ಕರ್ನಾಟಕ

karnataka

ETV Bharat / bharat

ಮೋದಿಯವರ ದೂರದೃಷ್ಟಿಯ ಬಜೆಟ್-ನಡ್ಡಾ; ವಿಧಾನಸಭಾ ಚುನಾವಣೆಗಳೇ ಟಾರ್ಗೆಟ್- ಖರ್ಗೆ - Bjp president JP Nadda

ಕೇಂದ್ರ ಸರ್ಕಾರದ ಬಜೆಟ್‌ ಬಗ್ಗೆ ಯಾರು, ಏನೆಂದರು?

political-leaders-reactions-on-union-budget-2023
ಮೋದಿಯವರ ದೂರದೃಷ್ಟಿಯ ಆಯವ್ಯಯ - ನಡ್ಡಾ: ವಿಧಾನಸಭಾ ಚುನಾವಣೆಗಳೇ ಬಜೆಟ್​ನ ಟಾರ್ಗೆಟ್ ಎಂದ ಖರ್ಗೆ

By

Published : Feb 1, 2023, 4:01 PM IST

ನವದೆಹಲಿ: ಕೇಂದ್ರ ಸರ್ಕಾರದ ಬಜೆಟ್​ ಅಂಶಗಳ​ ಬಗ್ಗೆ ಕೇಂದ್ರ ಸಚಿವರು, ಆಡಳಿತಾರೂಢ ಬಿಜೆಪಿ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಹಿರಿಯ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿ, ಸ್ವಾಗತಿಸಿದ್ದಾರೆ. ಮತ್ತೊಂದೆಡೆ, ಕಾಂಗ್ರೆಸ್​ ಸೇರಿದಂತೆ ಪ್ರತಿಪಕ್ಷಗಳ ನಾಯಕರು, ಮುಖಂಡರು ಬಜೆಟ್​ ಟೀಕಿಸಿದ್ದು, ಜನ ಸಾಮಾನ್ಯರಿಗೆ ಯಾವುದೇ ಅನುಕೂಲವಿಲ್ಲ ಎಂದಿದ್ದಾರೆ.

ಆಡಳಿತ ಪಕ್ಷದವರು ಹೇಳಿದ್ದು..: "ಅಮೃತ ಕಾಲದ ಮೊದಲ ಬಜೆಟ್ ಪ್ರಧಾನಿ ಮೋದಿಯವರ ದೂರದೃಷ್ಟಿ ಮತ್ತವರ ನಾಯಕತ್ವವನ್ನು ನಿರೂಪಿಸುತ್ತದೆ. ಈ ಬಜೆಟ್ ಮೂಲಕ ಸ್ಥಿರ ಆರ್ಥಿಕತೆ, ಯುವ ಭಾರತದ ಶಕ್ತಿ ಮತ್ತು ಬಹುಸಂಸ್ಕೃತಿಯ ನೀತಿಗಳನ್ನು ಎತ್ತಿ ತೋರಿಸಲಾಗಿದೆ. 'ಪಿರಮಿಡ್‌'ನ ಕೆಳಸ್ತರದಲ್ಲಿರುವ ಜನರಿಗಾಗಿ ಯೋಜನೆಗಳನ್ನು ರೂಪಿಸಿರುವುದು ಪ್ರಧಾನಿಯವರ ವಿಶಾಲ ದೃಷ್ಟಿಯನ್ನು ವ್ಯಕ್ತಪಡಿಸುತ್ತದೆ" ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ತಿಳಿಸಿದ್ದಾರೆ.

"ಕೇಂದ್ರ ಸರ್ಕಾರದ ಬಜೆಟ್ ದೇಶದ ಪ್ರತಿಯೊಂದು ಕ್ಷೇತ್ರ ಹಾಗೂ ಪ್ರತಿಯೊಂದು ರಾಜ್ಯಗಳ ಕಲ್ಯಾಣಕ್ಕಾಗಿದೆ. ಇದು ಬಡವರು, ಮಹಿಳೆಯರು ಮತ್ತು ಮಧ್ಯಮ ವರ್ಗದ ಜನರ ಅನುಕೂಲಕ್ಕಾಗಿ, ದುರ್ಬಲ ವರ್ಗಗಳು ಮತ್ತು ಯುವಕರನ್ನು ಸಬಲೀಕರಣಗೊಳಿಸುವ ಅಂಶಗಳನ್ನು ಹೊಂದಿದೆ" ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.

