ಅಶೋಕನಗರ (ಮಧ್ಯಪ್ರದೇಶ):ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಗಗನಮುಖಿಯಾಗಿದೆ. ಟೊಮೆಟೊ ಬೆಲೆಯಂತೂ ತುಂಬಾ ಏರಿಕೆಯಾಗಿದೆ. ಪ್ರಸ್ತುತ ಒಂದು ಕೆಜಿ ಟೊಮೆಟೊ 150ರಿಂದ 200ರವರೆಗೆ ಮಾರಾಟವಾಗುತ್ತಿದೆ. ಇದರಿಂದ ಗ್ರಾಹಕರು ಜೇಬಿಗೆ ಕತ್ತರಿ ಬಿದ್ದಂತಾಗಿದೆ. ಆದರೆ ಈಗ ಮಾರುಕಟ್ಟೆಗೆ ಟೊಮೆಟೊ ಆವಕ ಇಳಿಕೆ ಕಂಡಿದೆ. ಆಹಾರ ದೈತ್ಯ ಮೆಕ್ಡೊನಾಲ್ಡ್ ತನ್ನ ಮೆನುವಿನಿಂದ ಟೊಮೆಟೊ ಅನ್ನು ಕೈಬಿಟ್ಟಿದೆ ಎಂಬುದರ ಕುರಿತು ವರದಿಯಾಗಿದೆ.
ಹಬ್ಬ ಹರಿದಿನಗಳಲ್ಲಿ ಗ್ರಾಹಕರನ್ನು ಸೆಳೆಯಲು ವಿಶೇಷ ರಿಯಾಯಿತಿ ನೀಡಲಾಗುತ್ತದೆ. ಆದರೆ, ಕೆಲವು ವ್ಯಾಪಾರಿಗಳು ವಿಭಿನ್ನವಾಗಿ ಯೋಚಿಸುತ್ತಾರೆ. ಗ್ರಾಹಕರ ಗಮನ ಸೆಳೆದು ತಮ್ಮ ಮಾರಾಟವನ್ನು ಹೆಚ್ಚಿಸಲು ಹೊಸ ಯೋಜನೆಗಳನ್ನು ಪ್ರಾರಂಭಿಸುತ್ತಾರೆ. ಪ್ರಸ್ತುತ ಮೊಬೈಲ್ ಅಂಗಡಿಯವರಲ್ಲಿ ಭಾರಿ ಪೈಪೋಟಿ ನಡೆಯುತ್ತಿತ್ತು. ಇದರ ಹಿನ್ನೆಲೆಯಲ್ಲಿ ಮೊಬೈಲ್ ಅಂಗಡಿಕಾರರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಹೊಸ ಯೋಜನೆಗಳನ್ನು ಪರಿಚಯಿಸಿದ್ದಾರೆ. ಮಧ್ಯಪ್ರದೇಶದ ಅಶೋಕ್ ನಗರದ ಮೊಬೈಲ್ ಶೋರೂಮ್ನಲ್ಲಿ ಇಂತಹ ಒಂದು ವಿಶೇಷ ಘಟನೆಯೊಂದು ವರದಿಯಾಗಿದೆ. ಹೌದು, ಸ್ಮಾರ್ಟ್ಫೋನ್ ಖರೀದಿಸುವ ಗ್ರಾಹಕರಿಗೆ 2 ಕೆಜಿ ಟೊಮೆಟೊ ಉಚಿತವಾಗಿ ನೀಡಲಾಗುತ್ತಿದೆ.
ಇದನ್ನೆಲ್ಲ ಪರಿಗಣಿಸಿ ಮೊಬೈಲ್ ಅಂಗಡಿಯವ ಅಭಿಷೇಕ್ ಅಗರ್ವಾಲ್ ತಮ್ಮ ಗ್ರಾಹಕರಿಗಾಗಿ ವಿಶೇಷ ಯೋಜನೆಯೊಂದನ್ನು ನೀಡಿದ್ದಾರೆ. ಸ್ಮಾರ್ಟ್ಫೋನ್ ಖರೀದಿಸುವಾಗ 2 ಕೆಜಿ ಟೊಮ್ಯಾಟೊ ಉಡುಗೊರೆಯಾಗಿ ನೀಡಲಾಗುತ್ತಿದೆ. ಈ ಯೋಜನೆ ಜಾರಿಯಾದ ಕೂಡಲೇ ಗ್ರಾಹಕರ ಸಂಖ್ಯೆ ಹೆಚ್ಚುತ್ತಿದೆ ಎನ್ನುತ್ತಾರೆ ಅಂಗಡಿಯವರು ಅಭಿಪ್ರಾಯ.