ಕರ್ನಾಟಕ

karnataka

ETV Bharat / bharat

100 ವಲಸೆ ಕಾರ್ಮಿಕರಿದ್ದ ಬಸ್ ಪಲ್ಟಿ: 15 ಮಂದಿಗೆ ಗಾಯ! - ಆಗ್ರಾ ಲಕ್ನೋ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಅಪಘಾತ

ರಾಜಸ್ಥಾನದಿಂದ ಬಿಹಾರಕ್ಕೆ ಪ್ರಯಾಣಿಸುತ್ತಿದ್ದ ಬಸ್ ಟೈರ್ ಸ್ಫೋಟಗೊಂಡ ಪರಿಣಾಮ ನಿಯಂತ್ರಣ ಕಳೆದುಕೊಂಡು ಬಸ್ ಪಲ್ಟಿಯಾಗಿದೆ. ಗಾಯಾಳುಗಳಿಗೆ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ.

bus-with-100-labourers-overturned-in-agra-lucknow-expressway
bus-with-100-labourers-overturned-in-agra-lucknow-expressway

By

Published : Apr 26, 2021, 5:32 PM IST

ಕನ್ನೌಜ್ (ಉತ್ತರ ಪ್ರದೇಶ): ಆಗ್ರಾ ಲಖನೌ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ 100 ವಲಸೆ ಕಾರ್ಮಿಕರನ್ನು ಸಾಗಿಸುತ್ತಿದ್ದ ಖಾಸಗಿ ಬಸ್ ಪಲ್ಟಿಯಾಗಿದೆ. ಅಪಘಾತದಲ್ಲಿ 15 ವಲಸಿಗರು ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಬಿಲ್ಹೌರ್‌ನ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ, ಪ್ರಾಥಮಿಕ ಚಿಕಿತ್ಸೆಯ ನಂತರ ಡಿಸ್ಚಾರ್ಜ್ ಮಾಡಲಾಗಿದೆ.

ವಲಸೆ ಕಾರ್ಮಿಕರಿದ್ದ ಬಸ್ ಪಲ್ಟಿ

ರಾಜಸ್ಥಾನದಿಂದ ಬಿಹಾರಕ್ಕೆ ಪ್ರಯಾಣಿಸುತ್ತಿದ್ದ ಬಸ್ ಟೈರ್ ಸ್ಫೋಟಗೊಂಡ ಪರಿಣಾಮ ನಿಯಂತ್ರಣ ಕಳೆದುಕೊಂಡು ಅಪಘಾತ ಸಂಭವಿಸಿದೆ. ಅಪಘಾತದ ನಂತರ, ಸ್ಥಳೀಯರು ಸ್ಥಳಕ್ಕೆ ಧಾವಿಸಿ ಪಲ್ಟಿಯಾದ ಬಸ್​​​​ನಿಂದ ಹೊರಬರಲು ಕಾರ್ಮಿಕರಿಗೆ ಸಹಾಯ ಮಾಡಿದ್ದಾರೆ.

ವಲಸೆ ಕಾರ್ಮಿಕರಿದ್ದ ಬಸ್ ಪಲ್ಟಿ

ಬಳಿಕ ಸ್ಥಳೀಯ ಪೊಲೀಸರು ಮತ್ತು ಯುಪಿ ಡಿಎ ಸ್ಥಳಕ್ಕೆ ತಲುಪಿ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಿದ್ದಾರೆ. ಗಾಯಗೊಂಡ ಪ್ರಯಾಣಿಕರು ಚಿಕಿತ್ಸೆ ಪಡೆದು ಮತ್ತೊಂದು ಬಸ್‌ನಲ್ಲಿ ಬಿಹಾರಕ್ಕೆ ತೆರಳಿದ್ದಾರೆ.

ABOUT THE AUTHOR

...view details