ಸೂರತ್ (ಗುಜರಾತ್):ಖಾಸಗಿ ಬಸ್ ಚಾಲಕನಿಗೆ ವೈದ್ಯ ಸೇರಿದಂತೆ ನಾಲ್ವರು ದುಷ್ಕರ್ಮಿಗಳು ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಇದರ ಪರಿಣಾಮ ಬಸ್ ಚಾಲಕನ ಕಣ್ಣಿಗೆ ತೀವ್ರ ಗಾಯವಾಗಿದೆ. ಫೆಬ್ರವರಿ 28ರಂದು ಈ ದರ್ಘಟನೆ ನಡೆದಿದೆ. ಭಾನುವಾರ ತಡರಾತ್ರಿ ಈ ಕುರಿತು ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಎರಡು ದಿನಗಳ ಹಿಂದೆ, ಅಂಕುರ್ ಮನ್ಸುಖ್ ಪ್ರಜಾಪತಿ ಎಂದು ಗುರುತಿಸಲಾದ ಆರೋಪಿ ವೈದ್ಯನ ತಾಯಿ ಅಡಾಜನ್ ಸರ್ಕಲ್‌ನಲ್ಲಿ ಬಸ್‌ನಿಂದ ಇಳಿಯಬೇಕಾಗಿತ್ತು. ಆದರೆ, ಸಂಚಾರ ದಟ್ಟಣೆ ಆಗಿದ್ದರಿಂದ ಚಾಲಕನು ಆ ಪ್ರದೇಶದಲ್ಲಿ ನಿಲ್ಲಿಸಲಿಲ್ಲ. ಅವರನ್ನು ಸ್ವಲ್ಪ ದೂರದಲ್ಲಿ ಎಂದರೆ, ಆರೋಪಿಯ ಮನೆಯಿಂದ ಕೊಂಚ ದೂರದಲ್ಲಿ ಭುಲ್ಕಾ ಭವನ ವೃತ್ತದ ಬಳಿ ಇಳಿಸಬೇಕಾಯಿತು ಎಂಬುದು ತಿಳಿದು ಬಂದಿದೆ
ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿದ ಆರೋಪಿಗಳು:ಘಟನೆಯ ಕುರಿತು ಮತ್ತಷ್ಟು ವಿವರಿಸಿದ ಪ್ರಕರಣದ ತನಿಖಾಧಿಕಾರಿ ಎಸ್.ಜೆ ವಾಸವ ಅವರು, ಬಸ್ ಥರಾಯ್ಡ್ನಿಂದ ಸೂರತ್‌ಗೆ ಹೋಗುತ್ತಿತ್ತು. ಆ ಸಮಯದಲ್ಲಿ ಆರೋಪಿಗಳಲ್ಲಿ ಒಬ್ಬರಾದ ಡಾ.ಅಕುನ್ ಪ್ರಜಾಪತಿಯ ತಾಯಿ ಬಸ್‌ನಲ್ಲಿದ್ದರು. ಹೆಚ್ಚಿನ ಟ್ರಾಫಿಕ್‌ನಿಂದ ಬಸ್ ಡ್ರೈವರ್ ಅವರನ್ನು ಅವರ ಮನೆಯಿಂದ ಸ್ವಲ್ಪ ದೂರದಲ್ಲಿ ಇಳಿಸಿದ್ದ. ಇದರಿಂದ ಕೋಪಗೊಂಡು ಆರೋಪಿ ಅಕುನ್, ಮರುದಿನ ಬಸ್ ನಿಲ್ಲಿಸಿದ್ದಾನೆ. ಅವನ ನಾಲ್ವರು ಸ್ನೇಹಿತರೊಂದಿಗೆ ಚಾಲಕನ ಮೇಲೆ ಮನ ಬಂದಂತೆ ಹಲ್ಲೆ ನಡೆಸಿದ್ದಾನೆ ಎಂದು ಅವರು ತಿಳಿಸಿದರು.
ಚಾಲಕನ ಮೇಲೆ ಕ್ರೂರವಾಗಿ ಹಲ್ಲೆ:ಆರೋಪಿಗಳು ಬಸ್‌ನೊಳಗೆ ನುಗ್ಗಿ ವರ್ಧಮಾನ್ ರಜಪೂತ್ ಎಂದು ಗುರುತಿಸಲಾದ ಚಾಲಕನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದರು. ಬಸ್ನ ಚಾಲಕನ ಕ್ಯಾಬಿನ್‌ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಳಿಯ ದೃಶ್ಯ ಸೆರೆಯಾಗಿದೆ. ನಾಲ್ವರು ಆರೋಪಿಗಳು ಚಾಲಕನ ಕ್ಯಾಬಿನ್‌ಗೆ ಪ್ರವೇಶಿಸಿದ್ದು, ಅವರಲ್ಲಿ ಒಬ್ಬ ಆರೋಪಿ ಚಾಲಕನ ಮುಖ ಮತ್ತು ಕುತ್ತಿಗೆಗೆ ಎದ್ವಾ ತದ್ವಾ ಹೊಡೆಯುತ್ತಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿದೆ.