ಕರ್ನಾಟಕ

karnataka

ETV Bharat / bharat

ಅದು Bydget ಅಲ್ಲ 'Budget', rely ಅಲ್ಲ 'reply': ಶಶಿ ತರೂರ್‌ ಕಾಲೆಳೆದ ಕೇಂದ್ರ ಸಚಿವ ಅಠಾವಳೆ - Congress MP Shashi Tharoor tweet

2022-23 ಸಾಲಿನ ಬಜೆಟ್ ಕುರಿತು ಕಾಂಗ್ರೆಸ್ ಸಂಸದ ಶಶಿ ತರೂರ್ ಟ್ವೀಟ್​ ಮಾಡಿರುವ ಪೋಸ್ಟ್​ನಲ್ಲಿರುವ ಅಕ್ಷರ ದೋಷವನ್ನು ಹುಡುಕಿ ತೋರಿಸುವ ಮೂಲಕ ಕೇಂದ್ರ ಸಚಿವ ರಾಮದಾಸ್ ಅಠಾವಳೆ ತಿರುವನಂತಪುರಂ ಸಂಸದರ ಕಾಲೆಳೆದಿದ್ದಾರೆ.

ರಾಮದಾಸ್ ಅಠಾವಳೆ
ರಾಮದಾಸ್ ಅಠಾವಳೆ

By

Published : Feb 11, 2022, 9:47 AM IST

ನವದೆಹಲಿ: ಕಾಂಗ್ರೆಸ್ ಸಂಸದ ಶಶಿ ತರೂರ್ ಟ್ವಿಟರ್‌ ಪೋಸ್ಟ್​ನಲ್ಲಿರುವ ತಪ್ಪುಗಳನ್ನು ಹುಡುಕಿ ತೋರಿಸುವ ಕೆಲಸವನ್ನು ಕೇಂದ್ರ ಸಚಿವ ರಾಮದಾಸ್ ಅಠಾವಳೆ ಮಾಡಿದ್ದಾರೆ. ಜೊತೆಗೆ, ತಿರುವನಂತಪುರಂ ಸಂಸದರನ್ನು ಶಾಲೆಗೆ ಸೇರಿಸುವ ಅಗತ್ಯವಿದೆ ಎಂದು ಕಾಲೆಳೆದಿದ್ದಾರೆ.

ಕೇಂದ್ರ ಬಜೆಟ್​ ಕುರಿತು ಶಶಿ ತರೂರ್ ಟ್ವೀಟ್​ ಮಾಡಿದ ಪೋಸ್ಟ್​ ಅನ್ನು ಮರು ಪೋಸ್ಟ್​​ ಮಾಡಿರುವ ಸಚಿವ ಅಠಾವಳೆ, ಶಶಿ ತರೂರ್ ಅವರೇ ಅನಗತ್ಯ ಹೇಳಿಕೆಗಳನ್ನು ನೀಡುವಾಗ ತಪ್ಪುಗಳಾಗುವುದು ಸಹಜ. ಬೈಜೆಟ್ ಅಲ್ಲ, ಅದು ಬಜೆಟ್. ರಿಲೈ ಅಲ್ಲ ರಿಪ್ಲೈ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ.

ಇದಕ್ಕೆ ಟ್ವೀಟ್ ಮೂಲಕವೇ ತಿರುಗೇಟು ನೀಡಿರುವ ಶಶಿ ತರೂರ್,​ ನಾನು ಸರಿಪಡಿಸಿಕೊಂಡಿದ್ದೇನೆ ರಾಮದಾಸ್ ಜೀ. ಅಸಡ್ಡೆಯಿಂದ ಟೈಪ್ ಮಾಡುವುದು ಕೆಟ್ಟ ಇಂಗ್ಲಿಷ್‌ಗಿಂತ ದೊಡ್ಡ ಪಾಪ. ನಿಮ್ಮ ಟ್ಯೂಷನ್‌ನಿಂದ ಪ್ರಯೋಜನ ಪಡೆದವರು ಜೆಎನ್‌ಯುನಲ್ಲಿ ಯಾರಾದರೂ ಇರಬಹುದು ಎಂದು ತಮ್ಮದೇ ಶೈಲಿಯಲ್ಲಿ ಕಾಲೆಳೆದಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2022-23 ಸಾಲಿನ ಬಜೆಟ್​ ಅತ್ಯಂತ ನಿರಾಶಾದಾಯಕವಾಗಿದೆ, ಇದು ಒದ್ದೆಯಾದ ಸ್ಕ್ವಿಬ್. ಕೋವಿಡ್​ನಿಂದ ಜನರು ತತ್ತರಿಸಿದ್ದು, ನಾವು ಹಣದುಬ್ಬರವನ್ನು ಎದುರಿಸುತ್ತಿದ್ದೇವೆ. ಬಜೆಟ್​ನಲ್ಲಿ ಮಧ್ಯಮ ವರ್ಗದವರಿಗೆ ಯಾವುದೇ ತೆರಿಗೆ ವಿನಾಯಿತಿ ನೀಡಿಲ್ಲ. ಈ ಬಜೆಟ್ ಅಚ್ಛೇ ದಿನ್ ಎಂಬ ಮರೀಚಿಕೆಯನ್ನು ಇನ್ನಷ್ಟು ದೂರ ತಳ್ಳುವಂತಿದೆ. ಸೀತಾರಾಮನ್ ಬಜೆಟ್​ ಮಂಡಿಸುವಾಗ ರಾಮದಾಸ್ ಅಠವಾಳೆ ಅವರ ಮುಖದಲ್ಲಿನ ದಿಗ್ಭ್ರಮೆ ಮತ್ತು ಅಭಿವ್ಯಕ್ತಿಯೇ ಎಲ್ಲವನ್ನೂ ಹೇಳುತ್ತಿದೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಬೇಸರ ವ್ಯಕ್ತಪಡಿಸಿದ್ದರು.

ABOUT THE AUTHOR

...view details