ಕರ್ನಾಟಕ

karnataka

ETV Bharat / bharat

2024ರ ವೇಳೆಗೆ ಚಂದ್ರನಲ್ಲಿಗೆ ಮೊದಲ ಮಹಿಳೆ.. ಭರ್ಜರಿಯಾಗೇ ಸನ್ನದ್ಧವಾಗ್ತಿದೆ ನಾಸಾ - ಓರಿಯಾನ್ ವೆಹಿಕಲ್

ಈ ವರ್ಷದ ಆರಂಭದಲ್ಲಿ, ಸುಮಾರು 650 ಮಿಲಿಯನ್ ಯೂರೋಗಳ ವೆಚ್ಚದಲ್ಲಿ ಇನ್ನೂ ಮೂರು ಯುರೋಪಿಯನ್ ಸ್ಪೇಸ್ ಮಾಡ್ಯೂಲ್‌ಗಳಿಗಾಗಿ ಏರ್‌ಬಸ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಇಎಸ್‌ಎ ಹೇಳಿದೆ. ಅವುಗಳನ್ನು ಬ್ರೆಮೆನ್‌ನಲ್ಲಿ ನಿರ್ಮಿಸಲಾಗುವುದು.

mission
ಓರಿಯನ್ ಬಾಹ್ಯಾಕಾಶ ನೌಕೆ

By

Published : Oct 21, 2021, 6:25 PM IST

ಬ್ರೆಮೆನ್:ಓರಿಯನ್ ಬಾಹ್ಯಾಕಾಶ ನೌಕೆ 2024 ರ ವೇಳೆಗೆ ಮೊದಲ ಮಹಿಳೆ ಮತ್ತು ಮುಂದಿನ ಮಾನವನ್ನು ಚಂದ್ರನ ಮೇಲೆ ಇಳಿಸುವ ಗುರಿ ಹೊಂದಿರುವ ಆರ್ಟೆಮಿಸ್ ಕಾರ್ಯಕ್ರಮದ ಭಾಗವಾಗಿದೆ.

ಯುರೋಪಿಯನ್ ಸ್ಪೇಸ್ ಏಜೆನ್ಸಿ ಯುರೋಪಿಯನ್ ಸರ್ವಿಸ್ ಮಾಡ್ಯೂಲ್ ( ESM) - ಗಾಳಿ, ವಿದ್ಯುತ್ ಮತ್ತು ಪ್ರೊಪಲ್ಷನ್ ಒದಗಿಸುವ ಓರಿಯನ್ ಬಾಹ್ಯಾಕಾಶ ನೌಕೆಯ ಭಾಗವನ್ನು ನೋಡಿಕೊಳ್ಳುತ್ತಿದೆ.

ನವೆಂಬರ್ 2018 ರಲ್ಲಿ, ಇಎಸ್ಎ ಮೊದಲ ಮಾಡ್ಯೂಲ್ - ಇಎಸ್ಎಂ -1 ಎಂದು ಕರೆಯಲ್ಪಡುತ್ತದೆ - ಫ್ಲೋರಿಡಾದ ನಾಸಾದ ಕೇಪ್ ಕ್ಯಾನವೆರಲ್​​​ಗೆ ತಲುಪಿಸಿತು. 2022ರ ಆರಂಭದಲ್ಲಿ ಉಡಾವಣೆ ಆಗಬಹುದು ಎಂದು ನಿರೀಕ್ಷಿಸಲಾಗಿದ್ದು, ಓರಿಯನ್ ಮತ್ತು ಅದರ ಜೊತೆಗಿನ ESM-1 ಚಂದ್ರನ ಬಳಿಗೆ ಹಾರುವ ನಿರೀಕ್ಷೆ ಇದೆ.

