ಕೈಮೂರ್/ಬಿಹಾರ್: ಮೇಯುವಾಗ ಎಮ್ಮೆಯ ಬಾಯಲ್ಲಿ ಬಾಂಬ್ ಸ್ಫೋಟಗೊಂಡು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೈಮೂರ್ನ ಚೈನ್‌ಪುರ್ ಪೊಲೀಸ್ ಠಾಣಾ ವ್ಯಾಪ್ತಿಯ ಸರಯ್ಯ ಅರಣ್ಯದಲ್ಲಿ ನಡೆದಿದೆ.
ಎಂದಿನಂತೆ ಮಾಲೀಕ ಅರಣ್ಯದಲ್ಲಿ ಎಮ್ಮೆಯನ್ನು ಮೇಯಲು ಬಿಟ್ಟಾಗ ಘಟನೆ ನಡೆದಿದೆ. ಅರಣ್ಯದಲ್ಲಿನ ಆನೆ, ಜಿಂಕೆ, ಸಾರಂಗ ದಂತಹ ಪ್ರಾಣಿಗಳನ್ನು ಕೊಂದು ಅವುಗಳ ಚರ್ಮ, ದಂತ ಮಾರುವ ಉದ್ದೇಶದಿಂದ ಕಿಡಿಗೇಡಿಗಳು ಹುಲ್ಲಿನಲ್ಲಿ ಬಾಂಬ್ ಅಡಗಿಸಿಟ್ಟಿದ್ದರು. ಮೇಯುವಾಗ ಎಮ್ಮೆ ಹುಲ್ಲಿನ ಜೊತೆ ಬಾಂಬ್ನ್ನು ತಿಂದಿದ್ದು, ಆಗ ಅದು ಸ್ಫೋಟಗೊಂಡಿದೆ. ಬಾಂಬ್ ಸ್ಪೋಟದಿಂದ ಎಮ್ಮೆಯ ಬಾಯಿ, ಹಲ್ಲು, ದವಡೆ ಸೀಳಿ ಹೋಗಿದೆ.