ಗಿರಿದಿಹ್ (ಜಾರ್ಖಂಡ್): ಜಾರ್ಖಂಡ್‌ನ ಗಿರಿದಿಹ್‌ನಲ್ಲಿ ಆಗಸ್ಟ್ 5ರಂದು ಸಂಭವಿಸಿದ ಭೀಕರ ಬಸ್ ಅಪಘಾತದ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಅಚ್ಚರಿಗೊಳಗಾಗಿದ್ದಾರೆ. ವಿಮೆ ಪಾಲಿಸಿಯಲ್ಲಿ ಬಸ್ ಅನ್ನು ದ್ವಿಚಕ್ರ ವಾಹನವೆಂದು ಉದ್ದೇಶಪೂರ್ವಕವಾಗಿ ತಪ್ಪಾಗಿ ನಮೂದಿಸಿರುವುದು ಕಂಡುಬಂದಿದೆ. ಇದರ ಪರಿಣಾಮ ಎಲ್ಲ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಿರುವುದು ಮಾತ್ರವಲ್ಲದೇ, ಮೃತರು ಮತ್ತು ಗಾಯಗೊಂಡ ವ್ಯಕ್ತಿಗಳು ಸರಿಯಾದ ರೀತಿಯಲ್ಲಿ ವಿಮೆ ಕ್ಲೈಮ್ ಮಾಡಿಕೊಳ್ಳುವುದರಿಂದ ವಂಚಿತರಾಗಿದ್ದಾರೆ.
ನದಿಗೆ ಬಿದ್ದ ಬಸ್: ಆಗಸ್ಟ್ 5ರ ಸಂಜೆ ರಾಂಚಿಯಿಂದ ಗಿರಿದಿಹ್‌ಗೆ ತೆರಳುತ್ತಿದ್ದ ಬಸ್ ಬರಾಕರ್ ನದಿಗೆ ಉರುಳಿತ್ತು. ಕನಿಷ್ಠ ನಾಲ್ಕು ಜನರು ಸಾವನ್ನಪ್ಪಿದ್ದರು. ಹಲವರು ಗಾಯಗೊಂಡಿದ್ದರು. ಬಸ್ನಿರ್ವಹಿಸಲು ಅಗತ್ಯವಿರುವ ಹಣ ಪಾವತಿಸುವುದನ್ನು ತಪ್ಪಿಸಲು, ಬಸ್ ಮಾಲೀಕರು ದ್ವಿಚಕ್ರ ವಾಹನ ವಿಮೆ ಎಂದು ನಮೂದಿಸುವ ಸಾಧ್ಯತೆ ಹೆಚ್ಚಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ತನಿಖೆಯ ಸಂದರ್ಭದಲ್ಲಿ ಜೆಹೆಚ್ 07 ಹೆಚ್ 2906 ನೋಂದಣಿ ಸಂಖ್ಯೆಯ ಬಸ್ 1130003123010240021524 ನಂಬರ್ನ ವಿಮಾ ಪಾಲಿಸಿ ಹೊಂದಿರುವುದು ಗೊತ್ತಾಗಿದೆ.
ಬಸ್‌ಗೆ ಸ್ಕೂಟರ್ ವಿಮೆ!:ಈ ಪಾಲಿಸಿಯು ಅದೇ ನೋಂದಾಯಿತ ಸಂಖ್ಯೆಗೆ ಸಂಬಂಧಿಸಿದ ಸ್ಕೂಟರ್‌ಗಾಗಿ ಪ್ರೀಮಿಯರ್ ಇನ್ಶೂರೆನ್ಸ್ ಕಂಪನಿ ನೀಡಿದ ಪಾಲಿಸಿಯಾಗಿದೆ. ಅಚ್ಚರಿಯ ಸಂಗತಿಯೆಂದರೆ, ಪಾಲಿಸಿಯಲ್ಲಿ ಪಂಕಜ್ ಕುಮಾರ್ ಎಂಬ ಹೆಸರಿದೆ. ಅಪಘಾತಕ್ಕೀಡಾದ ಬಸ್ ರಾಜು ಖಾನ್ ಹೆಸರಿನಲ್ಲಿ ನೋಂದಣಿಯಾಗಿದೆ. ಈ ಮಾಹಿತಿ ಬೆಳಕಿಗೆ ಬಂದ ನಂತರ ಜಿಲ್ಲಾಧಿಕಾರಿ ನಮನ್ ಪ್ರಿಯೇಶ್ ಲಕ್ಡಾ ಅವರು ತಕ್ಷಣ ವಿವರವಾದ ತನಿಖೆಗೆ ಆದೇಶಿಸಿದ್ದಾರೆ. ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದಾರೆ.
ವಕೀಲರು ಹೇಳಿದ್ದೇನು?:ರಸ್ತೆಯಲ್ಲಿ ಸಂಚರಿಸುವ ಬಸ್‌ಗೆ ಪಾವತಿಸಬೇಕಾದ ಕೆಲವು ತೆರಿಗೆಗಳನ್ನು ತಪ್ಪಿಸಲು ಮಾಲೀಕರು ಈ ರೀತಿಯ ಕೆಟ್ಟ ಕೆಲಸಗಳನ್ನು ಮಾಡಿದ್ದಾರೆ ಎಂದು ವಕೀಲ ಪ್ರವೀಣ್ ಕುಮಾರ್ ಹೇಳಿದರು. ಬಸ್ ಮಾಲೀಕರು ವಿಮೆ ವಂಚನೆ ಮಾಡಿರುವುದು ಸ್ಪಷ್ಟ ಎಂದು ಅವರು ತಿಳಿಸಿದ್ದಾರೆ.