ಕರ್ನಾಟಕ

karnataka

ETV Bharat / bharat

ಟೈರ್​​ ಸ್ಫೋಟಗೊಂಡು ಮೇಲ್ಸೇತುವೆಯಿಂದ​ ಕೆಳಗೆ ಬಿದ್ದ ಬಸ್​... ಓರ್ವ ಸಾವು, ಮೂವರಿಗೆ ಗಂಭೀರ ಗಾಯ - ಗಾಜಿಯಾಬಾದ್ ಬಸ್​ ಅಪಘಾತ

ಉತ್ತರಪ್ರದೇಶದ ಗಾಜಿಯಾಬಾದ್​ನಲ್ಲಿ ಬಸ್​ವೊಂದು ನಿಯಂತ್ರಣ ತಪ್ಪಿ ಮೇಲ್ಸೇತುವೆಯಿಂದ​​ ಕೆಳಗೆ ಬಿದ್ದಿದೆ. ಘಟನೆಯಲ್ಲಿ ಓರ್ವ ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

bus-fell-down-from-a-flyover-in-ghaziabad
ಫ್ಲೈಓವರ್​ ಮೇಲಿಂದ ಕೆಳಗೆ ಬಿದ್ದ ಬಸ್​... ಇಬ್ಬರು ಸಾವು, ಹಲವರಿಗೆ ಗಾಯ

By

Published : Oct 13, 2021, 11:49 PM IST

Updated : Oct 14, 2021, 1:11 AM IST

ಗಾಜಿಯಾಬಾದ್: ಇಲ್ಲಿನ ಭಾಟಿಯಾ ಮೋರ್ ಮೇಲ್ಸೇತುವೆಯಿಂದ​ ಬಸ್​ವೊಂದು ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಪರಿಣಾಮ ಓರ್ವ ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಫ್ಲೈಓವರ್​ ಮೇಲಿಂದ ಕೆಳಗೆ ಬಿದ್ದ ಬಸ್

ಘಾಜಿಯಾಬಾದ್‌ನ ಸಿಹಾನಿ ಗೇಟ್ ಪೊಲೀಸ್ ಠಾಣೆಯ ಭಾಟಿಯಾ ಮೋರ್ ಫ್ಲೈಓವರ್‌ನಲ್ಲಿ ಬುಧವಾರ ರಾತ್ರಿ ಅವಘಡ ಸಂಭವಿಸಿದೆ. ನೋಯ್ಡಾದಿಂದ ಬರುತ್ತಿದ್ದ ಬಸ್​​​ನ ಟೈರ್​ ಸ್ಫೋಟಗೊಂಡ ಹಿನ್ನೆಲೆಯಲ್ಲಿ​ ಚಾಲಕನ ನಿಯಂತ್ರಣ ಕಳೆದುಕೊಂಡು ಫ್ಲೈಓವರ್​ನಿಂದ ಕೆಳಗೆ ಅಪ್ಪಳಿಸಿದೆ ಎಂದು ಗಾಜಿಯಾಬಾದ್ ನಗರ​ ಎಸ್​ಪಿ ನಿಪುಣ್​ ಅಗರ್ವಾಲ್​ ತಿಳಿಸಿದ್ದಾರೆ.

ಮೇಲ್ಸೇತುವೆಯಿಂದ​ ಕೆಳಗೆ ಬಿದ್ದ ಬಸ್

ಬಸ್​ನಲ್ಲಿ 7-8 ಮಂದಿ ಪ್ರಯಾಣಿಸುತ್ತಿದ್ದರು. ಅವಘಡದಿಂದ 2 ಬೈಕ್​ಗಳು ಬಸ್​ನಡಿ ಸಿಲುಕಿದ್ದವು. ಘಟನೆಯಲ್ಲಿ ಓರ್ವ ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಇದನ್ನೂ ಓದಿ:100ಕ್ಕೂ ಹೆಚ್ಚು ಸ್ಥಾನಗಳಲ್ಲಿ ನಟ ವಿಜಯ್​​ ಅಭಿಮಾನಿಗಳಿಗೆ ಜಯ.. ತಮಿಳು ರಾಜಕೀಯದತ್ತ ನಟ ತಳಪತಿ?

Last Updated : Oct 14, 2021, 1:11 AM IST

ABOUT THE AUTHOR

...view details