ಛಾಪ್ರಾ (ಬಿಹಾರ್):ಕೇಂದ್ರ ಗೃಹ ಸಚಿವ ಮಿತ್ ಶಾ ಕಾರ್ಯಕ್ರಮ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ಬೈಕ್ಗೆ ಪೊಲೀಸ್ ಬಸ್ವೊಂದು ಡಿಕ್ಕಿ ಹೊಡೆದ ಪರಿಣಾಮ ಮೂವರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ. ಅಪಘಾತದ ನಂತರ ಬೈಕ್ಗೆ ಬೆಂಕಿ ಹೊತ್ತಿಕೊಂಡಿದ್ದು, ಬಳಿಕ ಬಸ್ಗೂ ಬೆಂಕಿ ಆವರಿಸಿದೆ.
ಬಸ್ಸಿನ ಇಂಧನ ಟ್ಯಾಂಕ್ ಸ್ಫೋಟ: ಈ ಇಡೀ ಘಟನೆ ಬಿಹಾರದ ಛಪ್ರಾ-ಸಿವಾನ್ ಹೆದ್ದಾರಿಯ ರಿವಿಲ್ಗಂಜ್ ಬಳಿ ನಡೆದಿದೆ. ಇಲ್ಲಿ ಬಿಹಾರ ಪೊಲೀಸ್ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಬಸ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ. ಬೈಕ್ ಗುದ್ದಿದ ರಭಸಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಬಸ್ಗೂ ಆವರಿಸಿದೆ. ನಂತರ ಬಸ್ಸಿನ ಇಂಧನ ಟ್ಯಾಂಕ್ ಸ್ಫೋಟಗೊಂಡಿದೆ. ಮತ್ತೊಂದೆಡೆ ಬೈಕ್ ಸವಾರ ಹಾಗೂ ಇಬ್ಬರು ಸಹಚರರು ಬಸ್ಗೆ ಸಿಲುಕಿ ಸಜೀವ ದಹನವಾಗಿದ್ದಾರೆ. ಇವರ ವಿಡಿಯೋ ವೈರಲ್ ಆಗಿದೆ.
ಬೈಕ್ ಜೊತೆ ಮೂವರು ಬಸ್ಸಿನಡಿ ಸಿಲುಕಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಬೆಂಕಿ ಹೊತ್ತಿದ ಬಳಿಕ ಬಸ್ನಲ್ಲಿದ್ದ ಪೊಲೀಸರು ತಮ್ಮ ಪ್ರಾಣ ಉಳಿಸಿಕೊಳ್ಳಲು ಹರಸಾಹಸಪಟ್ಟರು. ಆದ್ರೆ ಇದು ವೈರಲ್ ವಿಡಿಯೋ ಆಗಿದ್ದು, ಈ ಬಗ್ಗೆ 'ಈಟಿವಿ ಭಾರತ' ಸತ್ಯಾಸತ್ಯತೆಯನ್ನು ಖಚಿತಪಡಿಸುವುದಿಲ್ಲ.