ಸೋನಭದ್ರ( ಉತ್ತರಪ್ರದೇಶ): ಸೋನಭದ್ರ ಜಿಲ್ಲೆಯ ಪಿಪ್ರಖಂಡ್ ಪ್ರದೇಶದಲ್ಲಿ ಬಸ್ ಮತ್ತು ಟ್ರಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ 24 ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ ಏಳು ಮಂದಿ ಸ್ಥಿತಿ ಗಂಭೀರವಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರಿಗೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬಸ್ ಮತ್ತು ಟ್ರಕ್ ನಡುವೆ ಮುಖಾಮುಖಿ ಡಿಕ್ಕಿ.. 24 ಮಂದಿ ಗಾಯ - ಯುಪಿ ಬಸ್ ದುರಂತ
ಬಸ್ ಮತ್ತು ಟ್ರಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ 24 ಮಂದಿ ಗಾಯಗೊಂಡ ಘಟನೆ ಉತ್ತರ ಪ್ರದೇಶದ ಸೋನಭದ್ರ ಜಿಲ್ಲೆಯ ಪಿಪ್ರಖಂಡ್ ಪ್ರದೇಶದಲ್ಲಿ ನಡೆದಿದೆ.

accident
ಭಾನುವಾರ ತಡರಾತ್ರಿ ಖಾಸಗಿ ಬಸ್ವೊಂದು ಛತ್ತೀಸ್‌ಗಢದ ಅಂಬಿಕಾಪುರದಿಂದ ವಾರಾಣಸಿ - ಅಂಬಿಕಾಪುರ ರಸ್ತೆಯ ಸೋನಭದ್ರದ ರೇಣುಕೂಟ್‌ಗೆ ಪ್ರಯಾಣಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ. ಟ್ರಕ್ ಉತ್ತರ ಪ್ರದೇಶದ ಫರೂಖಾಬಾದ್‌ನಿಂದ ಒಡಿಶಾಗೆ ಹೋಗುತ್ತಿತ್ತು ಎಂದು ಬಭಾನಿ ಪೊಲೀಸ್ ಠಾಣೆ ಎಸ್‌ಎಚ್‌ಒ ಮನೋಜ್ ಕುಮಾರ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ:ಧಾರವಾಡದಲ್ಲಿ ಖಾಸಗಿ ಬಸ್ ಲಾರಿ ಡಿಕ್ಕಿ.. ಓರ್ವ ಸಾವು, ಹಲವರಿಗೆ ಗಾಯ