ಹೋಶಿಯಾರ್‌ಪುರ (ಪಂಜಾಬ್): ಇತ್ತೀಚಿನ ಜನರು ಅನ್ನ ಸಾಂಬಾರ್ಗಿಂತಲೂ ಫಿಜ್ಜಾ, ಬರ್ಗರ್, ನೂಡಲ್ಸ್ ಈ ತರಹದ ಆಹಾರಗಳನ್ನೇ ಹೆಚ್ಚಾಗಿ ಇಷ್ಟಪಡುತ್ತಾರೆ. ಹಾಗಾಗಿಯೇ ಹೋಟೆಲ್, ರೆಸ್ಟೋರೆಂಟ್ ಮಾಲೀಕರು ಜನರನ್ನು ಆಕರ್ಷಿಸಲು ಏನಾದರೊಂದು ಹೊಸ ರೆಸಿಪಿ ಮಾಡುತ್ತಲೇ ಇರುತ್ತಾರೆ. ಆದರೆ ಇಲ್ಲೊಬ್ಬರು ಬರ್ಗರ್ ತಯಾರಿಸಿ ಜನರನ್ನು ಆಕರ್ಷಿಸುವುದಲ್ಲದೇ, ದಾಖಲೆಯನ್ನೇ ನಿರ್ಮಿಸಿದ್ದಾರೆ.
ಪಂಜಾಬಿನ ಹೋಶಿಯಾರ್ಪುರದಲ್ಲಿ ಬರ್ಗರ್ ಚಾಚು ಎಂಬವರು ಭಾರತದ ಅತಿ ದೊಡ್ಡ ಬರ್ಗರ್ ತಯಾರಿಸಿ ದಾಖಲೆ ಬರೆದಿದ್ದಾರೆ. ಈ ಬರ್ಗರ್ 40 ಕೆ.ಜಿಗಿಂತಲೂ ಹೆಚ್ಚು ತೂಕದ್ದಾಗಿದೆ. ಅವರು ಮೊದಲ ಬಾರಿಗೆ ಇಷ್ಟು ದೊಡ್ಡ ಬರ್ಗರ್ ಅನ್ನು ತಯಾರಿಸಿದ್ದು, ಜನರನ್ನು ಆಕರ್ಷಿಸುತ್ತಿದೆ. ಇಡೀ ದಿನ ಹೋಶಿಯಾರ್ಪುರದಲ್ಲಿ ಜನರು ಈ ಬರ್ಗರ್ ನೋಡಲೆಂದೇ ಆಗಮಿಸುತ್ತಿದ್ದಾರೆ.