ಕರ್ನಾಟಕ

karnataka

ETV Bharat / bharat

ಮುಂಬೈ ಹೈದರಾಬಾದ್ ನಡುವೆ ಬುಲೆಟ್ ರೈಲು.. 14 ಗಂಟೆ ಅಲ್ಲ 3 ತಾಸಲ್ಲಿ ಪ್ರಯಾಣ - ಅತ್ಯಾಧುನಿಕ ವೈಮಾನಿಕ ಲಿಡಾರ್​ನಿಂದ ಸಮೀಕ್ಷೆ

ಮುಂಬೈ- ಹೈದರಾಬಾದ್​ ಮಧ್ಯೆ ಅತಿವೇಗದ ಬುಲೆಟ್​ ರೈಲು ಓಡಿಸಲು ಯೋಜನೆಯ ಡಿಪಿಆರ್​ ಅನ್ನು ಎನ್‌ಎಚ್‌ಆರ್‌ಸಿಎಲ್‌ಗೆ ಸಲ್ಲಿಸಲಾಗಿದೆ. ರೈಲು ಆರಂಭವಾದ ಬಳಿಕ 14 ಗಂಟೆಗಳ ಪ್ರಯಾಣ ಕೇವಲ 3 ತಾಸಿಗೆ ಕುಗ್ಗಲಿದೆ.

bullet-train-to-be-started-between-mumbai-hyderabad
ಮುಂಬೈ ಹೈದರಾಬಾದ್ ನಡುವೆ ಬುಲೆಟ್ ರೈಲು

By

Published : Oct 20, 2022, 6:41 AM IST

ಮುಂಬೈ:ಮುಂಬೈ - ಅಹಮದಾಬಾದ್​ ಬುಲೆಟ್​ ಟ್ರೈನ್​ ಕಾಮಗಾರಿ ಪ್ರಗತಿಯಲ್ಲಿದ್ದು, ಈಗ ಮುಂಬೈ ಮತ್ತು ಹೈದರಾಬಾದ್​ ಮಧ್ಯೆ ಅತಿವೇಗದ ರೈಲು ಆರಂಭಿಸಲು ವಿಸ್ತೃತ ಯೋಜನಾ ವರದಿಯನ್ನು(ಡಿಪಿಆರ್) ಸಿದ್ಧಪಡಿಸಿ ನ್ಯಾಷನಲ್ ಹೈಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್(ಎನ್‌ಎಚ್‌ಆರ್‌ಸಿಎಲ್‌)ಗೆ ಸಲ್ಲಿಸಲಾಗಿದೆ.

ಮುಂಬೈ - ಅಹಮದಾಬಾದ್ ಬುಲೆಟ್ ಟ್ರೈನ್ ಕಾಮಗಾರಿ ಮತ್ತೊಮ್ಮೆ ಭರದಿಂದ ಆರಂಭವಾಗಿದೆ. ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ನಿಲ್ದಾಣವನ್ನು ಸ್ಥಾಪಿಸಲಾಗುತ್ತಿದೆ. ಆ ನಂತರ ಮುಂಬೈನಿಂದ ಹೈದರಾಬಾದ್‌ಗೆ ಬುಲೆಟ್ ರೈಲು ಆರಂಭಿಸುವ ಕುರಿತು ವರದಿ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಇದು 711 ಕಿಮೀ ಉದ್ದದ ಯೋಜನೆಯಾಗಿದೆ. ಮುಂಬೈನಿಂದ ಹೈದರಾಬಾದ್‌ಗೆ ಪ್ರಯಾಣಿಸಲು ಸದ್ಯ 14 ಗಂಟೆ ಅವಧಿ ಬೇಕಾಗುತ್ತದೆ. ಬುಲೆಟ್​ ಟ್ರೈನ್​ ಆರಂಭದಿಂದ ಇದನ್ನು ಕೇವಲ 3 ಗಂಟೆಗಳಿಗೆ ಇಳಿಸಬಹುದಾಗಿದೆ. ಮಹಾರಾಷ್ಟ್ರದ ಜೊತೆಗೆ ತೆಲಂಗಾಣ ಮತ್ತು ಆಂಧ್ರಪ್ರದೇಶದ ಅಭಿವೃದ್ಧಿಯಲ್ಲಿ ಈ ಮಾರ್ಗವು ಅತ್ಯಂತ ಮಹತ್ವದ್ದಾಗಿದೆ.