"ದೇಶದ ಜನರ ಮುಂದೆ ಅದ್ಭುತವಾದ ಬಜೆಟ್ ಮಂಡಿಸಿದ್ದಕ್ಕಾಗಿ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನೂ ನಾನು ಅಭಿನಂದಿಸುತ್ತೇನೆ. ಈ ಬಜೆಟ್ ದೇಶದ ಜನತೆ ಹಾಗೂ ಜಗತ್ತಿನ ಜನರ ನಿರೀಕ್ಷೆಗಳನ್ನು ಈಡೇರಿಸಲಿದೆ" ಎಂದು ಉತ್ತರಾಖಂಡ್ ಸಿಎಂ ಪುಷ್ಕರ್ ಸಿಂಗ್​ ಧಾಮಿ ಪ್ರತಿಕ್ರಿಯಿಸಿದ್ದಾರೆ.

ಪ್ರತಿಪಕ್ಷಗಳ ನಾಯಕರು ಹೇಳಿದ್ದೇನು?: "ಮುಂಬರುವ ಮೂರ್ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮೋದಿ ಸರ್ಕಾರ ಬಜೆಟ್ ಮಂಡಿಸಿದೆ. ಬಡವರಿಗೆ ಅನುಕೂಲವಾಗುವ ಮತ್ತು ಹಣದುಬ್ಬರವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಏನೂ ಇಲ್ಲ. ಸರ್ಕಾರಿ ಖಾಲಿ ಹುದ್ದೆಗಳ ಭರ್ತಿ ಮತ್ತು ನರೇಗಾ ಯೋಜನೆ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ" ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.

"ಕೇಂದ್ರದ ಬಜೆಟ್ ನಿರುದ್ಯೋಗ ಮತ್ತು ಬೆಲೆ ಏರಿಕೆ ಸೇರಿದಂತೆ ದೇಶದ ಜನತೆಯ ನಿಜವಾದ ಭಾವನೆ ಬಗ್ಗೆ ಪ್ರಸ್ತಾಪಿಸಿಲ್ಲ. ಇದು ಈ ಹಿಂದೆ ಅಲಂಕಾರಿಕ ಪ್ರಕಟಣೆಗಳನ್ನು ಮಾತ್ರ ಹೊಂದಿದೆ. ಆದರೆ, ಅವುಗಳ ಅನುಷ್ಠಾನದ ಏನಾಗಿದೆ ಎಂದು ತಿಳಿಸಿಲ್ಲ. ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಿಂದ ಕೇವಲ ವಿಮಾ ಕಂಪನಿಗಳಿಗೆ ಲಾಭವಾಗಿದೆ, ನಿಜವಾದ ರೈತರಿಗೆ ಯಾವುದೇ ಲಾಭವಾಗಿಲ್ಲ" ಎಂದು ಕಾಂಗ್ರೆಸ್​ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ದೂರಿದ್ದಾರೆ.

ಕೆಲವು ಉತ್ತಮ ವಿಷಯಗಳಿವೆ- ತರೂರ್: "ಇಂದಿನ ಬಜೆಟ್​ನಲ್ಲಿ ಕೆಲವು ಉತ್ತಮ ವಿಷಯಗಳಿವೆ. ಆದರೆ ನರೇಗಾ, ಬಡ ಗ್ರಾಮೀಣ ಕಾರ್ಮಿಕರು, ಉದ್ಯೋಗ ಮತ್ತು ಹಣದುಬ್ಬರದ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಕೆಲವು ಮೂಲಭೂತ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ" ಎಂದು ಕಾಂಗ್ರೆಸ್​ ನಾಯಕ, ಸಂಸದ ಶಶಿ ತರೂರ್ ಹೇಳಿದ್ದಾರೆ.

"2023ನೇ ಸಾಲಿನ ಬಜೆಟ್​ನಲ್ಲಿ ಏನೂ ಇಲ್ಲ. ಇದು 'ಸಪ್ನೋ ಕಾ ಸೌದಾಗರ್' ಇದ್ದಂದೆ. ಕನಸು ಕಂಡ ನಂತರ ಎಚ್ಚರವಾದಾಗ ಯಾವುದೂ ನಿಜವಾಗುವುದಿಲ್ಲ. ಅಲ್ಲದೆ, ಹಣದುಬ್ಬರ ಮತ್ತು ನಿರುದ್ಯೋಗವನ್ನು ಹೇಗೆ ನಿಯಂತ್ರಿಸುವುದು ಎಂಬುದರ ಕುರಿತು ಬಜೆಟ್​ನಲ್ಲಿ ಏನನ್ನೂ ಉಲ್ಲೇಖಿಸಿಲ್ಲ" ಎಂದು ಜೆಡಿಯು ಸಂಸದ ರಾಜೀವ್ ರಂಜನ್ ಕಟು ಟೀಕೆ ಮಾಡಿದ್ದಾರೆ.

ಇದನ್ನೂ ಓದಿ:ಅಮೃತ ಕಾಲದ ಮೊದಲ ಬಜೆಟ್ ಮೂಲಕ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣಕ್ಕೆ ಭದ್ರ ಅಡಿಪಾಯ: ಮೋದಿ

ABOUT THE AUTHOR

...view details