ESM-1ನ ಮುಖ್ಯ ಎಂಜಿನ್ ಮತ್ತು 32 ಥ್ರಸ್ಟರ್‌ಗಳು ಓರಿಯನ್ ಅನ್ನು ಚಂದ್ರನ ಸುತ್ತ ಕಕ್ಷೆಗೆ ತಳ್ಳುತ್ತವೆ ಮತ್ತು ನಂತರ ಭೂಮಿಗೆ ಮರಳುತ್ತವೆ. ಮೊದಲ ಮಷಿನ್​ ನಮ್ಮನ್ನು ಚಂದ್ರನಲ್ಲಿಗೆ ತಲುಪಿಸಲಿದೆ. ಎರಡನೇ ವಾಹನವು ಮರಳಿ ವಾಪಸ್​ ಕರೆತರುವ ವಾಹನವಾಗಿದೆ, ನಾಸಾ ಚಂದ್ರನಲ್ಲಿಗೆ ನಾಲ್ಕು ಗಗನಯಾತ್ರಿಗಳನ್ನು ಕಳಿಸಲು ಪ್ಲಾನ್​ ಹಾಕಿಕೊಂಡಿದೆ. ಈ ಯಾನ ಕೇವಲ ಚಂದ್ರನ ಸುತ್ತ ಸುತ್ತ ಹಾಕಲು ಮಾತ್ರ ಎಂಬ ವಿಚಾರವನ್ನು ESM ಮುಖ್ಯ ಎಂಜಿನಿಯರ್ ಮಥಿಯಾಸ್ ಗ್ರೊನೊವ್ಸ್ಕಿ ವಿವರಿಸಿದ್ದಾರೆ. ಮೂರನೇ ವಾಹನವು ಮೊದಲ ಗಗನಯಾತ್ರಿ ಮತ್ತು ಮೊದಲ ಮಾನವ ಮತ್ತು ಮೊದಲ ಮಹಿಳೆಯನ್ನು ವಾಪಸ್​ ಕರೆ ತರುವ ಜವಾಬ್ದಾರಿ ಹೊರಲಿದೆ.

ಇಎಸ್​​ಎಂ-2 ಪೂರ್ಣಗೊಳ್ಳುವ ಹಂತದಲ್ಲಿದೆ

ಯುರೋಪಿಯನ್ ಸ್ಪೇಸ್ ಏಜೆನ್ಸಿ -2 ESM-2 ಪೂರ್ಣಗೊಳ್ಳುವ ಹಂತದಲ್ಲಿದೆ ಮತ್ತು ಶೀಘ್ರದಲ್ಲೇ ಅಮೆರಿಕಕ್ಕೆ ವರ್ಗಾಯಿಸಲಾಗುವುದು ಎಂದು ESA ಹೇಳಿದೆ. 2022ರ ಕೊನೆಯಲ್ಲಿ ಅಥವಾ 2023ರ ಆರಂಭದಲ್ಲಿ ESM-2 ಚಂದ್ರನ ಸುತ್ತ ಪ್ರದಕ್ಷಿಣೆ ಹಾಕಲು ಒಂದು ಫ್ಲೈಬೈನಲ್ಲಿ ನಾಲ್ಕು ಗಗನಯಾತ್ರಿಗಳನ್ನು ಕರೆದೊಯ್ಯುತ್ತದೆ. 1972 ರ ಬಳಿಕ ಇದೇ ಮೊದಲ ಬಾರಿಗೆ ಚಂದ್ರನಲ್ಲಿಗೆ ಮಾನವನನ್ನು ಕರೆದೊಯ್ಯಲಿದೆ.

ಅಂದರೆ ಮಿಷನ್​ ಅಪೋಲೋ ಬಳಿಕ 2024 ರ ವೇಳೆಗೆ ಈ ಕಾರ್ಯಾಚರಣೆ ನಡೆಸಲು ನಾಸಾ ಸನ್ನದ್ಧವಾಗಿದೆ. ಮೊದಲ ಮಾನವನ ಬಳಿಕ ಮೊದಲ ಮಹಿಳೆಯೂ ಚಂದ್ರನಲ್ಲಿಗೆ ತೆರಳಲಿದ್ದಾರೆ.

