ನವದೆಹಲಿ: 2022 ರ ಏಪ್ರಿಲ್ ವೇಳೆಗೆ ಎಲ್ಲಾ ರಫೇಲ್ ವಿಮಾನಗಳು ಫ್ರಾನ್ಸ್ನಿಂದ ಭಾರತಕ್ಕೆ ಬರಲಿವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭರವಸೆ ನೀಡಿದ್ದಾರೆ.
ಇಂದಿನ ರಾಜ್ಯಸಭೆ ಕಲಾಪದಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ಈಗಾಗಲೇ 11 ರಫೇಲ್ ವಿಮಾನಗಳು ಭಾರತಕ್ಕೆ ಬಂದಿವೆ. ಈ ಮಾರ್ಚ್ ವೇಳೆಗೆ 17 ರಫೇಲ್ ಜೆಟ್ಗಳನ್ನು ನಾವು ಹೊಂದಿರುತ್ತೇವೆ. ಮುಂದಿನ ವರ್ಷ ಏಪ್ರಿಲ್ ವೇಳೆಗೆ ಎಲ್ಲಾ ಅಂದರೆ 36 ರಫೇಲ್ ಯುದ್ಧ ವಿಮಾನಗಳು ಭಾರತೀಯ ಸೇನೆಯಲ್ಲಿರಲಿವೆ ಎಂದರು.
ನಾವು ದೇಶೀಕರಣಕ್ಕೆ ಒತ್ತು ನೀಡುತ್ತಿದ್ದೇವೆ. 101 ರಕ್ಷಣಾ ಸಾಮಗ್ರಿಗಳನ್ನು ಬೇರೆ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುತ್ತಿಲ್ಲ. ಬದಲಾಗಿ ನಮ್ಮ ದೇಶದಲ್ಲೇ ಭಾರತೀಯರಿಂದ ತಯಾರಿಸಿದ್ದೇವೆ ಎಂದು ರಾಜ್ಯಸಭೆಯಲ್ಲಿ ಮುಂದಿನ ದಿನಗಳಲ್ಲಿ ರಕ್ಷಣಾ ವಲಯವನ್ನು ಖಾಸಗೀಕರಣಗೊಳಿಸುವ ಯಾವುದೇ ಸಂಭವನೀಯತೆ ಇದೆಯೇ ಎಂಬ ಪ್ರಶ್ನೆಗೆ ಸಚಿವರು ಉತ್ತರ ನೀಡಿದ್ದಾರೆ.