ಕರ್ನಾಟಕ

karnataka

ETV Bharat / bharat

ಟೈರ್​ ಸ್ಫೋಟದಿಂದ ಬಸ್​ ಅಪಘಾತ​, ಮೃತಪಟ್ಟವರಿಗೆ ಪ್ರಧಾನಿ ಸಂತಾಪ, ₹ 2ಲಕ್ಷ ಪರಿಹಾರ.. ಫಡ್ನವಿಸ್​ ಹೇಳಿದ್ದು ಹೀಗೆ

ಮಹಾರಾಷ್ಟ್ರದ ಬುಲ್ಧಾನ್​ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತಕ್ಕೆ ಟೈರ್​ ಬ್ಲಾಸ್ಟ್​ ಕಾರಣವೆಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಪಿಎಂ ಮೋದಿ ಅಪಘಾತದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿದ್ದಾರೆ.

Buldhana bus accident  Tyre burst caused mishap which killed 25  PM Modi announces Rs 2 lakh ex gratia  ಟೈರ್​ ಸ್ಫೋಟದಿಂದ ಅಪಘಾತ  ಟೈರ್​ ಸ್ಫೋಟದಿಂದ ಅಪಘಾತ​ ಮೃತಪಟ್ಟವರಿಗೆ ಪ್ರಧಾನಿ ಸಂತಾಪ  ಫಡ್ನವಿಸ್​ ಹೇಳಿದ್ದು ಹೀಗೆ  ಬುಲ್ಧಾನ್​ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತ  ಅಪಘಾತಕ್ಕೆ ಟೈರ್​ ಬ್ಲಾಸ್ಟ್​ ಕಾರಣ  ನಸುಕಿನ ಜಾವ ಸಂಭವಿಸಿದ ಭೀಕರ ರಸ್ತೆಯ ಅಪಘಾತ  ಅಪಘಾತದ ಬಗ್ಗೆ ಪ್ರಯಾಣಿಕ ಹೇಳಿದ್ದು  ಡಿಸಿಎಂ ಫಡ್ನವಿಸ್​ ಹೇಳಿದ್ದು ಹೀಗೆ  ಪಿಎಂ ಮೋದಿ ಸಂತಾಪ
ಟೈರ್​ ಸ್ಫೋಟದಿಂದ ಅಪಘಾತ

By

Published : Jul 1, 2023, 11:21 AM IST

ಬುಲ್ಧಾನ (ಮಹಾರಾಷ್ಟ್ರ):ಜಿಲ್ಲೆಯಲ್ಲಿ ನಸುಕಿನ ಜಾವ ಸಂಭವಿಸಿದ ಭೀಕರ ರಸ್ತೆಯ ಅಪಘಾತಕ್ಕೆ ಟೈರ್​ ಸ್ಫೋಟವೇ ಕಾರಣವೆಂದು ಹಿರಿಯ ಪೊಲೀಸರು ಅಧಿಕಾರಿಗಳು ಮಾಧ್ಯಮಕ್ಕೆ ಹೇಳಿದ್ದಾರೆ. ಈ ಅಪಘಾತದಲ್ಲಿ ಮೂರು ಮಕ್ಕಳು ಸೇರಿದಂತೆ 25 ಜನರು ಸಾವನ್ನಪ್ಪಿದ್ದು, ಎಂಟು ಜನರು ಗಾಯಗೊಂಡಿದ್ದಾರೆ.

