ಬಾಂದ್ರಾ (ಮಹಾರಾಷ್ಟ್ರ):ಕಟ್ಟಡದ ಒಂದು ಭಾಗ ಕುಸಿದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಐವರು ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಮುಂಬೈನ ಬಾಂದ್ರಾ ಪ್ರದೇಶದಲ್ಲಿ ನಡೆದಿದೆ.
ಮುಂಬೈ ಜನವಸತಿ ಪ್ರದೇಶದಲ್ಲಿ ಕಟ್ಟಡದ ಭಾಗ ಕುಸಿತ: ಓರ್ವ ಸಾವು, ಐವರಿಗೆ ಗಾಯ - ಮಹಾರಾಷ್ಟ್ರ ಕಟ್ಟಡ ಕುಸಿತ
ಮುಂಬೈನ ಬಾಂದ್ರಾ ಪ್ರದೇಶದಲ್ಲಿನ ಕಟ್ಟಡದ ಒಂದು ಭಾಗ ಕುಸಿದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಐವರು ಗಾಯಗೊಂಡಿದ್ದಾರೆ.
![ಮುಂಬೈ ಜನವಸತಿ ಪ್ರದೇಶದಲ್ಲಿ ಕಟ್ಟಡದ ಭಾಗ ಕುಸಿತ: ಓರ್ವ ಸಾವು, ಐವರಿಗೆ ಗಾಯ](https://etvbharatimages.akamaized.net/etvbharat/prod-images/768-512-12042856-thumbnail-3x2-megha.jpg)
ಕಟ್ಟಡದ ಒಂದು ಭಾಗ ಕುಸಿದು ಅವಘಡ
ತಡರಾತ್ರಿ 1.45 ಗಂಟೆಯ ವೇಳೆಗೆ ಘಟನೆ ನಡೆದಿದ್ದು, ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಈವರೆಗೆ 17 ಜನರನ್ನು ರಕ್ಷಿಸಿದ್ದಾರೆ. ಅವಶೇಷಗಳಡಿ ಇನ್ನೂ ಕೆಲವರು ಇರುವ ಶಂಕೆ ವ್ಯಕ್ತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
ಮುಂಬೈನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಕಟ್ಟಡದ ಒಂದು ಭಾಗ ಕುಸಿದು ಪಕ್ಕದಲ್ಲಿದ್ದ ಮನೆಗಳ ಮೇಲೆ ಬಿದ್ದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.