ಮುಂಬೈ: ಕ್ರಿಮಿನಲ್ ಅಪರಾಧಗಳಲ್ಲಿ ತೊಡಗಿದ ಆರೋಪದಡಿ ಉದ್ಯಮಿಯೊಬ್ಬರು ನೀಡಿದ ದೂರಿನ ಮೇರೆಗೆ ಮಾಜಿ ಪೊಲೀಸ್ ಅಧಿಕಾರಿ ಪರಮ್ಬಿರ್ಸಿಂಗ್ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಾಗಿದ್ದಾರೆ.
ಡಿಸಿಪಿ ದರ್ಜೆಯ ಪೊಲೀಸ್ ಅಧಿಕಾರಿ ಮತ್ತು ಇತರ ನಾಲ್ವರು ಪೊಲೀಸರ ಮೂಲಕ ಪರಂಬಿರ್ ಸಿಂಗ್, ಉದ್ಯಮಿಗೆ 15 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಸಂಬಂಧ ಮೆರೈನ್ ಡ್ರೈವ್ ಪೊಲೀಸರು, ಆರು ಮಂದಿ ಪೊಲೀಸ್ ಅಧಿಕಾರಿಗಳು ಸೇರಿ ಎಂಟು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದು, ಸಂಜಯ್ ಪುನ್ಮಿಯಾ ಮತ್ತು ಸುನಿಲ್ ಜೈನ್ ಎಂಬಾತನನ್ನು ಬಂಧಿಸಿದ್ದಾರೆ.
ಸಂಜಯ್ ಪುನ್ಮಿಯಾ ಶಿವಸೇನೆ ಶಾಸಕಿ ಗೀತಾ ಜೈನ್ ಸಹೋದರನಾಗಿದ್ದು, ಈ ಪ್ರಕರಣವು ಯುಎಲ್ಸಿ ಹಗರಣಕ್ಕೆ ಸಂಬಂಧಿಸಿದ್ದು ಎನ್ನಲಾಗಿದೆ. ಈ ವರ್ಷದ ಏಪ್ರಿಲ್ನಲ್ಲಿ ಅಕೋಲಾದ ಪೊಲೀಸ್ ಇನ್ಸ್ಪೆಕ್ಟರ್ ನೀಡಿದ ದೂರಿನ ಮೇರೆಗೆ ಪರಮ್ಬಿರ್ ಸಿಂಗ್ ವಿರುದ್ಧ ದೌರ್ಜನ್ಯ ಕಾಯ್ದೆಯಡಿಯೂ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ:Mobile ಗೇಮ್ ಆಡ್ತಿದ್ದವನ ಮೇಲೆ ಗಾಂಜಾ ಕೇಸ್: ಇನ್ಸ್ಪೆಕ್ಟರ್, PSI, ಕಾನ್ಸ್ಟೇಬಲ್ಗೆ ಅಮಾನತು ಶಿಕ್ಷೆ
ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧ ತಿಂಗಳಿಗೆ 100 ಕೋಟಿ ರೂಪಾಯಿ ವಸೂಲಿ ಆರೋಪ ಮಾಡಿದ್ದ ಪರಮ್ಬಿರ್ಸಿಂಗ್ಗೆ ಮತ್ತೊಂದು ಹಿನ್ನಡೆಯಾಗಿದೆ.