ಕರ್ನಾಟಕ

karnataka

ಫಲಿತಾಂಶ ಕೇಳಿ BSP ಕಾರ್ಯಕರ್ತನಿಗೆ ಹೃದಯಾಘಾತ..ಮತ ಎಣಿಕೆ ಕೇಂದ್ರದಲ್ಲೇ ಘಟನೆ

By

Published : Mar 10, 2022, 12:55 PM IST

ಮತ ಕೇಂದ್ರದಲ್ಲಿ ಫಲಿತಾಂಶ ಕೇಳುತ್ತಿದ್ದಂತೆ ಬಹುಜನ ಸಮಾಜವಾದಿ ಪಕ್ಷದ ಕಾರ್ಯಕರ್ತನೊಬ್ಬನಿಗೆ ಹೃದಯಾಘಾತವಾಗಿದ್ದು, ತಕ್ಷಣವೇ ಆತನನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

BSP WORKER HEART ATTACK IN GHAZIABAD
BSP WORKER HEART ATTACK IN GHAZIABAD

ಗಾಜಿಯಾಬಾದ್​(ಉತ್ತರ ಪ್ರದೇಶ):2024ರ ಲೋಕಸಭೆ ಚುನಾವಣೆಗೆ ದಿಕ್ಸೂಚಿಯಾಗಿರುವ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಬಹಿರಂಗಗೊಳ್ಳುತ್ತಿದ್ದು, ಉತ್ತರ ಪ್ರದೇಶದಲ್ಲಿ ಮತ್ತೊಂದು ಅವಧಿಗೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವುದು ಖಚಿತಗೊಂಡಿದೆ. ಇದರ ಮಧ್ಯೆ ಗಾಜಿಯಾಬಾದ್​​​ ನಗರ ವಿಧಾನಸಭೆ ಕ್ಷೇತ್ರದ ಮತ ಎಣಿಕೆ ಕೇಂದ್ರದಲ್ಲಿ ಫಲಿತಾಂಶ ಕೇಳಿ ಬಿಎಸ್​ಪಿ ಕಾರ್ಯಕರ್ತನಿಗೆ ಹೃದಯಾಘಾತವಾಗಿದೆ. ಮತ ಎಣಿಕೆ ವೇಳೆ ಬಹುಜನ ಸಮಾಜವಾದಿ ಪಕ್ಷದ ಕಾರ್ಯಕರ್ತನಿಗೆ ಹೃದಯಾಘಾತವಾಗಿದ್ದು, ತಕ್ಷಣವೇ ಆತನನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಫಲಿತಾಂಶ ಕೇಳಿ BSP ಕಾರ್ಯಕರ್ತನಿಗೆ ಹೃದಯಾಘಾತ... ಮತ ಎಣಿಕೆ ಕೇಂದ್ರದಲ್ಲೇ ಘಟನೆ

ಇದನ್ನೂ ಓದಿರಿ:ಉತ್ತರ ಪ್ರದೇಶದಲ್ಲಿ ಯೋಗಿ ಮೋಡಿ.. ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ

ಗಾಜಿಯಾಬಾದ್​ ನಗರ ವಿಧಾನಸಭೆ ಕ್ಷೇತ್ರದಲ್ಲಿ ಬಿಎಸ್​ಪಿ ಅಭ್ಯರ್ಥಿಯಾಗಿ ಕೆಕೆ ಶುಕ್ಲಾ ಕಣಕ್ಕಿಳಿದಿದ್ದು, ಅವರ ಪರವಾಗಿ ಮತಕೇಂದ್ರಕ್ಕೆ ಅಂಕಿತ್ ಯಾದವ್​ ಆಗಮಿಸಿದ್ದರು. ಫಲಿತಾಂಶ ಕೇಳುತ್ತಿದ್ದಂತೆ ಅವರಿಗೆ ಹೃದಯಾಘಾತವಾಗಿದ್ದು, ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾರೆ. ಇದರ ಬೆನ್ನಲ್ಲೇ ಇತರ ಕಾರ್ಯಕರ್ತರು ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.

403 ಕ್ಷೇತ್ರಗಳ ಉತ್ತರ ಪ್ರದೇಶದಲ್ಲಿ ಬಿಜೆಪಿ 264 ಸ್ಥಾನಗಳಲ್ಲಿ ಮುನ್ನಡೆಯಲಿದ್ದು, ಸಮಾಜವಾದಿ ಪಕ್ಷ 128 ಹಾಗೂ ಬಿಎಸ್​ಪಿ ಕೇವಲ 4 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ABOUT THE AUTHOR

...view details