ನವದೆಹಲಿ: ಈ ದಶಕದ ಮೊದಲ ಅಧಿವೇಶನವನ್ನು ಪ್ರಾರಂಭವಾಗುತ್ತಿದ್ದು, ಭಾರತದ ಉಜ್ವಲ ಭವಿಷ್ಯಕ್ಕಾಗಿ ಈ ದಶಕ ಬಹಳ ಮುಖ್ಯವಾಗಿದೆ. ಸ್ವಾತಂತ್ರ್ಯ ಹೋರಾಟಗಾರರು ಕಂಡ ಕನಸುಗಳನ್ನು ಈಡೇರಿಸಲು ರಾಷ್ಟ್ರದ ಮುಂದೆ ಒಂದು ಸುವರ್ಣಾವಕಾಶ ಬಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಬಜೆಟ್ ಅಧಿವೇಶನ ಆರಂಭಕ್ಕೂ ಮುನ್ನ ಸಂಸತ್ತಿನ ಎದುರು ಮಾಧ್ಯಮಗಳೊಂದಿಗೆ ಮಾತನಾಡಿದ ಪಿಎಂ ಮೋದಿ, ಈ ದಶಕವನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು. ಇದನ್ನು ಗಮನದಲ್ಲಿಟ್ಟುಕೊಂಡು ಅಧಿವೇಶನದಲ್ಲಿ ಚರ್ಚೆಗಳು ನಡೆಯಬೇಕು. ಇದನ್ನೇ ರಾಷ್ಟ್ರವು ನಿರೀಕ್ಷಿಸುತ್ತದೆ. ಜನರ ಆಕಾಂಕ್ಷೆಗಳ ಈಡೇರಿಸಲು ನಮ್ಮ ಕೊಡುಗೆ ನೀಡುವಲ್ಲಿ ನಾವು ಹಿಂದುಳಿಯುವುದಿಲ್ಲ ಎಂದು ನಾನು ನಂಬುತ್ತೇನೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು.