ತಿರುಚ್ಚಿ(ತಮಿಳುನಾಡು) :ಪೊಂಗಲ್ (ಸಂಕ್ರಾಂತಿ) ಹಬ್ಬದ ಹಿನ್ನೆಲೆ ನಡೆದ ಹೋರಿ ಬೆದರಿಸುವ(ಜಲ್ಲಿಕಟ್ಟು) ಸ್ಪರ್ಧೆಯ ವೇಳೆ ಹೋರಿ ತಿವಿತದಿಂದ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ತಮಿಳುನಾಡಿನ ತಿರುಚ್ಚಿ ಜಿಲ್ಲೆಯ ಸುರಿಯೂರು ಎಂಬಲ್ಲಿ ಜಲ್ಲಿಕಟ್ಟು ಸ್ಪರ್ಧೆ ಏರ್ಪಡಿಸಲಾಗಿತ್ತು. ಹೋರಿ ಹಿಡಿಯುವ ವೇಳೆ ವ್ಯಕ್ತಿಯೊಬ್ಬ ಹೋರಿಯ ತಿವಿತದಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದ. ಆತನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಅಸುನೀಗಿದ್ದಾನೆ.
ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಹೋರಿ ತಿವಿತದಿಂದ ವ್ಯಕ್ತಿ ಸಾವು ಸುರಿಯೂರಿನಲ್ಲಿ ನಡೆದ ಜಲ್ಲಿಕಟ್ಟು ಸ್ಪರ್ಧೆಯ ವೇಳೆ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಭಾಗಿಯಾಗಿ ಹೋರಿ ಬೆದರಿಸುವವರಿಗೆ ಪ್ರೋತ್ಸಾಹ ನೀಡಿದರು. ಕೊರೊನಾ ಕಾರಣದಿಂದಾಗಿ ಭಾರಿ ಬಿಗಿಭದ್ರತೆಯಲ್ಲಿ ಹೋರಿ ಬೆದರಿಸುವ ಸ್ಪರ್ಧೆ ನಡೆದಿದೆ. ಲಸಿಕೆ ಹಾಕಿಸಿಕೊಂಡ 300 ಜನರಿಗೆ ಮಾತ್ರ ಅವಕಾಶ ನೀಡಲಾಗಿತ್ತು. 400 ಹೋರಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.
ಇದನ್ನೂ ಓದಿ:ಎಮ್ಮೆ ಓಡಿಸುವ ಸ್ಪರ್ಧೆಗೆ ಬಿಜೆಪಿ ಶಾಸಕರಿಂದಲೇ ಚಾಲನೆ.. ಆಡಳಿತ ಪಕ್ಷದಿಂದ ಮತ್ತೆ ಕೋವಿಡ್ ರೂಲ್ಸ್ ಬ್ರೇಕ್