ಏರೋಸ್ಪೇಸ್ ಸಂಸ್ಥೆ ಏರ್ ಬಸ್ ಉತ್ತರ ಜರ್ಮನಿಯ ಬ್ರೆಮೆನ್ ನಲ್ಲಿ ಯುರೋಪಿಯನ್ ಸ್ಪೇಸ್ ಏಜೆನ್ಸಿ (ಇಎಸ್ಎ) ಪರವಾಗಿ ಹೈಟೆಕ್ ಪ್ರೊಪಲ್ಷನ್ ಮಾಡ್ಯೂಲ್ ಗಳನ್ನು ಅಭಿವೃದ್ಧಿಪಡಿಸಿದೆ ಮತ್ತು ನಿರ್ಮಿಸಿದೆ. ಎಂಜಿನಿಯರ್‌ಗಳು ಸ್ವಯಂಚಾಲಿತ ವರ್ಗಾವಣೆ ವಾಹನವನ್ನು ಅಭಿವೃದ್ಧಿಪಡಿಸುತ್ತಿದ್ದಾರೆ.

ಈ ವರ್ಷದ ಆರಂಭದಲ್ಲಿ, ಸುಮಾರು 650 ಮಿಲಿಯನ್ ಯೂರೋಗಳ ವೆಚ್ಚದಲ್ಲಿ ಇನ್ನೂ ಮೂರು ಯುರೋಪಿಯನ್ ಸ್ಪೇಸ್ ಮಾಡ್ಯೂಲ್‌ಗಳಿಗಾಗಿ ಏರ್‌ಬಸ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಇಎಸ್‌ಎ ಹೇಳಿದೆ. ಅವುಗಳನ್ನು ಬ್ರೆಮೆನ್‌ನಲ್ಲಿ ನಿರ್ಮಿಸಲಾಗುವುದು.

ಮಂಗಳಯಾನಕ್ಕೆ ಭವಿಷ್ಯದ ನಿಲ್ದಾಣ ಸ್ಥಾಪನೆಗೆ ಚಿಂತನೆ

ಚಂದ್ರನ ಆಚೆಗೆ ಮತ್ತು ಮಂಗಳಯಾನವನ್ನು ಸಾಮಾನ್ಯವಾಗಿಸುವ ಗುರಿಯೊಂದಿಗೆ ಭವಿಷ್ಯದ ಬಾಹ್ಯಾಕಾಶ ಕಾರ್ಯಾಚರಣೆಗಳು ಗಗನಯಾತ್ರಿಗಳನ್ನು ಹೊತ್ತೊಯ್ಯುತ್ತವೆ. ನಾಸಾದೊಂದಿಗಿನ ಇಎಸ್ಎ ಸಹಯೋಗವು ಭವಿಷ್ಯದ ಆರ್ಟೆಮಿಸ್ ಕಾರ್ಯಾಚರಣೆಗಳಲ್ಲಿ ಯುರೋಪಿಯನ್ ಗಗನಯಾತ್ರಿಗಳಿಗೆ ಇದು ಅವಕಾಶವನ್ನು ಕಲ್ಪಿಸುತ್ತದೆ.

"ಓರಿಯಾನ್ ವೆಹಿಕಲ್​​ ಮತ್ತು ನಾಸಾ ಆರ್ಟೆಮಿಸ್ ಮಿಷನ್ ಸಾಧಿಸಲು ಸೇವಾ ಮಾಡ್ಯೂಲ್ ನಿಜವಾಗಿಯೂ ಪ್ರಮುಖವಾದುದು" ಎಂದು ESM ಪ್ರೋಗ್ರಾಂ ಮ್ಯಾನೇಜರ್ ಫಿಲಿಪ್ ಡೆಲೂ ಹೇಳುತ್ತಾರೆ.

ಗ್ರೀಕ್ ದೇವತೆಯಾದ ಗ್ರೀಕ್ ಪುರಾಣಗಳಲ್ಲಿ ಅಪೊಲೊನ ಅವಳಿ ಸಹೋದರಿಯ ಹೆಸರಾದ 'ಆರ್ಟೆಮಿಸ್' ಅನ್ನು ನಾಸಾ ತನ್ನ ಚಂದ್ರಯಾನ ಕಾರ್ಯಕ್ರಮಕ್ಕೆ ಇಟ್ಟಿದೆ.

ABOUT THE AUTHOR

...view details