ಮುಂಬೈ: ಕೋವಿಡ್ ಎರಡನೇ ಅಲೆ ನಡುವೆ ಗಂಗಾ ನದಿಯಲ್ಲಿ ಮೃತ ದೇಹಗಳು ತೇಲುತ್ತಿರುವುದಕ್ಕೆ ಬಿಟೌನ್ ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಆಘಾತ ವ್ಯಕ್ತಪಡಿಸಿದ್ದಾರೆ.
ಗಂಗಾ ನದಿಯಲ್ಲಿ ತೇಲಿ ಬಂದ ಶವಗಳು: ಆಘಾತ ವ್ಯಕ್ತಪಡಿಸಿದ ಬಿಟೌನ್ ಸೆಲೆಬ್ರಿಟಿಗಳು - ಜಾವೇದ್ ಜಾಫೆರಿ,
ಗಂಗಾ ನದಿಯಲ್ಲಿ ತೇಲುತ್ತಿರುವ ಶವಗಳ ಬಗ್ಗೆ ಬಾಲಿವುಡ್ ಸೆಲೆಬ್ರಿಟಿಗಳು ಸೋಷಿಯಲ್ ಮೀಡಿಯಾದಲ್ಲಿ ಆಘಾತ ವ್ಯಕ್ತಪಡಿಸಿದ್ದಾರೆ. ಸೋಮವಾರ, ಬಕ್ಸಾರ್ ಜಿಲ್ಲೆಯ ಗಂಗಾ ತೀರದಲ್ಲಿ ಕೊಳೆತ ಸುಮಾರು 45 ಮೃತ ದೇಹಗಳು ಪತ್ತೆಯಾಗಿದ್ದು, ಈ ಶವಗಳು ಉತ್ತರ ಪ್ರದೇಶದ ಘಾಜಿಪುರ, ವಾರಣಾಸಿ ಅಥವಾ ಪ್ರಯಾಗರಾಜ್‌ನ ಅಪ್‌ಸ್ಟ್ರೀಮ್ ಜಿಲ್ಲೆಗಳಿಂದ ತೇಲಿಬಂದಿವೆ.
![ಗಂಗಾ ನದಿಯಲ್ಲಿ ತೇಲಿ ಬಂದ ಶವಗಳು: ಆಘಾತ ವ್ಯಕ್ತಪಡಿಸಿದ ಬಿಟೌನ್ ಸೆಲೆಬ್ರಿಟಿಗಳು B'wood on floating corpses:](https://etvbharatimages.akamaized.net/etvbharat/prod-images/768-512-11735123-thumbnail-3x2-vis.jpg)
ಆಘಾತ ವ್ಯಕ್ತಪಡಿಸಿದ ಬಿಟೌನ್ ಸೆಲೆಬ್ರಿಟಿಗಳು
ನಟ-ನಿರ್ಮಾಪಕ ಫರ್ಹಾನ್ ಅಖ್ತರ್ ಟ್ವೀಟ್ ಮಾಡಿ "ನದಿಗಳಲ್ಲಿ ತೇಲುತ್ತಿರುವ ಮತ್ತು ದಡದಲ್ಲಿ ಕೊಳೆತ ಶವಗಳ ಸುದ್ದಿ ಹೃದಯ ವಿದ್ರಾವಕವಾಗಿದೆ. ವೈರಸ್ ಅನ್ನು ಒಂದು ದಿನ ಸೋಲಿಸಲಾಗುವುದು. ಆದರೆ ವ್ಯವಸ್ಥೆಯಲ್ಲಿನ ಈ ವೈಫಲ್ಯಗಳಿಗೆ ಹೊಣೆಗಾರಿಕೆ ಇರಬೇಕು. ಅಲ್ಲಿಯವರೆಗೆ, ಸಾಂಕ್ರಾಮಿಕ ರೋಗಗಳಿಂದ ಮುಕ್ತಿ ಸಿಗಲ್ಲ ಎಂದಿದ್ದಾರೆ.
ನಟಿ-ನಿರ್ಮಾಪಕಿ ಪೂಜಾ ಭಟ್ ನೀವು ಮಿಠಾಯಿ ಮಾಡಬಹುದು. ಆದರೆ ನೀವು ಮೃತ ದೇಹಗಳನ್ನು ಹೇಗೆ ಮರೆಮಾಚುತ್ತೀರಿ. ಇದು ಮುಂದಿನ ತಲೆಮಾರುಗಳವರೆಗೆ ನಮ್ಮನ್ನು ಕಾಡುತ್ತದೆ ಎಂದು ಬರೆದುಕೊಂಡಿದ್ದಾರೆ. ಹಾಸ್ಯನಟ ಜಾವೇದ್ ಜಾಫೆರಿ ಇದು ದುರಂತ ಮತ್ತು ಭಯಾನಕ ಎಂದಿದ್ದಾರೆ.