ಅಹಮದಾಬಾದ್(ಗುಜರಾತ್): ಗಾಯಕಿಯ ಹಾಡಿಗೆ ಫುಲ್ ಫಿದಾ ಆದ ಅಭಿಮಾನಿಯೊಬ್ಬ ಬಕೆಟ್‌ಗಟ್ಟಲೆ ನೋಟು ಸುರಿದಿರುವ ಘಟನೆ ನಡೆಯಿತು. ಈ ಸಂದರ್ಭದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಗುಜರಾತ್ನ ಜನಪ್ರಿಯ ಜಾನಪದ ಗಾಯಕಿ ಊರ್ವಶಿ ರಾಡಿಯಾ ವೇದಿಕೆಯೊಂದರ ಮೇಲೆ ಹಾಡುತ್ತಿದ್ದಾಗ ಅಲ್ಲಿಗೆ ಬಂದ ಅಭಿಮಾನಿಯೊಬ್ಬ ಬಕೆಟ್ ತುಂಬಾ ನೋಟುಗಳನ್ನು ತಂದು ಅವರ ಮೈಮೇಲೆ ಸುರಿದೇ ಬಿಟ್ಟ.
ಊರ್ವಶಿ ರಾಡಿಯಾ (Urvashi Raddiya) ಗುಜರಾತ್ನಲ್ಲಿ ಜನಪ್ರಿಯ ಜನಪದ ಗಾಯಕಿ. ಅವರ ಕಂಠಸಿರಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ವೇದಿಕೆಯೊಂದರ ಮೇಲೆ ಊರ್ವಶಿ ಭಜನೆ ಹಾಡಲು ಪ್ರಾರಂಭಿಸುತ್ತಿದ್ದಂತೆ ಸ್ಥಳಕ್ಕೆ ಬಂದ ಈ ಅಭಿಮಾನಿ ಸಾವಿರಾರು ನೋಟುಗಳನ್ನು ಸುರಿದಿದ್ದಾನೆ. ಈ ವೇಳೆ ಗಾಯಕಿ ಹಣಗಳ ನೋಟುಗಳಿಂದಲೇ ಸಂಪೂರ್ಣವಾಗಿ ಮುಚ್ಚಿ ಹೋದರು.
ನವೆಂಬರ್ 15ರಂದು ಮದುವೆ ಸಮಾರಂಭದ ಪ್ರಯುಕ್ತ ಊರ್ವಶಿ ಅಹಮದಾಬಾದ್ನಲ್ಲಿ ಆಯೋಜನೆಯಾಗಿದ್ದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಹಾಡುತ್ತಿದ್ದಾಗ ಘಟನೆ ನಡೆಯಿತು.
ಇದನ್ನೂ ಓದಿ:ಹೋರಾಟದಲ್ಲಿ ಪ್ರಾಣ ತೆತ್ತ 700ಕ್ಕೂ ಅಧಿಕ ರೈತ ಕುಟುಂಬಗಳ ತ್ಯಾಗ-ಬಲಿದಾನಕ್ಕೆ ಸಿಕ್ಕ ಫಲ : ಸೋನಿಯಾ