ನವದೆಹಲಿ:ಇಂದಿನಿಂದ ಸಂಸತ್ ಮುಂಗಡಪತ್ರದ ಅಧಿವೇಶನ ಆರಂಭವಾಗಲಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸಂಸತ್ ಉಭಯ ಸದನಗಳ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದಾರೆ.
ಇಂದಿನಿಂದ ಕೇಂದ್ರ ಬಜೆಟ್ ಕಲಾಪ: ಜಂಟಿ ಅಧಿವೇಶನ ಉದ್ಧೇಶಿಸಿ ರಾಷ್ಟ್ರಪತಿ ಭಾಷಣ - ಕೇಂದ್ರ ಬಜೆಟ್ ಅಧಿವೇಶನ
ಇಂದಿನಿಂದ ಕೇಂದ್ರ ಬಜೆಟ್ ಅಧಿವೇಶನ ಆರಂಭವಾಗೊಳ್ಳಲಿದೆ. ಸಂಸತ್ ಅಧಿವೇಶನವು ಎರಡು ಹಂತಗಳಲ್ಲಿ ನಡೆಯಲಿದ್ದು, ಮೊದಲ ಹಂತವು ಇಂದಿನಿಂದ ಫೆಬ್ರವರಿ 15ರವರೆಗೆ ಇರಲಿದೆ.
ದೇಶದ ಸಂಸತ್ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಈ ಬಾರಿಗೆ ಕಾಗದರಹಿತ ಮುಂಗಡಪತ್ರ ಮಂಡನೆಯಾಗುತ್ತಿದೆ. ಫೆ. 1ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2021-22ರ ಬಜೆಟ್ ಮಂಡಿಸಲಿದ್ದಾರೆ.
ಕೋವಿಡ್-19 ಹಿನ್ನೆಲೆಯಲ್ಲಿ ರಾಜ್ಯಸಭಾ ಕಲಾಪ ಪ್ರತಿದಿನ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಹಾಗೂ ಲೋಕಸಭೆಯ ಕಾರ್ಯಕಲಾಪ ಸಂಜೆ 4 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ನಡೆಯಲಿದೆ. ಸಂಸತ್ ಅದಿವೇಶನವು ಎರಡು ಹಂತಗಳಲ್ಲಿ ನಡೆಯಲಿದ್ದು, ಮೊದಲ ಹಂತವು ಇಂದಿನಿಂದ ಫೆಬ್ರವರಿ 15ರವರೆಗೆ ಇರಲಿದೆ. ಎರಡನೇ ಹಂತದ ಅಧಿವೇಶನವು ಮಾರ್ಚ್ 8ರಿಂದ ಏ. 8ರವರೆಗೆ ನಡೆಯುತ್ತದೆ.