ಟೈರ್ ಸ್ಫೋಟಗೊಂಡು ಬಸ್ ಪಲ್ಟಿಯಾಗಿ ಅಪಘಾತ ಸಂಭವಿಸಿದೆ. ನಂತರ ಬಸ್ಸಿನ ಡೀಸೆಲ್ ಟ್ಯಾಂಕ್‌ಗೆ ಬೆಂಕಿ ಹೊತ್ತಿಕೊಂಡಿತು ಎಂದು ಚಾಲಕ ಮಾಹಿತಿ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತದಿಂದ ಬದುಕುಳಿದಿರುವ ಬಸ್‌ನ ಚಾಲಕ ಹೇಳಿಕೆ ಪ್ರಕಾರ ಟೈರ್ ಒಡೆದ ನಂತರ ವಾಹನವು ಪಲ್ಟಿಯಾಗಿದೆ. ನಂತರ ಬೆಂಕಿ ಹೊತ್ತಿಕೊಂಡು 25 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಅಪಘಾತದಲ್ಲಿ 8 ಮಂದಿ ಗಾಯಗೊಂಡಿದ್ದಾರೆ ಎಂದು ಬುಲ್ಧಾನ ಎಸ್ಪಿ ಸುನಿಲ್ ಕಡಸನೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಮೃತಪಟ್ಟವರಲ್ಲಿ 3 ಮಕ್ಕಳಿದ್ದು, ಉಳಿದವರು ವಯಸ್ಕರಿದ್ದಾರೆ. ಅಪಘಾತದಲ್ಲಿ ಗಾಯಗೊಂಡವರನ್ನು ಬುಲ್ಧಾನ ಸಿವಿಲ್ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿದೆ. ಈ ಅಪಘಾತದ ಬಗ್ಗೆ ನಾವು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದೇವೆ ಎಂದು ಅವರು ಹೇಳಿದರು.

ಅಧಿಕಾರಿಗಳ ಪ್ರಕಾರ, ಬಸ್ ಮಹಾರಾಷ್ಟ್ರದ ಯವತ್ಮಾಲ್‌ನಿಂದ ಪುಣೆಗೆ ಪ್ರಯಾಣಿಸುತ್ತಿದ್ದು, ಮಹಾರಾಷ್ಟ್ರದ ಬುಲ್ಧಾನದ ಸಮೃದ್ಧಿ ಮಹಾಮಾರ್ಗ್ ಎಕ್ಸ್‌ಪ್ರೆಸ್‌ವೇಯಲ್ಲಿ ಶನಿವಾರ ನಸುಕಿನ 1:30 ರಿಂದ 2 ಗಂಟೆಯ ಮಧ್ಯೆ ಅಪಘಾತಕ್ಕೀಡಾಗಿದೆ. ಅಪಘಾತ ಸಂಭವಿಸಿದ ಸಮಯ ತಡರಾತ್ರಿಯಾಗಿದ್ದು, ಪ್ರಯಾಣಿಕರು ನಿದ್ದೆಗೆ ಜಾರಿದ್ದರು. ಅನೇಕ ಜನರು ಬಸ್​ನಿಂದ ಹೊರಗೆ ಬರಲು ಸಾಧ್ಯವಾಗದೇ ಒಳಗೆ ಸಿಲುಕಿಕೊಂಡು ಸಾವನ್ನಪ್ಪಿದ್ದಾರೆ. ಬಸ್‌ಗೆ ಬೆಂಕಿ ಹೊತ್ತಿಕೊಂಡ ನಂತರ ಕೆಲವರು ಬಸ್​ನಿಂದ ಹೊರ ಬಂದು ತಮ್ಮ ಪ್ರಾಣವನ್ನು ಬಚಾವ್​ ಮಾಡಿಕೊಂಡಿದ್ದಾರೆ ಎಂದು ಪೊಲೀಸ್​ ಅಧಿಕಾರಿ ಹೇಳಿದರು.

ತನಿಖೆಯ ಪ್ರಮುಖ ವಿಷಯವೆಂದರೆ ನಾವು ಮೃತಪಟ್ಟವರ ಗುರುತು ಪತ್ತೆಯ ಕಾರ್ಯ ಕೈಗೊಂಡಿದ್ದೇವೆ. ಬಳಿಕ ಮೃತ ದೇಹಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸುತ್ತೇವೆ ಎಂದು ಅವರು ಹೇಳಿದರು.

