ಕೋಲ್ಕತ್ತಾ:ಪಶ್ಚಿಮಬಂಗಾಳ ಮತ್ತೊಂದು ಚುನಾವಣೆಗೆ ಸಜ್ಜಾಗುತ್ತಿದೆ. ಈ ಬಾರಿ 7 ವಿಧಾಸನಭೆ ಕ್ಷೇತ್ರಗಳಿಗೆ ಬೈ ಎಲೆಕ್ಷನ್ ನಡೆಯಲಿದೆ ಎಂದು ತಿಳಿದು ಬಂದಿದೆ. ಬಹುಷ್ಯ ಸೆಪ್ಟೆಂಬರ್ 2021ರಲ್ಲಿ ಈ ಚುನಾವಣೆ ನಿಗದಿಯಾಗಬಹುದು ಎಂದು ತಿಳಿದು ಬಂದಿದೆ.
ಈ ಸಂಬಂಧ ಕೇಂದ್ರ ಚುನಾವಣಾ ಆಯೋಗ ಶೀಘ್ರ ಚುನಾವಣೆ ನಡೆಸುವ ಬಗ್ಗೆ ದಿನಾಂಕ ನಿಗದಿ ಮಾಡಲಿದೆ ಹಾಗೂ ಈ ಬಗೆಗಿನ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿದು ಬಂದಿದೆ. ಭಾಬನಿಪುರ, ಖ್ರದಾ,ಶಾಂತಿಪುರ, ದಿನ್ಹತ್, ಗೋಸಬಾ, ಸಂಶೇರ್ಗಂಜ್ ಹಾಗೂ ಜಾಂಗಿಪುರ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.
ಇದನ್ನೂ ಓದಿ: ಕಲ್ಲು ಗಣಿಗಾರಿಕೆಯಲ್ಲಿ ಕುಸಿತ: ಮೂವರು ಮಹಿಳೆಯರು ಸೇರಿ ಏಳು ಕಾರ್ಮಿಕರ ಸಾವು
ವಿಶ್ವಕರ್ಮಾ ಪೂಜೆಯ ಬಳಿಕ ರಾಜ್ಯದಲ್ಲಿ ಉಪ ಚುನಾವಣೆ ನಡೆಯಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಈಗಾಗಲೇ ಚುನಾವಣಾ ಆಯೋಗ ಹಲವು ಕ್ಷೇತ್ರಗಳಲ್ಲಿ ಅಧಿಕಾರಿಗಳು ಚುನಾವಣೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ ಆಡಳಿತಾರೂಢ ಟಿಎಂಸಿ ಪಕ್ಷ ಇದಕ್ಕೆ ಸರ್ವಸನ್ನದ್ಧವಾಗಿದೆ. ಆದಷ್ಟು ಬೇಗ ಚುನಾವಣೆ ಮುಗಿದು ಬಿಡಲಿ ಎಂಬ ಮನಸ್ಥಿತಿಯಲ್ಲಿ ಇವೆ.