ಕರ್ನಾಟಕ

karnataka

ETV Bharat / bharat

ಅತ್ಯಾಚಾರ ಮಾಡಿ, ₹2 ಕೋಟಿ ಹಣವನ್ನೂ ಪಡೆದು ದಾವುದ್‌ ಹೆಸರಲ್ಲಿ ಬೆದರಿಸಿದ 75ರ ಹರೆಯದ ಉದ್ಯಮಿ! - threat to rape case victim

ಅಂಧೇರಿಯಲ್ಲಿ ಉದ್ಯಮಿಯೋರ್ವ ಮಹಿಳೆಯ ಮೇಲೆ ಅತ್ಯಾಚಾರ, ಹಲ್ಲೆ ನಡೆಸಿದ್ದಲ್ಲದೇ ದಾವೂದ್ ಇಬ್ರಾಹಿಂ ಹೆಸರಿನಲ್ಲಿ ಕೊಲೆ ಬೆದರಿಕೆ ಹಾಕಿರುವ ಕುರಿತು ಪ್ರಕರಣ ದಾಖಲಾಗಿದೆ.

Mumbai rape case
ಮುಂಬೈ ರೇಪ್ ಕೇಸ್

By

Published : Jun 16, 2022, 4:43 PM IST

Updated : Jun 16, 2022, 8:17 PM IST

ಮುಂಬೈ: ಅಂಧೇರಿಯ ಜುಹುವಿನ ಪಂಚತಾರಾ ಹೋಟೆಲ್‌ನಲ್ಲಿ 35 ವರ್ಷದ ಮಹಿಳೆಯ ಮೇಲೆ 75 ವರ್ಷದ ಉದ್ಯಮಿಯೊಬ್ಬ ಅತ್ಯಾಚಾರವೆಸಗಿರುವ ಆರೋಪ ಕೇಳಿಬಂದಿದೆ. ಆರೋಪಿಯ ವಿರುದ್ಧ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಅಂಬೋಲಿ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ (ಬರಹಗಾರರು) ದೂರು ದಾಖಲಿಸಿದ್ದಾರೆ. ಉದ್ಯಮಿಯೊಬ್ಬರು ಮೇ ತಿಂಗಳಲ್ಲಿ ಅಂಧೇರಿಯ ಜೆಬಿ ನಗರದಲ್ಲಿರುವ ದಿ ಆನ್ ಟೈಮ್ ಹೋಟೆಲ್‌ನಲ್ಲಿ ತನ್ನ ಮೇಲೆ ಅತ್ಯಾಚಾರ, ಹಲ್ಲೆ ನಡೆಸಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

"ತನ್ನಿಂದ 2 ಕೋಟಿ ರೂಪಾಯಿಯನ್ನು ಪಡೆದ ಉದ್ಯಮಿ ಅದನ್ನೂ ಹಿಂದಿರುಗಿಸಿಲ್ಲ. ದೌರ್ಜನ್ಯದ ವಿರುದ್ಧ ಧ್ವನಿ ಎತ್ತಲು ಪ್ರಯತ್ನಿಸುತ್ತಿದ್ದಾಗ, ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹೆಸರಿನಲ್ಲಿ ಆತ ಪ್ರಾಣ ಬೆದರಿಕೆ ಹಾಕುತ್ತಿದ್ದಾನೆ. ದಾವೂದ್ ಇಬ್ರಾಹಿಂ ನನ್ನ ಸ್ನೇಹಿತ. ಹಾಜಿ ಮಸ್ತಾನ್ ನನ್ನ ಪತ್ನಿಯ ಸಹೋದರಿಯ ಪತಿ. ಈ ವಿಷಯ ಹೊರಬಂದರೆ ಕೊಲೆ ಮಾಡುವುದಾಗಿ ಉದ್ಯಮಿ ಬೆದರಿಕೆ ಹಾಕಿದ್ದಾನೆ" ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:ಕುಲ್ಗಾಮ್​ನಲ್ಲಿ ಅಪಘಾತ: 8 ಸಿಆರ್‌ಪಿಎಫ್ ಯೋಧರು, ನಾಗರಿಕರಿಗೆ ಗಾಯ

ಅಂಬೋಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಗಾಗಿ ಅಂಧೇರಿ ಎಂಐಡಿಸಿ ಪೊಲೀಸರಿಗೆ ಪ್ರಕರಣ ಹಸ್ತಾಂತರಿಸಿದ್ದಾರೆ. ಆರೋಪಿ ಉದ್ಯಮಿ ವಿರುದ್ಧ ಐಪಿಸಿ ಸೆಕ್ಷನ್ 376 (2) ಎನ್, 504ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಯುತ್ತಿದೆ.

Last Updated : Jun 16, 2022, 8:17 PM IST

ABOUT THE AUTHOR

...view details