ನ್ಯೂ ಬರಾಕ್ಪೋರ್ (ಪಶ್ಚಿಮ ಬಂಗಾಳ) : ಮೇ 26 ರಂದು ಕಾರ್ಖಾನೆಯೊಂದರಲ್ಲಿ ಕಾಣಿಸಿಕೊಂಡಿದ್ದ ಬೆಂಕಿಯಲ್ಲಿ ನಾಲ್ವರು ಮೃತಪಟ್ಟಿದ್ದು, ಇಂದು ಮೃತದೇಹಗಳು ಪತ್ತೆಯಾಗಿವೆ. ಮೃತರನ್ನು ಅಮಿತ್ ಸೇನ್, ಸುಬ್ರತಾ ಘೋಷ್, ತನ್ಮಯ್ ಘೋಷ್ ಮತ್ತು ಸ್ವರೂಪ್ ಘೋಷ್ ಎಂದು ಗುರುತಿಸಲಾಗಿದೆ.
ಬೆಂಕಿಯು ವ್ಯಾಪಕವಾಗಿ ಹರಡಿದ್ದರಿಂದ ಅಗ್ನಿಶಾಮಕ ಸಿಬ್ಬಂದಿ ಕಾರ್ಖಾನೆಯೊಳಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಡ್ರೋನ್ ಮೂಲಕ ನಾಲ್ವರು ಕಾರ್ಮಿಕರ ಮೃತದೇಹಗಳನ್ನು ಪತ್ತೆ ಹಚ್ಚಲಾಗಿದೆ. ಅವರ ಕುಟುಂಬಸ್ಥರನ್ನು ಸ್ಥಳಕ್ಕೆ ಕರೆಸಲಾಗಿದ್ದು, ಶವಗಳನ್ನು ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.