ಮಧುಬಾನಿ: ಹಣದುಬ್ಬರ ಪರಿಸ್ಥಿತಿ ವಿರುದ್ಧ ಹೋರಾಟ ನಡೆಸುತ್ತಿದ್ದ ಆರ್‌ಜೆಡಿ ಕಾರ್ಯಕರ್ತರ ಮೇಲೆ ಹೋರಿಯೊಂದು ದಾಳಿ ನಡೆಸಿದೆ. ಎತ್ತಿನ ಬಂಡಿಯಲ್ಲಿ ಕುಳಿತುಕೊಂಡು, ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಎತ್ತಿನ ಗಾಡಿಯಿಂದ ತಪ್ಪಿಸಿಕೊಂಡ ಒಂದು ಹೋರಿ ಜನರತ್ತ ನುಗ್ಗಿ ದಾಳಿ ನಡೆಸಿದೆ. ಈ ವೇಳೆ ಘಟನೆಯಿಂದ ಭಯಭೀತರಾದ ಜನ ಚೆಲ್ಲಾಪಿಲ್ಲಿಯಾಗಿ ಓಡಾಡಿದ್ದಾರೆ.
ಪ್ರತಿಭಟನೆಗೆ 'ಹೋರಿ' ಅಡ್ಡಿ: ಚೆಲ್ಲಾಪಿಲ್ಲಿಯಾಗಿ ಓಡಿದ ಜನ: Video - ಮಧುಬಾನಿ
ಆರ್‌ಜೆಡಿ ಪಕ್ಷ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಹೋರಿಯೊಂದು ದಾಳಿ ನಡೆಸಿರುವ ಘಟನೆ ಬಿಹಾರದ ಮಧುಬಾನಿಯಲ್ಲಿ ನಡೆದಿದೆ. ಈ ವೇಳೆ ಭಯಭೀತರಾದ ಜನ ಚೆಲ್ಲಾಪಿಲ್ಲಿಯಾಗಿ ಓಡಾಡಿದ್ದಾರೆ.
![ಪ್ರತಿಭಟನೆಗೆ 'ಹೋರಿ' ಅಡ್ಡಿ: ಚೆಲ್ಲಾಪಿಲ್ಲಿಯಾಗಿ ಓಡಿದ ಜನ: Video madhubani](https://etvbharatimages.akamaized.net/etvbharat/prod-images/768-512-12513794-thumbnail-3x2-mng.jpg)
ಪ್ರತಿಭಟನೆಗೆ 'ಹೋರಿ' ಅಡ್ಡಿ
ಪ್ರತಿಭಟನೆಗೆ 'ಹೋರಿ' ಅಡ್ಡಿ
ರಾಷ್ಟ್ರೀಯ ಜನತಾದಳ ಜಿಲ್ಲಾ ಘಟಕದ ಕಾರ್ಯಕರ್ತರು ಮಧುಬಾನಿಯಲ್ಲಿ ರ‍್ಯಾಲಿ ನಡೆಸಿದ್ದರು. ಡೀಸೆಲ್, ಪೆಟ್ರೋಲ್, ಅನಿಲ ಮತ್ತು ಹೆಚ್ಚುತ್ತಿರುವ ಹಣದುಬ್ಬರ ಸೇರಿದಂತೆ ನಿರುದ್ಯೋಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಈ ರ‍್ಯಾಲಿಯು ಮಧುಬಾನಿ ರೈಲ್ವೆ ನಿಲ್ದಾಣದಿಂದ ಸಾಗಿ ಜಿಲ್ಲಾಧಿಕಾರಿ ಕಚೇರಿವರೆಗೆ ತಲುಪಬೇಕಿತ್ತು. ಆದರೆ, ಈ ಸಂದರ್ಭದಲ್ಲಿ ಹೋರಿ ದಾಳಿ ನಡೆಸಿದೆ.
ರ‍್ಯಾಲಿಯಲ್ಲಿ ಆರ್‌ಜೆಡಿ ಜಿಲ್ಲಾಧ್ಯಕ್ಷ ಹಾಗೂ ಶಾಸಕ ಭಾರತ್ ಭೂಷಣ್ ಮಂಡಲ್, ಮಧುಬಾನಿ ಶಾಸಕ ಸಮೀರ್ ಕುಮಾರ್ ಮಹಾಸೇಠ್ ಮತ್ತು ಮಾಜಿ ಬಿಸ್ಪಿ ಶಾಸಕ ಡಾ.ಫಯಾಜ್ ಅಹ್ಮದ್ ಉಪಸ್ಥಿತರಿದ್ದರು.