ಯೋಜನೆಯು ಮುಂಬೈ, ಥಾಣೆ, ನವಿ ಮುಂಬೈ, ಲೋನಾವ್ಲಾ, ಪುಣೆ, ಬಾರಾಮತಿ, ಪಂಢರಪುರ, ಸೊಲ್ಲಾಪುರ, ಕಲಬುರಗಿ, ವಿಕಾರಾಬಾದ್ ಮತ್ತು ಹೈದರಾಬಾದ್ ಸೇರಿದಂತೆ 11 ರೈಲು ನಿಲ್ದಾಣಗಳನ್ನು ಒಳಗೊಂಡಿರುತ್ತದೆ. ಥಾಣೆ ಜಿಲ್ಲೆಯಲ್ಲಿ 9 ಕಿ.ಮೀ ಮಾರ್ಗವಿರುತ್ತದೆ. ಈ ಮಾರ್ಗವು ಪುಣೆ ಜಿಲ್ಲೆಯ ಮೂಲಕ ಹಾದುಹೋಗುತ್ತದೆ. ಪುಣೆಯಲ್ಲಿ ಮೂರು ಪ್ರಮುಖ ನಿಲ್ದಾಣಗಳನ್ನು ನಿರ್ಮಿಸುವ ಉದ್ದೇಶವಿದೆ.

ಈ ಮಾರ್ಗದಲ್ಲಿ ಬುಲೆಟ್ ರೈಲು ಗಂಟೆಗೆ 350 ಕಿ.ಮೀ ವೇಗದಲ್ಲಿ ಓಡಿಸಲು ಯೋಜಿಸಲಾಗಿದೆ. ಸರಾಸರಿ ವೇಗ ಗಂಟೆಗೆ 250 ಕಿ.ಮೀ ಇರುತ್ತದೆ. ಟ್ರ್ಯಾಕ್ ಸ್ಟ್ಯಾಂಡರ್ಡ್ ಗೇಜ್ ಅಳವಡಿಸಲಾಗುತ್ತದೆ. ರೈಲಿನಲ್ಲಿ ಒಮ್ಮೆಗೆ 750 ಜನರು ಪ್ರಯಾಣಿಸಬಹುದಾಗಿದೆ.

ಮುಂಬೈ- ಪುಣೆ- ಹೈದರಾಬಾದ್ ಬುಲೆಟ್ ರೈಲು ಯೋಜನೆಗೆ 2021 ರ ಮೇ ತಿಂಗಳಿನಲ್ಲಿ ಡಿಪಿಆರ್​ ತಯಾರಿ ಆರಂಭಿಸಲಾಗಿದೆ. ಹೈಪರ್ ಲೂಪ್ ಯೋಜನೆಯನ್ನು ರೂಪಿಸಲಾಗಿತ್ತು. ಬಳಿಕ ಅದನ್ನು ರದ್ದುಗೊಳಿಸಲಾಯಿತು.

ಅತ್ಯಾಧುನಿಕ ವೈಮಾನಿಕ ಲಿಡಾರ್​ನಿಂದ ಸಮೀಕ್ಷೆ ನಡೆಸಲಾಗಿದೆ. ವರದಿಯನ್ನು ರಾಷ್ಟ್ರೀಯ ಹೈಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್​ಗೆ (NHRCL) ಸಲ್ಲಿಸಲಾಗಿದ್ದು, ರೈಲ್ವೆ ಸಚಿವಾಲಯದ ಅನುಮೋದನೆಯ ನಂತರ ಬುಲೆಟ್ ರೈಲಿನ ಕಾಮಗಾರಿ ಆರಂಭಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಓದಿ:ಭಾರತದ ಪಟಾಕಿ ಕೇಂದ್ರ​ ಶಿವಕಾಶಿಗೆ ಡಬಲ್​ ಹೊಡೆತ: ಶೇ.40ರಷ್ಟು ಉತ್ಪಾದನೆ ಕುಸಿತ

ABOUT THE AUTHOR

...view details