ಮನೇಂದ್ರಗಢ ಚಿರ್ಮಿರಿ ಭರತ್‌ಪುರ (ಛತ್ತೀಸ್‌ಗಢ): ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಹಾಗೂ ಅಪರಾಧ ತಡೆ, ಅಪರಾಧಿಗಳನ್ನು ಬಂಧಿಸುವುದು ಪೊಲೀಸರ ಕೆಲಸ. ಆದರೆ ಛತ್ತೀಸ್ಗಢದಲ್ಲಿ ಠಾಣೆಯೊಂದರಲ್ಲಿ ಪೊಲೀಸರು ಇನ್ನೊಂದು ಹೆಜ್ಜೆ ಮುಂದೆ ಹೋಗಿ ಎಮ್ಮೆಗಳನ್ನು ಆರೈಕೆ ಮಾಡುವ ಜವಾಬ್ದಾರಿ ನಿರ್ವಹಿಸಬೇಕಾಗಿದೆ.
ಹೌದು.. ಸರ್ಕಾರವೇನೂ ಆದೇಶ ಮಾಡಿಲ್ಲ, ಆದರೆ ಪೊಲೀಸರು ಅಪರಾಧಿಗಳನ್ನು ಬಂಧಿಸಿದ್ದ ತಪ್ಪಿಗೆ ಎಮ್ಮೆಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಹೊರಬೇಕಾಗಿದೆ. ಮನೇಂದ್ರಗಢ ಚಿರ್ಮಿರಿ ಭರತ್‌ಪುರದ ಪೊಂಡಿ ಪೊಲೀಸ್ ಠಾಣೆಯ ನಾಗ್ಪುರ ಹೆದ್ದಾರಿ ಪೊಲೀಸರು ಐದು ದಿನಗಳ ಹಿಂದೆ ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಐದು ಎಮ್ಮೆಗಳನ್ನು ವಶಕ್ಕೆ ಪಡೆದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಆದರೆ ಇದೀಗ ಐದು ಎಮ್ಮೆಗಳು ನಿತ್ಯ ಅವುಗಳನ್ನು ನೋಡಿಕೊಳ್ಳುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿವೆ.
ಛತ್ತೀಸ್‌ಗಢ ರಾಜ್ಯದ ಹೊಸ ಜಿಲ್ಲೆಗಳಲ್ಲಿ ಪೊಲೀಸರ ಕೊರತೆ ನಡುವೆಯೂ ಐದು ಎಮ್ಮೆಗಳನ್ನು ನೋಡಿಕೊಳ್ಳುವ ಕೆಲಸಕ್ಕೆ ಒಬ್ಬ ಪೊಲೀಸ್ ಕಾನ್ಸ್ಟೇಬಲ್ ನಿಯೋಜಿಸಲಾಗಿದೆ. ಅವರು ಎಮ್ಮೆಗಳಿಗೆ ನೀರು ಕುಡಿಸುವುದು ಮತ್ತು ಕೆಲವೊಮ್ಮೆ ಮೇವಿನ ವ್ಯವಸ್ಥೆ ಮಾಡುತ್ತಾರೆ. ಮೇವಿನ ಕೊರತೆಯುಂಟಾದಾಗ ಅವುಗಳನ್ನು ಬೇರೆ ಕಡೆ ವ್ಯವಸ್ಥೆ ಮಾಡಿ ಎಮ್ಮೆಗಳಿಗೆ ತರಿಸುತ್ತಾರೆ. ಅಂತೂ ಠಾಣೆಯ ಬಿಡಾರದಲ್ಲಿ ಎಮ್ಮೆ ಸಾಕುತ್ತಿರುವ ಈ ಪರಿ ಅವರನ್ನು ಹೈರಾಣಾಗಿಸಿದೆ.
ಅಕ್ರಮ ಸಾಗಣೆ ತಡೆದು ಐದು ಎಮ್ಮೆ ವಶ:ಐದು ದಿನಗಳ ಹಿಂದೆ ಎಮ್ಮೆಗಳನ್ನು ಟ್ರಕ್‌ನಲ್ಲಿ ತುಂಬಿಕೊಂಡು ಕಸಾಯಿಖಾನೆಗೆ ಸಾಗಿಸುತ್ತಿದ್ದ ಆರೋಪಿಗಳನ್ನು ನಾಗಪುರ ಪೊಲೀಸ್ ಹೊರ ಠಾಣೆ ಪೊಲೀಸರ ತಂಡ ಸರ್ಭೋಕಾ ತಿರಾಹೆ ಬಳಿ ತಡೆದು, ಜಾನುವಾರು ಸಹಿತ ವಾಹನವನ್ನು ವಶಕ್ಕೆ ಪಡೆದಿದ್ದರು. ಆರೋಪಿಗಳಿಗೆ ವಾಹನದಲ್ಲಿ ತುಂಬಿದ ದನಗಳ ಬಗ್ಗೆ ದಾಖಲೆಗಳನ್ನು ನೀಡುವಂತೆ ಕೇಳಿದಾಗ, ಬಂಧಿತರು ಯಾವುದನ್ನೂ ಹಾಜರುಪಡಿಸಲು ವಿಫಲರಾಗಿದ್ದರು. ಆರೋಪಿಗಳನ್ನು ಬಂಧಿಸಿದ ಪೊಲೀಸರು, ಪ್ರಾಣಿ ಹಿಂಸೆ ಮತ್ತು ಪ್ರಾಣಿ ಪರೀಕ್ಷೆ ಕಾಯ್ದೆಯಡಿ ಪ್ರಕರಣ ದಾಖಲಿಸಿ ಅವರ ಬಳಿಯಿದ್ದ ಐದು ಎಮ್ಮೆಗಳನ್ನು ವಶಪಡಿಸಿಕೊಳ್ಳಲಾಗಿತ್ತು.