ಕರ್ನಾಟಕ

karnataka

ETV Bharat / bharat

ಲೋಕಸಭೆ ಚುನಾವಣೆಯಲ್ಲಿ ಏಕಾಂಗಿ ಸ್ಪರ್ಧೆ, ಯಾವುದೇ ಮೈತ್ರಿಕೂಟ ಸೇರಲ್ಲ: ಮಾಯಾವತಿ

ಉತ್ತರ ಪ್ರದೇಶದ ಮಾಜಿ ಸಿಎಂ, ಬಿಎಸ್​ಪಿ ನಾಯಕಿ ಮಾಯಾವತಿ ಅವರು ತಮ್ಮ ಜನ್ಮದಿನದಂದು ದೊಡ್ಡ ಘೋಷಣೆ ಮಾಡಿದ್ದಾರೆ.

ಮಾಯಾವತಿ
ಮಾಯಾವತಿ

By PTI

Published : Jan 15, 2024, 12:22 PM IST

ಲಖನೌ(ಉತ್ತರ ಪ್ರದೇಶ):ಉತ್ತರ ಪ್ರದೇಶದ ಮಾಜಿ ಸಿಎಂ ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷ (ಬಿಎಸ್​ಪಿ) ವಿಪಕ್ಷಗಳ I.N.D.I.A ಕೂಟ ಸೇರುವ ನಿರೀಕ್ಷೆ ಹುಸಿಯಾಗಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿಯೇ ಕಣಕ್ಕಿಳಿಯಲಾಗುವುದು ಎಂದು ಅವರು ಸೋಮವಾರ ಘೋಷಿಸಿದರು.

ಮಾಯಾವತಿ ತಮ್ಮ ಜನ್ಮದಿನವಾದ ಇಂದು ಬಹುದೊಡ್ಡ ಮಹತ್ವದ ಘೋಷಣೆ ಮಾಡಲಿದ್ದಾರೆ ಎಂದು ಎಲ್ಲರೂ ನಿರೀಕ್ಷೆ ಮಾಡಿದ್ದರು. ಆದರೆ, ಈ ಹಿಂದೆಯೇ ಹೇಳಿದಂತೆ ಚುನಾವಣೆಯಲ್ಲಿ ಯಾವುದೇ ಮೈತ್ರಿಯ ಜೊತೆ ಸೇರದೇ, ಏಕಾಂಗಿಯಾಗಿ ಪಕ್ಷ ಲೋಕಸಭೆಯಲ್ಲಿ ಸೆಣಸಲಿದೆ ಎಂದು ಅವರು ಪುನರುಚ್ಚರಿಸಿದರು. ಇದರಿಂದ ವಿಪಕ್ಷಗಳ ಕೂಟಕ್ಕೆ ಮತ್ತೊಂದು ಹಿನ್ನಡೆ ಉಂಟಾಗಿದೆ.

ಜನ್ಮದಿನದ ಹಿನ್ನೆಲೆಯಲ್ಲಿ ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರ ಜೊತೆ ರಾಜಧಾನಿ ಲಖನೌನಲ್ಲಿ ಕೇಕ್​ ಕತ್ತರಿಸಿದ ಬಳಿಕ ಮಾತನಾಡಿದ ಅವರು, "ನಾನು ರಾಜಕೀಯದಿಂದ ವಿರಮಿಸುವುದಿಲ್ಲ. ನಿವೃತ್ತಿಯಾಗುವ ಮಾತೇ ಇಲ್ಲ. ಚುನಾವಣೆಗಳಲ್ಲಿ ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ. ನನ್ನ ಪಕ್ಷವನ್ನು ಏಕಾಂಗಿಯಾಗಿ ಕಣದಲ್ಲಿ ಇಳಿಸುವೆ" ಎಂದು ತಮ್ಮ ನಿರ್ಧಾರ ಪ್ರಕಟಿಸಿದರು.

ಇದನ್ನೂ ಓದಿ:ವಿಪಕ್ಷಗಳ I.N.D.I.A ಕೂಟಕ್ಕೆ ಬಿಎಸ್​ಪಿ ಸೇರ್ಪಡೆ ಸಾಧ್ಯತೆ: 15 ರಂದು ಅಧಿಕೃತ ಘೋಷಣೆ?

ABOUT THE AUTHOR

...view details