ಅಪಘಾತದ ಬಗ್ಗೆ ಪ್ರಯಾಣಿಕ ಹೇಳಿದ್ದು ಹೀಗೆ:ನಾಗ್ಪುರದಿಂದ ಔರಂಗಾಬಾದ್​ಗೆ ವಿದರ್ಭ ಟ್ರಾವೆಲ್ಸ್ ಬಸ್ ಹತ್ತಿದೆ. ಸಮೃದ್ಧಿ ಮಹಾಮಾರ್ಗ್ ಎಕ್ಸ್‌ಪ್ರೆಸ್‌ವೇನಲ್ಲಿ ಅಪಘಾತ ಸಂಭವಿಸಿತು. ಬಸ್ ಪಲ್ಟಿಯಾಗಿ ಬೆಂಕಿ ಹೊತ್ತಿಕೊಂಡಿದೆ. ಮೂರ್ನಾಲ್ಕು ಜನ ಬಸ್​ನಿಂದ ಹೊರ ಬರುತ್ತಿದ್ದಂತೆ ಸ್ಫೋಟ ಸಂಭವಿಸಿದೆ ಎಂದು ಬುಲ್ಧಾನ ಬಸ್ ಅಪಘಾತದಲ್ಲಿ ಬದುಕುಳಿದ ಯೋಗೇಶ್ ರಾಮದಾಸ್ ಗವಾಯಿ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

ಬಸ್​ ಚಾಲಕ, ಕಂಡಕ್ಟರ್​ನನ್ನು ವಶಕ್ಕೆ ಪಡೆದ ಪೊಲೀಸರು:ಬಸ್ ದುರಂತದ ಕುರಿತು ಮಹಾರಾಷ್ಟ್ರ ಸಚಿವ ಗಿರೀಶ್ ಮಹಾಜನ್ ಅವರು ಮಾತನಾಡಿ, ಬಸ್ ಚಾಲಕ ಮತ್ತು ಕಂಡಕ್ಟರ್ ಅನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಪೊಲೀಸರು ಈ ಘಟನೆ ಕುರಿತು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದರು.

ಡಿಸಿಎಂ ಫಡ್ನವಿಸ್​ ಹೇಳಿದ್ದು ಹೀಗೆ: ಬುಲ್ಧಾನ್​ ಜಿಲ್ಲೆಯಲ್ಲೇ ರಸ್ತೆ ಅಪಘಾತ ಸಂಭವಿಸಿ 25 ಜನ ಸಾವನ್ನಪ್ಪಿದ್ದಾರೆ. ಮೃತಪಟ್ಟವರ ಗುರುತು ಪತ್ತೆ ಕಾರ್ಯ ನಡೆಯುತ್ತಿದ್ದು, ಅಗತ್ಯವಿದ್ದರೆ ಡಿಎನ್‌ಎ ಪರೀಕ್ಷೆ ಮೂಲಕ ಮೃತದೇಹಗಳನ್ನು ಗುರುತಿಸಲಾಗುವುದು ಎಂದು ಡಿಸಿಎಂ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.

ಸಮೃದ್ಧಿ ಹೆದ್ದಾರಿಯಲ್ಲಿ ಸಂಭವಿಸಿದ ಬಸ್ ಅಪಘಾತಕ್ಕೆ ರಸ್ತೆ ನಿರ್ಮಾಣ ಕಾರಣವಲ್ಲ. ಇದೊಂದೆ ಅಲ್ಲ ಇಲ್ಲಿಯವರೆಗೆ ಎಷ್ಟು ಅಪಘಾತಗಳು ನಡೆದಿದ್ದಾವೆಯೋ ಅವು ರಸ್ತೆ ಕಾಮಾಗಾರಿಯಿಂದ ನಡೆದಿಲ್ಲ. ಕೆಲವೊಂದು ಅಪಘಾತಗಳು ವಾಹನಗಳ ಸಮಸ್ಯೆಯಿಂದ, ಇನ್ನು ಕೆಲವು ಮಾನವನ ತಪ್ಪಿನಿಂದ ಅಪಘಾತಗಳು ಸಂಭವಿಸಿವೆ. ಆದ್ರೆ ರಸ್ತೆ ಕಾಮಗಾರಿಯಿಂದ ಅಪಘಾತ ಸಂಭವಿಸಿದೆ ಎನ್ನುವುದು ಸರಿಯಲ್ಲ ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.

