿಶಾದಲ್ಲೂ ಅಚ್ಚರಿ ಫಲಿತಾಂಶ ಬರುತ್ತಿದೆ. ಧಮ್ನಗರ ಉಪಚುನಾವಣೆಯಲ್ಲಿ ಆಡಳಿತಾರೂಢ ಬಿಜೆಡಿಗೆ ಮತದಾರರು ಶಾಕ್ ನೀಡಿದ್ದಾರೆ. ಬಿಜೆಪಿಯ ಸೂರ್ಯಬಂಶಿ ಸೂರಜ್ 80,351 ಮತ ಪಡೆದು, 9,881 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಬಿಜೆಡಿಯ ಅಬಂತಿ ದಾಸ್ 70,470 ಮತ ಪಡೆದಿದ್ದಾರೆ.
ತೆಲಂಗಾಣ: ಟಿಆರ್ಎಸ್ ಅಭ್ಯರ್ಥಿ ಕೆ.ಪ್ರಭಾಕರ್ ರೆಡ್ಡಿ ತೆಲಂಗಾಣದಲ್ಲಿ ನೇರಾ-ನೇರ ಪೈಪೋಟಿ: ತೆಲಂಗಾಣದಲ್ಲಿ ಆಡಳಿತಾರೂಢ ಟಿಆರ್ಎಸ್ ಮತ್ತು ಬಿಜೆಪಿ ನಡುವೆ ನೇರಾ-ನೇರ ಪೈಪೋಟಿ ಏರ್ಪಟ್ಟಿತ್ತು. ಮುನುಗೋಡು ಕ್ಷೇತ್ರದಲ್ಲಿ ಒಟ್ಟಾರೆ 48 ಅಭ್ಯರ್ಥಿಗಳು ಕಣದಲ್ಲಿದ್ದರು. ಟಿಆರ್ಎಸ್ ಅಭ್ಯರ್ಥಿ ಕೆ.ಪ್ರಭಾಕರ್ ರೆಡ್ಡಿ ಹಾಗೂ ಬಿಜೆಪಿಯ ಅಭ್ಯರ್ಥಿ ಕೆ.ರಾಜ್ಗೋಪಾಲ್ ರೆಡ್ಡಿ ನಡುವೆ ಗೆಲುವಿಗಾಗಿ ಹೋರಾಟ ನಡೆದಿತ್ತು. ಕೊನೆಗೆ ಟಿಆರ್ಎಸ್ 10 ಸಾವಿರಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದೆ.
ಉತ್ತರ ಪ್ರದೇಶ: ಬಿಜೆಪಿ ಅಭ್ಯರ್ಥಿ ಅಮನ್ ಗಿರಿ ಉತ್ತರ ಪ್ರದೇಶದಲ್ಲಿ ಕಮಲಕ್ಕೆ ಜಯ: ಉತ್ತರ ಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿಗೆ ಮತದಾರರು ಜೈ ಅಂದಿದ್ದಾರೆ. ಗೋಲ ಗೋಕರ್ಣನಾಥ್ ಕ್ಷೇತ್ರದಲ್ಲಿ ಕಮಲ ಪಕ್ಷದ ಅಭ್ಯರ್ಥಿ ಅಮನ್ ಗಿರಿ 1.24 ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದು ಗೆಲುವ ಸಾಧಿಸಿದ್ದಾರೆ. ಸಮಾಜವಾದಿ ಪಕ್ಷದ ವಿನಯ್ ತಿವಾರಿ 90 ಸಾವಿರ ಮತಗಳನ್ನು ಪಡೆದಿದ್ದಾರೆ.
ಇದನ್ನೂ ಓದಿ:ತಾಯಿ, ಸಹೋದರಿ ಸೇರಿ ಕುಟುಂಬದ ನಾಲ್ವರ ಕೊಚ್ಚಿ ಕೊಲೆಗೈದ 15 ವರ್ಷದ ಬಾಲಕ!