ನಾವು ಹೆದ್ದಾರಿಗಳಲ್ಲಿ ಸ್ಮಾರ್ಟ್ ಸಿಸ್ಟಮ್​ ವ್ಯವಸ್ಥೆ ಕಲ್ಪಿಸುತ್ತಿದ್ದೇವೆ. ಕ್ಯಾಮೆರಾಗಳ ಮೂಲಕ ನಾವು ಡೈವರ್​ಗಳಿಗೆ ಮಾನಿಟರ್ ಮಾಡಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ, ಈ ಸ್ಮಾರ್ಟ್​ ಸಿಸ್ಟಮ್​ನಿಂದ ಯಾರಾದ್ರೂ ನಿಗದಿತ ವೇಗಕ್ಕಿಂತ ಹೆಚ್ಚಾಗಿ ವಾಹನ ಚಲಾಯಿಸುತ್ತಿದ್ರೆ ಅವರಿಗೆ ನಾವು ಅಲರ್ಟ್​ ಮಾಡುತ್ತೇವೆ. ನಿಧಾನಗತಿಯಲ್ಲಿ ವಾಹನ ಚಲಿಸಲು ಸೂಚಿಸುತ್ತೇವೆ. ಆದಷ್ಟು ಬೇಗ ಈ ಸ್ಮಾರ್ಟ್​ ಸಿಸ್ಟಮ್​ ಜಾರಿ ತರಲಾಗುವುದು ಎಂದು ಡಿಸಿಎಂ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.

ಪಿಎಂ ಮೋದಿ ಸಂತಾಪ:ಸಮೃದ್ಧಿ ಮಹಾಮಾರ್ಗ್ ಎಕ್ಸ್‌ಪ್ರೆಸ್‌ವೇಯಲ್ಲಿ ಶನಿವಾರ ಬುಲ್ಧಾನದಲ್ಲಿ ಸಂಭವಿಸಿದ ಬಸ್ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಬಂಧಿಕರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ 2 ಲಕ್ಷ ರೂಪಾಯಿ ಮತ್ತು ಅಪಘಾತದಲ್ಲಿ ಗಾಯಗೊಂಡವರಿಗೆ 50,000 ರೂಪಾಯಿ ನೀಡುವುದಾಗಿ ಘೋಷಿಸಿದ್ದಾರೆ.

"ಮಹಾರಾಷ್ಟ್ರದ ಬುಲ್ಧಾನದಲ್ಲಿ ಸಂಭವಿಸಿದ ಭೀಕರ ಬಸ್ ಅಪಘಾತದಿಂದ ತೀವ್ರ ದುಃಖವಾಗಿದೆ. ನನ್ನ ಆಲೋಚನೆಗಳು ಮತ್ತು ಪ್ರಾರ್ಥನೆ ಪ್ರಾಣ ಕಳೆದುಕೊಂಡವರ ಕುಟುಂಬಗಳೊಂದಿಗೆ ಇದೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ. ಸ್ಥಳೀಯ ಆಡಳಿತವು ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ನೆರವು ನೀಡುತ್ತಿದೆ. ಬುಲ್ಧಾನದಲ್ಲಿ ಸಂಭವಿಸಿದ ಬಸ್ ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರ ಸಂಬಂಧಿಕರಿಗೆ PMNRF (ಪ್ರಧಾನಿ ರಾಷ್ಟ್ರೀಯ ಪರಿಹಾರ ನಿಧಿ) ಯಿಂದ 2 ಲಕ್ಷ ರೂಪಾಯಿಗಳ ಪರಿಹಾರ ನೀಡಲಾಗುವುದು ಮತ್ತು ಗಾಯಗೊಂಡವರಿಗೆ 50,000 ರೂಪಾಯಿಗಳನ್ನು ನೀಡಲಾಗುವುದು ಎಂದು ಪ್ರಧಾನಮಂತ್ರಿ ಕಚೇರಿ ಟ್ವೀಟ್ ಮಾಡಿದೆ.

ಓದಿ:Bus burnt: ರಸ್ತೆ ಅಪಘಾತದಿಂದ ಬಸ್​ಗೆ ಬೆಂಕಿ ಹೊತ್ತಿಕೊಂಡು 25 ಪ್ರಯಾಣಿಕರು ಸಜೀವ ದಹನ.. 8 ಮಂದಿ ಪಾರಾಗಿದ್ದು ಹೇಗೆ?

ABOUT THE AUTHOR

...view details